ಷಷ್ಠಬ್ದಿ
ಗುಣಗಾನಕ್ಕಷ್ಟೇ ಸೀಮಿತವಾಗದೇ,
ಪ್ರಜಾತಂತ್ರ ಉಳಿಸುವ ಸಂಕಲ್ಪಕ್ಕೆ ಮುನ್ನುಡಿಯಾಗಲೀ...
ಪ್ರಜಾತಂತ್ರ ಉಳಿಸುವ ಸಂಕಲ್ಪಕ್ಕೆ ಮುನ್ನುಡಿಯಾಗಲೀ...
ಭಾರತೀಯ ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಯುವ ಸಂಸತ್ತಿನ ಕಲಾಪಕ್ಕೆ 60 ತುಂಬಿದ ಸಂಭ್ರಮದಲ್ಲಿದೆ. ದೇಶದ ಭವಿತ್ವವನ್ನು ನಿರ್ಧರಿಸುವ ಹೊಣೆಗಾರಿಕೆ ಈ ಸಂಸತ್ತಿನ ಮೇಲಿದೆ. ನಿಜವಾದ ಪ್ರಜಾಪ್ರಭುವಿನ ನೋವು-ನಲಿವುಗಳನ್ನಾಲಿಸುವ, ದೇಶದ ಉನ್ನತಿ-ಅವನತಿ, ಮಾನ-ಸಂಮಾನಗಳನ್ನು ಗಳಿಸುವ ಮತ್ತು ಅದನ್ನು ಉಳಿಸುವ ಗುರುತರ
Add caption |
ಜವಾಬ್ದಾರಿಯೂ ಪ್ರಜಾದೇಗುಲದಲ್ಲಿ ಪ್ರತಿಷ್ಠಿತಗೊಳ್ಳುವವರ ಮೇಲಿದೆ. ಆದರೆ ಇಂದು ಪ್ರಜಾದೇಗುಲ ಪಕ್ಷ ರಾಜಕೀಯದಲ್ಲಿ , ವ್ಯಕ್ತಿಗಳ ಪ್ರತಿಷ್ಠೆಯಲ್ಲಿ ನಲುಗುತ್ತಿದೆ. ಅಲ್ಲಿ ವ್ಯಕ್ತಿಕೇಂದ್ರಿತ ಚರ್ಚೆಗಳ ವೇದಿಕೆಯಾಗಿ ಭಾರತೀಯ ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಯುವ ಸಂಸತ್ತಿನ ಕಲಾಪಕ್ಕೆ 60 ತುಂಬಿದ ಸಂಭ್ರಮದಲ್ಲಿದೆ. ದೇಶದ ಭವಿತ್ವವನ್ನು ನಿರ್ಧರಿಸುವ ಹೊಣೆಗಾರಿಕೆ ಈ ಸಂಸತ್ತಿನ ಮೇಲಿದೆ. ನಿಜವಾದ ಪ್ರಜಾಪ್ರಭುವಿನ ನೋವು-ನಲಿವುಗಳನ್ನಾಲಿಸುವ, ದೇಶದ ಉನ್ನತಿ-ಅವನತಿ, ಮಾನ-ಸಂಮಾನಗಳನ್ನು ಗಳಿಸುವ ಮತ್ತು ಅದನ್ನು ಉಳಿಸುವ ಗುರುತರ ಜವಾಬ್ದಾರಿಯೂ ಪ್ರಜಾದೇಗುಲದಲ್ಲಿ ಪ್ರತಿಷ್ಠಿತಗೊಳ್ಳುವವರ ಮೇಲಿದೆ. ಆದರೆ ಇಂದು ಪ್ರಜಾದೇಗುಲ ಪಕ್ಷ ರಾಜಕೀಯದಲ್ಲಿ , ವ್ಯಕ್ತಿಗಳ ಪ್ರತಿಷ್ಠೆಯಲ್ಲಿ ನಲುಗುತ್ತಿದೆ. ಅಲ್ಲಿ ವ್ಯಕ್ತಿಕೇಂದ್ರಿತ ಚರ್ಚೆಗಳ ವೇದಿಕೆಯಾಗಿ ಜನಸಾಮಾನ್ಯ-ದೇಶದ ವಸ್ತುಸ್ಥಿತಿಯನ್ನು ಅರಿಯುವಲ್ಲಿ ಅಸಡ್ಡೆ ತೋರುತ್ತಿರುವುದನ್ನು ಇತ್ತೀಚಿನ ವಿದ್ಯಮಾನಗಳು ದೃಷ್ಟಾಂತವಾಗಿಸುತ್ತಿವೆ.
ಹಗರಣಗಳ ಚರ್ಚೆ, ರಾಜೀನಾಮೆಗಾಗಿ ಒತ್ತಡತಂತ್ರ , ಸದನದ ಬಾವಿಗಿಳಿಯುವುದು, ಕಠೋರ ಶಬ್ದಗಳ ಉವಾಚವೇ ಅತಿಯಾಗುತ್ತಿರುವುದು ಪ್ರಜಾತಂತ್ರದ ದೇಗುಲದ ಅಪವಿತ್ರತೆಯ ದ್ಯೌತಕವಾಗಿದೆ. ಕಲಾಪದ ದಿನಗಲು ಇಂದು 127ರಿಂದ ಸುಮಾರು ಅರ್ಧಕರ್ಧ(67)ಕ್ಕೆ ಬಂದು ನಿಂತಿರುವುದು ಜನಸಾಮಾನ್ಯನ ನಂಬಿಕೆಗೆ ಅಪಚಾರವೆಸಗಿರುವುದರ ಸಂಕೇತ. ರಾಜಕೀಯದಲ್ಲಿ ಅಧಿಕಾರದ ಹಪಾಹಪಿತನವೇ ಪ್ರಾಮುಖ್ಯತೆ ಪಡೆದಿರುವಾಗ ಸಂಸತ್ತು ತನ್ನ ನೈಜ ಆಶಯದೆಡೆಗೆ ಗಮನಹರಿಸಬಲ್ಲದು ಎಂಬುದು ಅಕಲ್ಪನೀಯ ಎಂದೇನಿಸುವ ಸ್ಥಿತಿ ತಲುಪಿರುವುದು ಜಗತ್ತಿನ ಅತಿದೊಡ್ಡ ಪ್ರಜಾತಂತ್ರ ದೇಶದ ದೌರ್ಬಾಗ್ಯ!.
