ಯೋಗದಿನಾಚರಣೆ : ಒಂದು ಎಣೆಯಿಲ್ಲದ ಸಂಭ್ರಮ
2014ರ ಸೆಪ್ಟೆಂಬರ್ 27 ಒಂದು ಐತಿಹಾಸಿಕ ದಿನ - ಭಾರತೀಯರಿಗೆ ಮತ್ತು ವಿಶ್ವದ ಎಲ್ಲ ಯೋಗಾಭಿಮಾನಿಗಳಿಗೆ. ಅಂದು ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸರ್ವಸದಸ್ಯಸಭೆಯಲ್ಲಿ ಭಾರತದ ಪ್ರಾಚೀನ ಸಂಸ್ಕೃತಿಯ ಅತ್ಯಮೂಲ್ಯ ಕೊಡುಗೆ ’ಯೋಗ’ದ ಕುರಿತು ಮಾತನಾಡುತ್ತ ಪ್ರತಿ ವರ್ಷ ಜೂನ್ 21ರಂದು ’ಅಂತಾರಾಷ್ಟ್ರೀಯ ಯೋಗ ದಿನ’ ಎಂದು ಜಗತ್ತಿನ ದೇಶಗಳಿಗೆ ಆಚರಿಸುವಂತೆ ಕರೆನೀಡಿದರು. ಅಮೆರಿಕ, ಕೆನಡ, ಚೀನ ಸೇರಿದಂತೆ ಜಗತ್ತಿನ 177ಕ್ಕೂ ಹೆಚ್ಚು ದೇಶಗಳು ಮೋದಿಯವರ ಈ ಕರೆಯನ್ನು ಬೆಂಬಲಿಸಿದವು. ಪರಿಣಾಮವಾಗಿ 2014ರ ಡಿಸೆಂಬರ್ 11ರಂದು 193 ಸದಸ್ಯ ದೇಶಗಳಿರುವ ವಿಶ್ವಸಂಸ್ಥೆಯ ಸರ್ವಸದಸ್ಯಸಭೆ ಜೂನ್ 21ನ್ನು ’ಅಂತಾರಾಷ್ಟ್ರೀಯ ಯೋಗದಿನ’ವೆಂದು ಘೋಷಿಸಲು ಒಪ್ಪಿಗೆ ನೀಡಿತು. 175 ದೇಶಗಳು ಈ ಮಂಡನೆಗೆ ಸಹಪ್ರಾಯೋಜಕತ್ವವನ್ನು ವಹಿಸಿದ್ದು ಒಂದು ಅಭೂತಪೂರ್ವ ದಾಖಲೆಯಾಗಿದೆ.
ಈ ವರ್ಷ ಜೂನ್ 21ರಂದು ನಡೆದದ್ದು ಪ್ರಪ್ರಥಮ ’ಅಂತಾರಾಷ್ಟ್ರೀಯ ಯೋಗದಿನ’. ರಾಷ್ಟ್ರೋತ್ಥಾನ ಪರಿಷತ್, ಅಂದು ಬೆಳಗ್ಗೆ 10.30 ರಿಂದ, ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ’ಸಾರ್ವಜನಿಕ ಸಮಾರಂಭ ಮತ್ತು ಯೋಗಪ್ರದರ್ಶನ’ದ ಒಂದು ಅಭೂತಪೂರ್ವ ಬೃಹತ್ ಕಾರ್ಯಕ್ರಮ ಆಯೋಜಿಸಿತ್ತು. ಪರಿಷತ್‌ನ ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲ ಶ್ರೀ ವಜುಭಾಯಿ ರುದಾಭಾಯಿ ವಾಲಾ, ಕೇಂದ್ರಸರ್ಕಾರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆಯ ಸನ್ಮಾನ್ಯ ಸಚಿವ ಶ್ರೀ ಎಚ್.ಎನ್. ಅನಂತಕುಮಾರ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಸನ್ಮಾನ್ಯ ಶ್ರೀ ಮಂಗೇಶ್ ಭೇಂಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ -
- ಕಾರ್ಯಕ್ರಮ ನಿಗದಿತ ಸಮಯಕ್ಕೆ ಸರಿಯಾಗಿ ಪ್ರಾರಂಭ ಹಾಗೂ ಮುಕ್ತಾಯ.
- ಯೋಗದ ಮಹತ್ತ್ವ, ಅದರ ವಿವಿಧ ಆಯಾಮಗಳು, ಯೋಗದ ಪ್ರಾಚೀನತೆ, ಯೋಗವಿದ್ಯೆಯ ಸಮರ್ಥ ವಿಶ್ವವಿಖ್ಯಾತ ಪ್ರತಿನಿಧಿಗಳು, ಯೋಗ ಸಂಬಂಧಿತ ಮಹತ್ತ್ವದ ಕೃತಿಗಳು - ಇವೆಲ್ಲ ವಿವರಗಳನ್ನೊಳಗೊಂಡ ಒಂದು ಆಕರ್ಷಕ ಪ್ರದರ್ಶಿನಿಯನ್ನು ವ್ಯವಸ್ಥೆಗೊಳಿಸಲಾಗಿತ್ತು. ಈ ಪ್ರದರ್ಶಿನಿಯನ್ನು ಬೆಳಗ್ಗೆ ೯ ಗಂಟೆಗೆ ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆಯ ಸನ್ಮಾನ್ಯ ಸಚಿವ ಶ್ರೀ ಎಚ್.ಎನ್. ಅನಂತಕುಮಾರ್ ಉದ್ಘಾಟಿಸಿದರು.
- ಸುಮಾರು ೮,೫೦೦ ಜನರಿಂದ ೨೦ ನಿಮಿಷಗಳ ಕಾಲ ಸಾಮೂಹಿಕ ಯೋಗಪ್ರದರ್ಶನ ನಡೆಯಿತು.
- ಯೋಗದ ವಿವಿಧ ಮುಖಗಳನ್ನು ಪರಿಚಯಿಸುವ ಸ್ಮರಣಸಂಚಿಕೆ ’ಯೋಗದೀಪ್ತಿ’ಯನ್ನು ರಾಜ್ಯಪಾಲರಿಂದ ಬಿಡುಗಡೆ
- ಪರಿಷತ್‌ನ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ L.E.D. Screen ಬಳಕೆ.
- ಒಟ್ಟು 12000 ಮಂದಿ ಭಾಗವಹಿಸಿದ್ದರು.
- ಯೋಗಪ್ರದರ್ಶನ ಮಾಡಿದ ಎಲ್ಲರಿಗೂ ಪ್ರಮಾಣಪತ್ರ ವಿತರಣೆ - ವಿಶಿಷ್ಟಚೇತನರೂ ಸೇರಿದಂತೆ ೫ ಮಂದಿಗೆ ರಾಜ್ಯಪಾಲರಿಂದ ಸಾಂಕೇತಿಕ ಪ್ರಮಾಣ ಪತ್ರ ವಿತರಿಸಲಾಯಿತು.
- ಕಾರ್ಯಕ್ರಮದ ಯಶಸ್ಸಿಗಾಗಿ, ಪೂರ್ವಭಾವಿಯಾಗಿ ನಡೆಸಿದ್ದು -
- ನಗರದ ಮೂರುಕಡೆಗಳಲ್ಲಿ ’ಯೋಗ ವಾಕಥಾನ್’; ಇದರಲ್ಲಿ ಒಟ್ಟು ಸುಮಾರು ೧,೫೦೦ಕ್ಕೂ ಅಧಿಕ ಜನರು ಭಾಗವಹಿಸಿದ್ದರು.
- ನಗರದ ಮೂರು ಕಡೆಗಳಲ್ಲಿ ಸ್ವಯಂಪ್ರೇರಿತ ’ರಕ್ತದಾನ ಶಿಬಿರ’; ಇದರಲ್ಲಿ ೩೦೯ ಮಂದಿ ದಾನಿಗಳು ಭಾಗವಹಿಸಿದ್ದರು.
- ನಗರದ ಅನ್ಯಾನ್ಯ ಸ್ಥಳಗಳಲ್ಲಿ ೨೭೫ ಯೋಗಾಭ್ಯಾಸದ ಶಿಬಿರಗಳು; ಇದರಲ್ಲಿ ೯,೫೬೦ ಮಂದಿ ಯೋಗತರಬೇತಿ ಪಡೆದುಕೊಂಡರು.
ರಾಷ್ಟ್ರೋತ್ಥಾನ ಪರಿಷತ್ ನಡೆಸಿದ ಈ ಸ್ಮರಣೀಯ ಕಾರ್ಯಕ್ರಮ ರಾಜ್ಯದಲ್ಲಿ ಅಂದು ನಡೆದ ಕಾರ್ಯಕ್ರಮಗಳಲ್ಲೆಲ್ಲ ಅತ್ಯಂತ ಶಿಸ್ತುಬದ್ಧವಾಗಿ, ಯಶಸ್ವಿಯಾಗಿ ನಡೆದ ಒಂದು ಬೃಹತ್ ಕಾರ್ಯಕ್ರಮವಾಗಿ ಜನಜನಿತವಾಯ್ತು.
ಕಾಡಿದ ಯೋಚನೆಗಳು......
ಒಂದು.
ಸರ್ವೇ ಸಂತು ನಿರಾಮಯಾಃ ಎಂಬ ಪಾರಂಪರಿಕ ಉಕ್ತಿಯಂತೆ ಪ್ರತಿಯೊಬ್ಬರೂ ಕಾಯಿಲೆಮುಕ್ತ, ಆದರ್ಶ ಜೀವನವನ್ನು ನಡೆಸುವಂತಾಗಬೇಕೆಂಬ ಆಶಯದಿಂದ ೧೯೭೨ರಿಂದ ಯೋಗಪ್ರಸಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ರಾಷ್ಟ್ರೋತ್ಥಾನ ಪರಿಷತ್‌ಗೆ ಯೋಗಕ್ಕೆ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮನ್ನಣೆ ನೀಡಿರುವುದು ಹೆಮ್ಮೆಯ ಸಂಗತಿಯೇ ಆಗಿತ್ತು. ’ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆ’ಯ (ಪ್ರಾರಂಭದಲ್ಲಿ ’ರಾಷ್ಟ್ರೋತ್ಥಾನ ಶಾರೀರಿಕ ಶಿಕ್ಷಾಕೇಂದ್ರ’) ಮೂಲಕ ಬೆಂಗಳೂರಿನ ಲಕ್ಷಾಂತರ ಮಂದಿಗೆ ಯೋಗತರಬೇತಿ ನೀಡಿರುವ ಪರಿಷತ್‌ನ ಯೋಗವಿಭಾಗ ಇಂದು ಕರ್ನಾಟಕದಲ್ಲಿ ಒಂದು ಪ್ರತಿಷ್ಠಿತ ಯೋಗಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಯೋಗಶಿಕ್ಷಣ ನೀಡುವುದು ಮಾತ್ರವಲ್ಲದೇ, ಯೋಗಶಿಕ್ಷಕರನ್ನು ತಯಾರಿಸುವ ಒಂದು ಪರಂಪರೆಯನ್ನೂ ಪರಿಷತ್‌ನ ಯೋಗವಿಭಾಗ ಹುಟ್ಟುಹಾಕಿದೆ ಎಂದಲ್ಲಿ ಅತಿಶಯೋಕ್ತಿಯೆನಿಸದು. ಇಲ್ಲಿ ಯೋಗಶಿಕ್ಷಣ ಪಡೆದ ಅನೇಕರು ಅಂತಾರಾಷ್ಟ್ರೀಯ ಮಟ್ಟಕ್ಕೇರಿರುವುದೂ ನಮಗೆಲ್ಲ ತಿಳಿದಿರುವುದೇ ಆಗಿದೆ. ಹೀಗಾಗಿ ’ಅಂತಾರಾಷ್ಟ್ರೀಯ ಯೋಗದಿನ’ದ ಈ ಸಂದರ್ಭವನ್ನು ಬಳಸಿಕೊಂಡು ಯೋಗಕ್ಕೆ ಇನ್ನಷ್ಟು ಪ್ರಚಾರ-ಪ್ರಸಾರ-ರಭಸ ಸಿಗುವಂತಾಗಬೇಕು ಹಾಗೂ ರಾಷ್ಟ್ರೋತ್ಥಾನದಿಂದ ಈಗ ನಡೆಯುತ್ತಿರುವ ಯೋಗಕೇಂದ್ರಗಳಿಗೆ ಶಕ್ತಿ ಕೊಡುವಂತಾದರೆ ಹೇಗೆ?
ಮಾಡಿದ ಯೋಜನೆಗಳು.......
ಸುಮಾರು ಮೂರು ತಿಂಗಳ ಹಿಂದೆ 'ಅಂತಾರಾಷ್ಟ್ರೀಯ ಯೋಗದಿನ’ದ ಘೋಷಣೆಯಾದ ತಕ್ಷಣ ಇನ್ನೊಂದು ರೀತಿಯಲ್ಲಿ ಪರಿಷತ್‌ಗೆ ಅನ್ನಿಸಿದ್ದು - ಈ ಹೆಮ್ಮೆಯ ಆಚರಣೆಯಲ್ಲಿ ನಾವು ಜೊತೆಗೂಡಬೇಕು ಎಂಬುದು. ಆದರೆ ಅಳುಕೂ ಇಲ್ಲದಿರಲಿಲ್ಲ. ಯಾಕೆಂದರೆ ಯೋಗದಿನದ ಆಚರಣೆ ಹೇಗೆ-ಏನು? ಇದಕ್ಕೆ ನಮ್ಮ ಕಾರ್ಯಕರ್ತರು ಹೊಂದಿಕೊಂಡಾರೆ ಯೇ ಎಂಬುದು.