ಷಷ್ಠಬ್ದಿಯ ಸಂಭ್ರಮ ಆಚರಣೆಗೆ, ಅದರ ಗುಣಗಾನಕ್ಕಷ್ಟೆ ಸೀಮಿತವಾಗದೆ ಪ್ರಜಾರಕ್ಷಣೆಯ ಹೋಣೆಹೊತ್ತ ಪ್ರತಿಯೊಬ್ಬ ಪ್ರಜಾಪ್ರತಿನಿಧಿಯೂ ಆತ್ಮಾವಲೋಕನ ಮಾಡಿಕೊಂಡು ಸಂವಿಧಾನದ ನೈಜ ಆಶೋತ್ತರಗಳಂತೆ ಕಾರ್ಯೊನ್ಮುಖವಾಗುವ ಸಂಕಲ್ಪ ತಳೆಯಬೇಕಾದ ಅಗತ್ಯವಿದೆ. ಇದೆ ಷಷ್ಠಬ್ದಿಗೆ ಸಲ್ಲುವ ಶ್ರೇಷ್ಠ ಗೌರವ.ಜನಸಾಮಾನ್ಯ-ದೇಶದ ವಸ್ತುಸ್ಥಿತಿಯನ್ನು ಅರಿಯುವಲ್ಲಿ ಅಸಡ್ಡೆ ತೋರುತ್ತಿರುವುದನ್ನು ಇತ್ತೀಚಿನ ವಿದ್ಯಮಾನಗಳು ದೃಷ್ಟಾಂತವಾಗಿಸುತ್ತಿವೆ.
ಹಗರಣಗಳ ಚರ್ಚೆ, ರಾಜೀನಾಮೆಗಾಗಿ ಒತ್ತಡತಂತ್ರ , ಸದನದ ಬಾವಿಗಿಳಿಯುವುದು, ಕಠೋರ ಶಬ್ದಗಳ ಉವಾಚವೇ ಅತಿಯಾಗುತ್ತಿರುವುದು ಪ್ರಜಾತಂತ್ರದ ದೇಗುಲದ ಅಪವಿತ್ರತೆಯ ದ್ಯೌತಕವಾಗಿದೆ. ಕಲಾಪದ ದಿನಗಲು ಇಂದು 127ರಿಂದ ಸುಮಾರು ಅರ್ಧಕರ್ಧ(67)ಕ್ಕೆ ಬಂದು ನಿಂತಿರುವುದು ಜನಸಾಮಾನ್ಯನ ನಂಬಿಕೆಗೆ ಅಪಚಾರವೆಸಗಿರುವುದರ ಸಂಕೇತ. ರಾಜಕೀಯದಲ್ಲಿ ಅಧಿಕಾರದ ಹಪಾಹಪಿತನವೇ ಪ್ರಾಮುಖ್ಯತೆ ಪಡೆದಿರುವಾಗ ಸಂಸತ್ತು ತನ್ನ ನೈಜ ಆಶಯದೆಡೆಗೆ ಗಮನಹರಿಸಬಲ್ಲದು ಎಂಬುದು ಅಕಲ್ಪನೀಯ ಎಂದೇನಿಸುವ ಸ್ಥಿತಿ ತಲುಪಿರುವುದು ಜಗತ್ತಿನ ಅತಿದೊಡ್ಡ ಪ್ರಜಾತಂತ್ರ ದೇಶದ ದೌರ್ಬಾಗ್ಯ!.
ಷಷ್ಠಬ್ದಿಯ ಸಂಭ್ರಮ ಆಚರಣೆಗೆ, ಅದರ ಗುಣಗಾನಕ್ಕಷ್ಟೆ ಸೀಮಿತವಾಗದೆ ಪ್ರಜಾರಕ್ಷಣೆಯ ಹೋಣೆಹೊತ್ತ ಪ್ರತಿಯೊಬ್ಬ ಪ್ರಜಾಪ್ರತಿನಿಧಿಯೂ ಆತ್ಮಾವಲೋಕನ ಮಾಡಿಕೊಂಡು ಸಂವಿಧಾನದ ನೈಜ ಆಶೋತ್ತರಗಳಂತೆ ಕಾರ್ಯೊನ್ಮುಖವಾಗುವ ಸಂಕಲ್ಪಿಸಿ ಅದರಂತೆ ನಡೆದರೆ ಅದೇ ಸಂಸತ್ತಿನ
ಷಷ್ಠಬ್ದಿಗೆ ಸಲ್ಲುವ ಶ್ರೇಷ್ಠ ಗೌರವ. ಈ ಆಲೋಚನೆ ನಮ್ಮ ನೇತಾರರಿಗೆ ಬಂದಾವೇ ಎನ್ನುವುದು- ಯಕ್ಷಪ್ರಶ್ನೆ.