ಕಾರ್ಯಕ್ರಮ ಮಾಡುವ ನಿಶ್ಚಯವಂತೂ ಹಿರಿಯರಿಂದ ಆಯಿತು. ಇನ್ನು ಬೇಕಾಗಿದ್ದುದ್ದು ಪ್ರತ್ಯಕ್ಷ ಕಾರ್ಯ.
ಹಿರಿಯರೊಬ್ಬರು ರಾಷ್ಟ್ರೋತ್ಥಾನದ ಕಾರ್ಯದ ಬಗ್ಗೆ ಹೇಳಿದ್ದುಂಟು: ನಮ್ಮದು ಈಶ್ವರೀ ಕಾರ್ಯ. ಹೀಗಾಗಿ ನಮ್ಮನ್ನು ಅದ್ಯಾವುದೋ ಅಸಾಮಾನ್ಯ ಶಕ್ತಿ ಕೈಹಿಡಿದು ನಡೆಸುತ್ತದೆ ಎಂದು. ವಾಸ್ತವವಾಗಿ ಈ ಕಾರ್ಯ ಆಗಿದ್ದೂ ಹಾಗೆಯೇ.
ಮೊದಲು ಸಾಮೂಹಿಕ ಯೋಗಪ್ರದರ್ಶನದ ನಿಶ್ಚಯವಾದಾಗ, ಸಂಖ್ಯೆಯ ಗುರಿ ೫೦೦೦ ಎಂದಿತ್ತು. ಈ ಸಂಖ್ಯೆ ಪ್ರತಿ ಬೈಠಕ್‌ನಿಂದ ಬೈಠಕ್‌ಗೆ ವೃದ್ಧಿಸುತ್ತಲೇ ಸಾಗಿತ್ತು. ಅದೆಷ್ಟು ರಭಸ ಬಂದಿತ್ತೆಂದರೆ ನಮ್ಮ ಯೋಗಕೇಂದ್ರದ ಶಿಕ್ಷಕರು ಮಾತ್ರವಲ್ಲ ಯೋಗ-ರಾಷ್ಟ್ರೋತ್ಥಾನದ ಬಗೆಗೆ ಅಭಿಮಾನ ಇದ್ದ ಹಲವರು ಈ ಸಂಖ್ಯಾಗುರಿಯನ್ನು ಸಾಧಿಸಲು ಟೊಂಕಕಟ್ಟಿ ಕೆಲಸ ಮಾಡಿದ್ದರು. ಕೆಲವರಂತೂ ಮನೆಗೆ ಹೋಗುತ್ತಿದ್ದುದು ರಾತ್ರಿ ನಿದ್ರೆಗಾಗಿ; ಅದೂ ಹತ್ತು-ಹನ್ನೊಂದು ಘಂಟೆಗೆ. ಬೆಳಗ್ಗೆ ಮನೆ ಬಿಡುತ್ತಿದ್ದುದ್ದೂ ಮುಂಜಾನೆ ೪.೩೦-೫.೦೦ಕ್ಕೆ. ಹಲವರ ಮನೆಯ ಮಕ್ಕಳು ತಂದೆ/ತಾಯಿ ಊರಲ್ಲಿಲ್ಲ ಎಂದೇ ತಿಳಿದಿದ್ದರು!
ಉಚಿತ ಯೋಗತರಗತಿಗಳು:
ನಮ್ಮ ಕಾರ್ಯಕ್ರಮ, ಕೇವಲ ಕಾರ್ಯಕ್ರಮವಾಗಿ ಉಳಿಯಬಾರದು. ಅದು ಆಂದೋಲನದ ಸ್ವರೂಪ ಪಡೆಯಬೇಕು ಎಂಬ ಕನಸು ಪರಿಷತ್‌ನ ಹಿರಿಯರ ಮನಸ್ಸಿನಲ್ಲಿ ಮೂಡಿತು. ಹೀಗಾಗಿ ಬೆಂಗಳೂರಿನಾದ್ಯಂತ ಯೋಗಶಿಬಿರಗಳನ್ನು ನಡೆಸಿದರೆ ಹೇಗೆ? ಅದು ಉಚಿತವಾಗಿ - ಎಂಬ ಚಿಂತನೆ. ಚಿಂತನೆಯೇನೋ ಉತ್ತಮವಾದದ್ದೇ. ಆದರೆ ಇದು ಸಾಧ್ಯವೇ. ಯಾಕೆಂದರೆ ಆಗ ಪರಿಷತ್‌ನ ಯೋಗಕೇಂದ್ರದಿಂದ ದಿನನಿತ್ಯ ಒಟ್ಟು ೯೮ ಯೋಗತರಗತಿಗಳು ನಡೆಯುತ್ತಿತ್ತು. ಹೆಚ್ಚೆಂದರೆ ೫೦ ದಾಟುವಷ್ಟು ಶಿಕ್ಷಕರಿದ್ದರು. ಈ ೫೦ ಶಿಕ್ಷಕರು ಸೇರಿ ನಗರದಾದ್ಯಂತ ಉಚಿತ ಯೋಗಶಿಬಿರ ನಡೆಸಲು ಸಾಧ್ಯ?
ಪ್ರತಿ ಪ್ರಶ್ನೆಗೂ ಉತ್ತರವಂತೂ ಇದ್ದೇ ಇದೆ. ಹಾಗೆ ಕಂಡುಕೊಂಡ ಉತ್ತರ - ಆಸಕ್ತ ಯೋಗಾಭ್ಯಾಸಿಗಳಿಗೆ ಶಿಕ್ಷಣ ನೀಡಿ, ಅವರನ್ನು ಯೋಗಶಿಬಿರ ನಡೆಸುವಂತೆ ಮಾಡುವುದು. ಈ ಕಲ್ಪನೆಗೆ ಓಗೊಟ್ಟು ನೂರಾರು ಯೋಗಾಭ್ಯಾಸಿಗಳು ಮುಂದೆ ಬಂದರು. ಈ ಆಸಕ್ತ ಯೋಗಾಭ್ಯಾಸಿಗಳಿಗೆ ಯೋಗಸಂಸ್ಥೆಯ ನಿರ್ದೇಶಕ ನಾಗೇಂದ್ರ ಕಾಮತ್ ನೇತೃತ್ವದ ಯೋಗಶಿಕ್ಷಕರ ತಂಡ ಮಾರ್ಗದರ್ಶನ ಮಾಡಿತು. ಅಂತಹ ಶಿಕ್ಷಕರ ಸಂಖ್ಯೆ ದಿನೇ ದಿನೇ ಬೆಳೆಯುತ್ತಲೇ ಸಾಗಿತ್ತು. ಕೊನೆಗೆ ಲೆಕ್ಕಕ್ಕೆ ಸಿಕ್ಕಿದ್ದು ಉಚಿತ ಯೋಗತರಬೇತಿ ನೀಡಿದ ಶಿಕ್ಷಕರ ಸಂಖ್ಯೆ ೨೫೦; ಆದರೆ ಗಲ್ಲಿಗಲ್ಲಿಗಳಲ್ಲಿ ಉಚಿತ ತರಬೇತಿ ನೀಡಿ ನೇಪಥ್ಯದಲ್ಲಿ ನಿಂತವರೂ ಹಲವರಿದ್ದಾರೆಂಬುದು ಕಾರ್ಯಕ್ರಮದ ಅನಂತರ ತಿಳಿದುಬಂತು. ಆಶ್ಚರ್ಯ ಎಂದರೆ ಕೇವಲ ೫೦ ದಾಟಿದ್ದ ಶಿಕ್ಷಕರ ಸಂಖ್ಯೆ ೨೫೦ ದಾಟಿದ್ದು ಯಾವುದೇ ಕರಪತ್ರ ರಹಿತವಾಗಿ; ಕೇವಲ ಮೌಖಿಕ, ಸ್ನೇಹದ ಕರೆಯಿಂದಷ್ಟೇ.
ಯೋಗಶಿಕ್ಷಕರನ್ನು ಜೋಡಿಸುವ ಸಾಮರ್ಥ್ಯವುಳ್ಳ ಪ್ರಮುಖ ಯೋಗಶಿಕ್ಷಕರ ೧೧ ಬೈಠಕ್‌ಗಳು ಹಾಗೂ ವಿವಿಧೆಡೆಗಳಲ್ಲಿ ಯೋಗಶಿಕ್ಷಣ ನೀಡಲು ಮುಂದೆ ಬಂದ ಶಿಕ್ಷಕರಿಗೆ ತರಬೇತಿ ನೀಡಲು ೪೧ ಶಿಕ್ಷಕರ ತರಬೇತಿ ಶಿಬಿರಗಳನ್ನು ನಡೆಸಲಾಯಿತು. ಇಲ್ಲಿ ಶಿಕ್ಷಣ ಪಡೆದ ಶಿಕ್ಷಕರು ಬೆಂಗಳೂರಿನ ಗಲ್ಲಿಗಲ್ಲಿಗೆ ತೆರಳಿ ತರಬೇತಿ ಶಿಬಿರವನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದ ಬಗ್ಗೆ ತಿಳಿದ ಅದಮ್ಯ ಚೇತನದಂತಹ ಸ್ವಯಂಸೇವಾ ಸಂಸ್ಥೆಗಳು, ವಿವಿಧ ಯೋಗಕೇಂದ್ರಗಳು ಶಿಕ್ಷಕರ ಜೋಡಣೆ ಕಾರ್ಯದಲ್ಲಿ ಸಹಕರಿಸಿದವು. ಇವರೆಲ್ಲರ ಸಹಕಾರದಿಂದ ಬೆಂಗಳೂರಿನ ೨೭೬ ಕಡೆಗಳಲ್ಲಿ ಉಚಿತ ಯೋಗಶಿಬಿರವನ್ನು ನಡೆಸಲಾಯಿತು. ಇವುಗಳಲ್ಲಿ ಯೋಗಾಭ್ಯಾಸಿಗಳಾಗಿ ಭಾಗವಹಿಸಿದವರು ಬರೋಬ್ಬರಿ ೯೫೬೦ ಮಂದಿ.
ಎಲ್ಲೆಲ್ಲಿ:
ಕನಿಷ್ಠ ೭ ದಿನಗಳ ಉಚಿತ ಯೋಗತರಗತಿಗಳು ನಡೆದ ಸ್ಥಳಗಳು
ವಿಶಿಷ್ಟ ಚೇತನ ಮಕ್ಕಳಿಗಾಗಿ - ಸಮರ್ಥನ, ರಮಣ ಮಹರ್ಷಿ (ಅಂಧಮಕ್ಕಳ ಶಾಲೆ), ಅರುಣ ಚೇತನ
ಶಾಲೆ, ಕಾಲೇಜುಗಳಲ್ಲಿ - ಸರ್ಕಾರಿ, ಅನುದಾನಿತ, ಖಾಸಗಿ
ವಿವಿಧ ಪಾರ್ಕ್‌ಗಳಲ್ಲಿ
ಸೇವಾಬಸ್ತಿಗಳಲ್ಲಿ (ಸ್ಲಂ)
ಸರ್ಕಾರೇತರ ಸಂಸ್ಥೆಗಳಲ್ಲಿ
ವಿವಿಧ ಯೋಗಕೇಂದ್ರಗಳಲ್ಲಿ
ಅದಮ್ಯಚೇತನದ ಸಹಯೋಗದಲ್ಲಿ
ರಾಜ್ಯ ಸರಕಾರ ಸಚಿವಾಲಯ ನೌಕರರ ಸಂಘ
ರಾಮಕೃಷ್ಣಾಶ್ರಮ. ಉತ್ತರಾದಿಮಠ, ದೇವಸ್ಥಾನ... ಇತ್ಯಾದಿ ಧಾರ್ಮಿಕ ಕೇಂದ್ರಗಳಲ್ಲಿ
ಅನಾಥಾಶ್ರಮ, ಅಬಲಾಶ್ರಮ, ನಂದಗೋಕುಲ
ಬ್ಯಾಂಕ್‌ಗಳಲ್ಲಿ - ಅಚಿಟಿಚಿಡಿಚಿ ಃಚಿಟಿಞ ಊeಚಿಜ ಔಜಿಜಿiಛಿe ॒ಇತ್ಯಾದಿ
ಈ ಎಲ್ಲ ಕೇಂದ್ರಗಳಲ್ಲಿ ನಡೆದ ಯೋಗತರಗತಿಗಳೂ ಒಂದೊಂದು ಕಥೆ ಹೇಳುತ್ತವೆ. ಯಾಕೆಂದರೆ ಇವು ನಡೆದದ್ದು ಸೇವಾಬಸ್ತಿ(ಸ್ಲಂ)ಯಿಂದ ಪಾರ್ಕ್‌ಗಳವರೆಗೆ; ಶಾಲೆಯಿಂದ ಬ್ಯಾಂಕ್, ಸರಕಾರದ ಸಚಿವಾಲಯದ ವರೆಗೆ.
ಇದು ಉಚಿತ ಯೋಗ ತರಬೇತಿ ಶಿಬಿರ. ’ಬೆಂಗಳೂರು ನಗರದಲ್ಲಿ ಉಚಿತ ಯೋಗ ಎಂದರೆ ಜನ ಮುಗಿಬೀಳುತ್ತಾರೆ. ಹೀಗಾಗಿ ಉಚಿತ ಯೋಗಶಿಬಿರದಲ್ಲಿ ಸಂಖ್ಯೆಗೇನೂ ಕೊರತೆಯಿಲ್ಲ’ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಸಂಖ್ಯೆ ಸೇರಿಸಲು ಈ ಯೋಗಶಿಕ್ಷಕರು ನಡೆಸಿದ ಪ್ರಯತ್ನವಂತೂ ಭಗೀರಥನನ್ನು ನೆನಪಿಸುವಂಥದ್ದು.
ವಿವಿಧ ಯೋಗತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡ ಯೋಗಶಿಕ್ಷಕರಿಗೆ ನಿಜವಾಗಿ ಸವಾಲಾಗಿದ್ದು ಕಾರ್ಯಕ್ಷೇತ್ರ. ಹಾಗೆಂದು ಅವರಿಗೆ ಇದೇ ಸ್ಥಳ ಎಂದು ನಿಗದಿ ಮಾಡಿರಲಿಲ್ಲ. ಸ್ಥಳ, ಯೋಗಾಭ್ಯಾಸಿಗಳ ಆಯ್ಕೆ ಅವರದ್ದೇ. ಕೆಲವರಿಗೆ ಸಲಹೆ ನೀಡಿದ್ದಿದೆ.
ಪಾರ್ಕ್ - ಎಂದರೆ ಜನ ಸೇರುವ ಸ್ಥಳ. ಇಲ್ಲಿಗೆ ಬರುವವರೆಲ್ಲ ಸಾಮಾನ್ಯವಾಗಿ ಬೆಳಗಿನ ವಾಕಿಂಗ್-ವ್ಯಾಯಾಮಕ್ಕಾಗಿ ಬರುವವರೇ. ಹೀಗಾಗಿ ಇವರನ್ನು ಸೇರಿಸುವುದು ಸುಲಭ ಎಂದು ತಿಳಿದ ಯೋಗಶಿಕ್ಷಕರೊಬ್ಬರು ತಮ್ಮ ಮನೆಯ ಸಮೀಪದ ಪಾರ್ಕ್‌ನ್ನು ಕಾರ್ಯಕ್ಷೇತ್ರವಾಗಿ ಆಯ್ದುಕೊಂಡರು. ಮೊದಲ ದಿನ ಪಾರ್ಕ್‌ಗೆ ಬರುವವರಿಗೆಲ್ಲ ಹೇಳಿದ್ದೇ ಹೇಳಿದ್ದು - ನಾಳೆಯಿಂದ ಒಂದು ವಾರ ಉಚಿತ ಯೋಗತರಗತಿಗಳಿವೆ, ಯಾರು ಬೇಕಾದರೂ ಬರಬಹುದು - ಎಂದು. ಅವರ ಪ್ರತಿಕ್ರಿಯೆಯೂ ಚೆನ್ನಾಗಿತ್ತು. ಮೊದಲ ಯಶಸ್ಸಿನ ಹೆಮ್ಮೆ. ಆದರೆ ಮಾರನೆ
ಯ ದಿನ ಆಶ್ಚರ್ಯ ಕಾದಿತ್ತು - ಯೋಗತರಗತಿ ಬಗೆಗೆ ಆಸಕ್ತಿಯಿಂದ ಕೇಳಿ, ಮೆಚ್ಚಿ, ಹೊಗಳಿದ್ದ ಹತ್ತಾರು ಮಂದಿ ಅಲ್ಲೇ ವಾಕಿಂಗ್-ಟಾಕಿಂಗ್‌ನಲ್ಲಿ ಮುಂದೆ ಸಾಗುತ್ತಿದ್ದರೇ ಹೊರತು, ಈ ಕಡೆ ಮುಖಹಾಕಿಯೂ ನೋಡಲಿಲ್ಲ. ಕನಿಷ್ಠ ೨೦-೩೦ ಅನ್ನಿಸಿದ್ದ ಆತನಿಗೆ ಅಂದು ಶಿಕ್ಷಕನಾಗುವ ಭಾಗ್ಯವೇ ದೊರಕಲಿಲ್ಲ!
ಹೀಗೆ ಅನೇಕರಿಗೆ ನಿರಾಸೆಯ ಪ್ರತಿಕ್ರಿಯೆ ದೊರತಿತ್ತು. ಆದರೆ ಅವರ ಸಂಕಲ್ಪಶಕ್ತಿ, ಛಲ, ಹಿಡಿದ ಕೆಲಸದ ಸಾಕಾರಕ್ಕೆ ಸದಾ ಮಾರ್ಗ ತೋರಿಸುತ್ತಿತ್ತು; ಯಶಸ್ಸಿನ ಸಂತೃಪ್ತಿ ಸಿಗುವಂತೆ ಮಾಡುತ್ತಿತ್ತು. ಈ ಎಲ್ಲ ಸಮಯದಲ್ಲೂ ಆ ಶಿಕ್ಷಕರಿಗೆ ಧೈರ್ಯ ತುಂಬುವ ಕೆಲಸ ಪರಿಷತ್‌ನ ಯೋಗವಿಭಾಗದಿಂದ ನಡೆಯುತ್ತಿತ್ತು.
ಬೈಠಕ್‌ಗಳು:
ಕಾರ್ಯಕ್ರಮವೇನೋ ನಿಶ್ಚಯವಾಗಿತ್ತು. ಕಾರ್ಯಕ್ರಮಕ್ಕೆ ಹಲವು ಮುಖಗಳ ಕಾರ್ಯ ಆಗಬೇಕಾಗಿತ್ತು. ಆ ಕಾರ್ಯವು ಪರಿಷತ್‌ನ ಕಾರ್ಯಕರ್ತರಿಂದಲೇ ಆಗಬೇಕಾಗಿತ್ತು. ಆದರೆ ಇಷ್ಟು ದೊಡ್ಡ ಕಾರ್ಯಕ್ರಮ ಮಾಡಿದ ಅನುಭವ ಯಾರೊಬ್ಬರಲ್ಲಿಯೂ ಇರಲಿಲ್ಲ. ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರೇ ಸ್ವತಃ ಹೇಳುತ್ತಿದ್ದರು: ಕಾರ್ಯಕ್ರಮಕ್ಕೆ ಅಗತ್ಯವಾದ ಪ್ರತಿಯೊಂದು ವ್ಯವಸ್ಥೆಯ ಬಗೆಗೆ ನಮ್ಮ ಯಾರಲ್ಲಿಯೂ ತಜ್ಞತೆಯಾಗಲಿ, ಅನುಭವವಾಗಲಿ ಇರಲಿಲ್ಲ. ಕಾರ್ಯದ ವಿಸ್ತಾರತೆ, ಅದರ ಶ್ರಮ, ಅದರಲ್ಲಿ ಎದುರಾಗುವ ಸಮಸ್ಯೆಗಳೆಲ್ಲವನ್ನೂ ಸ್ವತಃ ಅನುಭವಿಸುತ್ತಾ ಕಲಿಯುತ್ತಾ ನಾವು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆವು - ಎಂದು. ಇದು ಕಾರ್ಯಕ್ರಮದ ವ್ಯವಸ್ಥೆಯ ಜವಾಬ್ದಾರಿ ಹೊತ್ತವರ ಅನುಭವದಲ್ಲಿ ಅಕ್ಷರಶಃ ಸತ್ಯ.
ಕಾರ್ಯಕ್ರಮದ ಯಶಸ್ವಿನ ಹೊಣೆ ಪರಿಷತ್‌ನ ವಿವಿಧ ಪ್ರಕಲ್ಪಗಳಲ್ಲಿ ಜೋಡಿಕೊಂಡಿರುವ ಕಾರ್ಯಕರ್ತರದ್ದಾಗಿತ್ತು. ಅದಕ್ಕಾಗಿ ೧೬ ಜನರ ತಂಡ ಸಿದ್ಧವಾಯಿತು. ಈ ತಂಡದ ಪ್ರತಿಯೊಬ್ಬ ಸದಸ್ಯನಿಗೂ ಒಂದು ನಿರ್ದಿಷ್ಟ ಕೆಲಸ ಗೊತ್ತಾಯಿತು. ಆ ಕೆಲಸದ ಸ್ವರೂಪ, ಆವಶ್ಯಕತೆ, ಎಲ್ಲವನ್ನೂ ಅವರೇ ಅಂದಾಜಿಸ ಬೇಕಾಗಿತ್ತು. ಮೊದಲೇ ಹೇಳಿದಂತೆ ಯಾರೂ ತಜ್ಞರಾಗಲಿ, ಅನುಭವಿಗಳಾಗಲಿ ಆಗಿರಲಿಲ್ಲ. ಹೀಗಾಗಿ ಮೊದಲು ವಾರಕ್ಕೆರಡು ಬಾರಿ, ನಂತರ ವಾರಕ್ಕೆ ನಾಲ್ಕು, ಆಮೇಲೆ ಪ್ರತಿದಿನ ಸೇರಿ ಚರ್ಚಿಸಲಾಯಿತು. ಹೀಗೆ ಜವಾಬ್ದಾರಿ ಹೊಂದಿದ ಕಾರ್ಯಕರ್ತರ ೧೯ ಅಧಿಕೃತ ಬೈಠಕ್‌ಗಳು ನಡೆದವು. ಇನ್ನು ಅನಧಿಕೃತ ಬೈಠಕ್‌ಗಳು ಅದೆಷ್ಟೋ.
ಪ್ರತಿ ಬೈಠಕ್‌ನಲ್ಲಿಯೂ ಕಾರ್ಯದ ಬೆಳವಣಿಗೆ, ಮುಂದಿನ ಯೋಜನೆ-ಯೋಚನೆ, ಸವಾಲುಗಳ ಚರ್ಚೆ ನಡೆಯುತ್ತಿತ್ತು. ನಿರಾಸೆಯಂತೂ ಯಾರ ಮುಖದಲ್ಲೂ ಕಾಣಿಸುತ್ತಿರಲಿಲ್ಲ. ಕಠಿಣ ಪರಿಸ್ಥಿತಿಗೆ ಬೆಳಕು ತೋರಿಸುವ ಪ್ರಧಾನ ಕಾರ್ಯದರ್ಶಿಗಳ ಮಾತು, ಕೆಲಸವನ್ನು ಇನ್ನೂ ಚೆನ್ನಾಗಿ ಮಾಡಲು ವಿಭಿನ್ನ ಚಿಂತನೆಗಳನ್ನು ಕ್ರೋಢೀಕರಿಸಿ ಮೂಡಿದ ಹೊಸದೃಷ್ಟಿ - ಜವಾಬ್ದಾರಿ ಹೊಂದಿದ ಕಾರ್ಯಕರ್ತನ ಆತ್ಮವಿಶ್ವಾಸವನ್ನು ಬೈಠಕ್‌ನಿಂದ ಬೈಠಕ್ ಹೆಚ್ಚಿಸುತ್ತಲೇ ಇತ್ತು. ಜೊತೆಗೆ ಯಾವುದೇ ಜವಾಬ್ದಾರಿಯೂ ಯಾರಿಗೂ ಹೊರೆಯೆನಿಸದೆ ಸಹಜವಾದ ಚಟುವಟಿಕೆಗಳಂತೆ ಮುಂದುವರಿಯಿತು.
ಕಾರ್ಯಕ್ರಮದ ವ್ಯವಸ್ಥಾ ಭಾಗವನ್ನು ವೇದಿಕೆ, ಮಾರ್ಕಿಂಗ್, ಪ್ರದರ್ಶಿನಿ, ಉಪಹಾರ, ಪಾರ್ಕಿಂಗ್, ವಾಹನ ವ್ಯವಸ್ಥೆ ಮುಂತಾದ ಪ್ರಮುಖ ಗುಂಪುಗಳಾಗಿ ವಿಂಗಡಿಸಿ ಬೈಠಕ್‌ನ ಚರ್ಚೆ ಪ್ರಾರಂಭಿಸಲಾಯಿತು. ಇದಕ್ಕೆ ನೆರವು ನೀಡುವ ಅಗತ್ಯ ವಿಭಾಗಗಳನ್ನು ಕಾಲಕಾಲಕ್ಕೆ ಜೋಡಿಸಿಕೊಳ್ಳುತ್ತಾ ಹೋಗಲಾಯಿತು.
ವೇದಿಕೆ: ವೇದಿಕೆಯ ಮುಂದೆ ಮತ್ತು ವೇದಿಕೆಯ ಅಲಂಕಾರದ ದೃಷ್ಟಿಯಿಂದ ಈ ತಂಡ ಚಿಂತನೆ ನಡೆಸುತ್ತಿತ್ತು. ವೇದಿಕೆಯ ಮುಂದೆ ಆಕರ್ಷಕ ರಂಗೋಲಿ ಹಾಗೂ ವೇದಿಕೆಯಲ್ಲಿ ಐ.ಇ.ಆ. Sಛಿಡಿeeಟಿ ಬಳಸಲು ನಿಶ್ಚಯಿಸಲಾಯಿತು. ಪರಿಷತ್‌ನ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಐ.ಇ.ಆ. Sಛಿಡಿeeಟಿ ಬಳಸಿದ ಕಾರ್ಯಕ್ರಮ ಇದಾಗಿತ್ತು. ಐ.ಇ.ಆ. Sಛಿಡಿeeಟಿನ ಃಚಿಛಿಞಜಡಿoಠಿನಲ್ಲಿ ಯೋಗಪರಂಪರೆಯ ಪ್ರತಿನಿಧಿಗಳ ಭಾವಚಿತ್ರವಿರಬೇಕೆಂದು ನಿಶ್ಚಯಿಸಲಾಯಿತು. ಅದರಂತೆ ಯೋಗೇಶ್ವರ ಶ್ರೀಕೃಷ್ಣ, ಆದಿಯೋಗಿ ಶಿವ, ಯೋಗರಾಜ ಬುದ್ಧ, ಯೋಗಪಿತಾಮಹ ಪತಂಜಲಿ, ಧ್ಯಾನಸಿದ್ಧ (ಪೂರ್ಣಯೋಗಿ) ವಿವೇಕಾನಂದ, ಯೋಗಭೂಮಿ ಭಾರತಮಾತೆ ಮುಂತಾದವರ ಭಾವಚಿತ್ರವನ್ನೊಳಗೊಂಡ ೬ ವಿವಿಧ ಪ್ರಕಾರಗಳನ್ನು ಬಳಸಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ರಂಗು ತರುವುದರಲ್ಲಿ ಐ.ಇ.ಆ. Sಛಿಡಿeeಟಿ ಪಾತ್ರವೂ ಇತ್ತು.
ಮಾರ್ಕಿಂಗ್: ಮೊದಲು ೫೦೦೦ ಸಂಖ್ಯೆ ಗುರಿ ಎಂದೆನಿಸಿದ್ದು ದಿನೇ ದಿನೇ ವೃದ್ಧಿಯಾಗುತ್ತಲೇ ಸಾಗಿತ್ತು, ಕೊನೆಗೆ ಬೆಂಗಳೂರಿನಾದ್ಯಂತ ನಡೆದ ಯೋಗತರಬೇತಿ ಶಿಬಿರಗಳು ಹಾಗೂ ಅದರಲ್ಲಿ ಪಾಲ್ಗೊಂಡವರ ಪಟ್ಟಿ ನೋಡಿದಾಗ ಆಶ್ಚರ್ಯ ಕಾದಿತ್ತು. ಅದಾಗಲೇ ಕಾರ್ಯಕ್ರಮಕ್ಕೆ ಒಂದು ವಾರದ ಸಮಯವಿತ್ತು. ಆದರೆ ಅದಾಗಲೇ ಬೆಂಗಳೂರಿನ ೨೫೦ ಕಡೆಗಳಲ್ಲಿ ನಡೆದ ಶಿಬಿರಗಳಲ್ಲಿ ಭಾಗವಹಿಸಿದ ಯೋಗಾಭ್ಯಾಸಿಗಳ ಸಂಖ್ಯೆ ೯೦೦೦ವನ್ನೂ ದಾಟಿತ್ತು.
ಹೀಗಾಗಿ, ಮೈದಾನದಲ್ಲಿ ೫-೬ ಸಾವಿರ ಮಾರ್ಕಿಂಗ್ ಮಾಡಬಹುದು ಎಂಬ ಅಭಿಪ್ರಾಯ ಹಲವರು ವ್ಯಕ್ತಪಡಿಸಿದ್ದರು. ಉಳಿದದ್ದಕ್ಕೆ? ಈ ದೃಷ್ಟಿಯ ಚಿಂತನೆಯೂ ಮುಂದುವರಿಯಿತು. ಇಂಜಿನಿಯರಿಂಗ್‌ನ ಗಂಧಗಾಳಿ ತಿಳಿಯದಿದ್ದರೂ ಪೆನ್ನು ಪನ್ಸಿಲ್ ಪೇಪರ್ ತುಂಬಾ ಹರಿದಾಡಿತು. ಕೊನೆಗೂ ಬರೋಬ್ಬರಿ ೮೦೦೦ ಮಂದಿ (ಕಂಬಗಳಿಗೆ, ಮಾಧ್ಯಮದವರಿಗೆ ಎಂದು ಅಗತ್ಯ ಸ್ಥಳಾವಕಾಶವನ್ನು ಬಿಟ್ಟು) ಯೋಗಪ್ರದರ್ಶನ ಮಾಡುವವರಿಗೆ ಮಾಕಿಂಗ್ ಮಾಡಲು ನಿಶ್ಚಯಿಸಲಾಯಿತು.
ಯಾರೂ ಅನುಭವಿಗಳಲ್ಲ, ಹೀಗಾಗಿ ಈ ೮೦೦೦ ಮಂದಿಗೆ ಮಾರ್ಕಿಂಗ್‌ಗೆ ೫೦ಕ್ಕೂ ಅಧಿಕ ಮಂದಿಯನ್ನು ಜೋಡಿಸಿಕೊಂಡರೂ ಕನಿಷ್ಠ ೧೦-೧೨ ಗಂಟೆಯಾದರೂ ಬೇಕಾಗಬಹುದು ಎಂದು ನಿಶ್ಚಯಿಸಲಾಯಿತು. ಆದರೆ ಮಾರ್ಕಿಂಗ್ ತಂಡ ಅದ್ಬುತ ಸಾಹಸವನ್ನೇ ಮೆರೆದಿತ್ತು. ಕೇವಲ ೫-೬ ಗಂಟೆಯಲ್ಲಿ ಈ ಕೆಲಸವನ್ನು ಮುಗಿಸಿತ್ತು. ಅದೂ ೫೦ ಮಿಕ್ಕಿರದ ಸ್ವಯಂಸೇವಕರಿಂದ. ಮೊದಲ ೨ ಗಂಟೆ ಯೋಜನೆಯಂತೆ ಮಾರ್ಕಿಂಗ್ ಹಾಕುವುದು ಹೇಗೆ ಎಂಬ ಚರ್ಚೆಯಲ್ಲೇ ಕಳೆಯಿತು. ಇನ್ನರ್ಧ ಹಾಕಿ-ಅಳಿಸುವ ಪ್ರಯತ್ನದಲ್ಲಿ ಕಳೆಯಿತು. ಆದರೆ ಒಮ್ಮೆ ತಾಳ-ಲಯ ಸಿಕ್ಕ ನಂತರ ಕೇಳಬೇಕೆ? ನೋಡುನೋಡುತ್ತಿದ್ದಂತೆ ಮೈದಾನವನ್ನೆಲ್ಲ ಮಾರ್ಕಿಂಗ್‌ಗಳಿಂದಲೇ ತುಂಬಿದ್ದವು.
ಪ್ರದರ್ಶನಿ : ಯೋಗದರ್ಶಿನಿ
ಭಾರತವು ವಿಶ್ವಕ್ಕೆ ನೀಡಿದ ಅನೇಕ ಕೊಡುಗೆಗಳಲ್ಲಿ ಯೋಗವು ಮಹತ್ವದ್ದು. ಯೋಗವೆಂದರೆ ಬರೀ ಆಸನಗಳು ಎಂಬ ಕಲ್ಪನೆ ಅನೇಕರಲ್ಲಿದೆ. ಯೋಗದ ಕುರಿತಾಗಿ ಸ್ಪಷ್ಟ ಮಾಹಿತಿಯನ್ನು ನೀಡಿವ ಸಲುವಾಗಿ ಕಾರ್ಯಕ್ರಮದಂದು ಒಂದು ಪ್ರದರ್ಶಿನಿಯನ್ನು ಏರ್ಪಡಿಸಬೇಕೆಂದು ನಿಶ್ಚಯವಾಯಿತು. ಅದರಂತೆ ಅದಕ್ಕೆ ’ಯೋಗದರ್ಶಿನಿ’ ಎಂಬ ಹೆಸರನ್ನಿಡಲಾಯಿತು.
ಇದಕ್ಕಾಗಿ ಮೈದಾನದಲ್ಲಿ 20x100 ಅಡಿಯ ಪ್ರತ್ಯೇಕ ಪೆಂಡಾಲ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಯೋಗದ ಮಹತ್ತ್ವ್ವ, ಅದರ ವಿವಿಧ ಆಯಾಮಗಳು, ಯೋಗದ ಪ್ರಾಚೀನತೆ, ಯೋಗವಿದ್ಯೆಯ ಸಮರ್ಥ ಪ್ರತಿನಿಧಿಗಳು, ಯೋಗದ ಮಹತ್ವದ ಕೃತಿಗಳು ಇವೆಲ್ಲ ವಿವರಗಳನ್ನೊಳಗೊಂಡ ೪೪ ಬೃಹತ್ ಫಲಕಗಳನ್ನು ಈ ಪ್ರದರ್ಶಿನಿ ಒಳಗೊಂಡಿತ್ತು. ವೀಕ್ಷಕರ ಅನುಕೂಲದ ದೃಷ್ಠಿಯಿಂದ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿಯೂ ವಿವರಣೆ ಇರುವುದರ ಜೊತೆಗೆ ಅದಕ್ಕೆ ಸಂಬಂಧಿಸಿದ ಅಪರೂಪದ ಚಿತ್ರಗಳನ್ನೂ ಮುದ್ರಿಸಲಾಗಿತ್ತು.
ಇದರೊಟ್ಟಿಗೆ ಯೋಗದ ಕುರಿತಾದ ಅನೇಕ ವಿಡಿಯೋಗಳನ್ನು ಸಂಕಲಿಸಿ ಟಿವಿ ಪರದೆಯಲ್ಲಿ ಪ್ರದರ್ಶಿಲಾಯಿತು. ಇದಕ್ಕಾಗಿ 2 ರಿಂದ 5 ನಿಮಿಷದ ವರೆಗಿನ ಸುಮಾರು ಹತ್ತಕ್ಕೂ ಹೆಚ್ಚು ಕಿರುಚಲನಗಳನ್ನು ವಿವಿಧ ಮೂಲಗಳಿಂದ ಆಯ್ಕೆ ಮಾಡಲಾಗಿತ್ತು. ಆಧುನಿಕ ಯೋಗಬ್ರಹ್ಮ ಬಿ.ಎಸ್. ಐಯ್ಯಂಗಾರ್ ಸ್ವತಃ ಯೋಗ ಮಾಡುತ್ತಿರುವ ವಿಡಿಯೋ ಸಹ ಇವುಗಳಲ್ಲಿ ಒಂದಾಗಿತ್ತು. ಮರಳಿನ ಕಲೆಯಲ್ಲಿ ಯೋಗ, ಯೋಗ ಮಾರ್ಗದ ಮಹತ್ತ್ವ ಇತಾದಿ ಮನಸೆಳೆಯುವ ವಿಡಿಯೋಗಳಿದ್ದವು.
ಪ್ರದರ್ಶಿನಿಯ ದ್ವಾರದ ಪರಿಕಲ್ಪನೆಯೂ ವಿಶಿಷ್ಟವಾಗಿ ಯೋಗದ ಪ್ರಾಚೀನತೆಯನ್ನು ಸಾರುತ್ತಿತ್ತು. 5000 ವರ್ಷಗಳಿಗೂ ಹಳೆಯದೆಂದು ಹೇಳಲಾದ (ಪಾಂಡವರ ಕಾಲದ್ದು) ಮಹಾಬಲಿಪುರಂನ ದೇಗುಲಗಳ ಕೆತ್ತನೆಗಳಲ್ಲಿದ್ದ ವೃಕ್ಷಾಸನ ಸ್ಥಿತಿಯಲ್ಲಿರುವ ಯೋಗಿಯ ಶಿಲ್ಪದ ಚಿತ್ರವು ದ್ವಾರದ ಇಕ್ಕೆಡೆಗಳಲ್ಲಿತ್ತು. ಮತ್ತು ಜಗತ್ತಿನ ಅತ್ಯಂತ ಹಳೆಯ ನಾಗರಿಕತೆಯೆಂದು ಗುರುತಿಸ್ಪಟ್ಟಿರುವ ಸಿಂಧೂ ಕಣೆವೆಯ ಉತ್ಖನನದ ಸಮಯದಲ್ಲಿ ದೊರೆತಂತಹ ಪದ್ಮಾಸನ ಸ್ಥಿತಿಯಲ್ಲಿರುವ ಪಶುಪತಿನಾಥನ ಮುದ್ರೆಗಳ ಚಿತ್ರಣವನ್ನು ಮೇಲ್ಭಾಗದ ಫಲಕವು ನೀಡುತ್ತಿತ್ತು.
ಪ್ರದರ್ಶಿನಿಯ ಮಧ್ಯಭಾಗದಲ್ಲಿ ಸ್ಥಾಪಿಸಿದ್ದ ಪತಂಜಲಿಯ ಮೂರ್ತಿ ಒಂದು ದೈವಿಕ ವಾತಾವರಣವನ್ನು ಮೂಡಿಸಿತ್ತು. ಸನ್ಮಾನ್ಯ ಕೇಂದ್ರ ಸಚಿವರಾದ ಶ್ರೀ ಅನಂತ್‌ಕುಮಾರ್‌ರವರು ಅಂದು ಬೆಳಿಗ್ಗೆ 9.00 ಗಂಟೆಗೆ ದೀಪ ಬೆಳಗುವ ಮೂಲಕ ಪ್ರದರ್ಶಿನಿಯನ್ನು ಉದ್ಘಾಟಿಸಿದರು.
ಪ್ರದರ್ಶಿನಿಯ ಆರಂಭದಲ್ಲಿ ಯೋಗಕ್ಕೆ ವಿಶ್ವಸಂಸ್ಥೆಯಿಂದ ಅಧೀಕೃತವಾಗಿ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಂತಹ ’ವಿಶ್ವ ಯೋಗ ದಿನ’ ಘೋಷಣೆಯ ಕುರಿತಾಗಿ ಮಾಹಿತಿ ನೀಡಲಾಗಿತ್ತು. ಆದಿಯೋಗ ಶಿವ, ಯೋಗೇಶ್ವರ ಶ್ರೀಕೃಷ್ಣರಿಂದ ಆರಂಭಗೊಂಡು ಮಧ್ಯಯುಗದ ಯೋಗ ಸಾಧಕರು, ಸಂತರು ಮತ್ತು ಸಮಕಾಲೀನ ಯೋಗ ವಿಖ್ಯಾತರವರೆಗೆ ಮಾಹಿತಿಯನ್ನು ನೀಡಲಾಗಿತ್ತು.