Wednesday, 31 May 2017

ಶೈಕ್ಷಣಿಕ ತಪಸ್ ನೋಡಬನ್ನಿ

ಲೇಖಕ: ಅನಿಲ್ ಕುಮಾರ್ ಮೊಳಹಳ್ಳಿ

ಇತ್ತೀಚೆಗೆ (2017 ಮೇ) ಪ್ರಕಟವಾದ ದೇಶದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೊಂದಾದ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ  ಮೂಲತಃ ಆನೆಕಲ್ ಅಂಜನಪ್ಪ (ಪರಿಶಿಷ್ಟ ಜಾತಿ) ದೇಶದಲ್ಲಿಯೇ 32ನೇ  ರ್ಯಾಂಕ್ ಗಳಿಸಿ ಅಸಾಧಾರಣ ಸಾಧನೆ ಮಾಡಿದ್ದಾನೆ. ಈ ಅಂಜನಪ್ಪ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಅನಾಥ ಸ್ಥಿತಿಯಲ್ಲಿ ಬೆಳೆದವ. ಹೆಬ್ಬಂಡೆಯಂತೆ ನಿಂತ ತಾಯಿ ಲಿಂಗಮ್ಮ ಕೂಲಿ ಮಾಡಿ ಅಂಜನಪ್ಪನ ಪಾಲನೆ ಪೋಷಣೆ ಮಾಡಿ ಬೆಳೆಸಿದಳು. ಕೂಲಿ ಹಣದಲ್ಲಿಯೇ ಹೊಟ್ಟೆಬಟ್ಟೆ ಕಟ್ಟಿ ಒಬ್ಬನೇ ಮಗನಾದ ಅಂಜನಪ್ಪನನ್ನು ಓದಿಸಿದಳು. ಎಸ್ಎಸ್ಎಲ್ಸಿ ನಂತರ ಅಂಜನಪ್ಪನನ್ನು ಏನು ಮಾಡಲಿ ಎಂಬ ಯಕ್ಷ ಪ್ರಶ್ನೆ ಆಕೆಯನ್ನು ಕಾಡುತ್ತಿತ್ತು. ಮಗ ಓದಿನಲ್ಲಿ ಬುದ್ದಿವಂತ; ಆದರೆ ದಿನದ ಅಗತ್ಯತೆಗಳನ್ನು ಪೂರೈಸುವುದೇ ಕಷ್ಟವಾಗಿರುವಾಗ ಮುಂದಿನ ಈ ವಿಧ್ಯಾಭ್ಯಾಸ ಹೇಗೆ? ಪಿಯುಸಿಯಾಗಲೀ, ಐಟಿಐಗಾಗಲೀ ಒಳ್ಳೆಯ ಶಾಲೆಗೆ ಸೇರಿಸುವುದು ಹೇಗೆ ಎಂದು ದಿಕ್ಕು ಕಾಣದೇ ಕೂತಿದ್ದ ಆಕೆಯ ಕಣ್ಣಲ್ಲಿ ಭರವಸೆ ಮೂಡಿಸಿದ್ದು, ಮೊದಲು ಹೇಸರೇ ಕೇಳಿರದ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ದೇಶದಲ್ಲಿಯೇ ೩೨ನೇ ್ಯಾಂಕ್ ಪಡೆಯುವ ಸಾಧಕನಾಗಿ ಆಂಜನಪ್ಪನನ್ನು ನಿಲ್ಲಿಸಿದ ಯೋಜಕ ತಪಸ್ಎಂಬ ರಾಷ್ಟ್ರೋತ್ಥಾನ ಪರಿಷತ್ ವಿದ್ಯಾದಾನ ಯೋಜನೆ.
ಬೆಂಗಳೂರಿನ ಬನಶಂಕರಿಯಲ್ಲಿರುವ ತಪಸ್’ ಕೇಂದ್ರಕ್ಕೆ ನೀವು ಭೇಟಿ ನೀಡಿದರೆ ಇಂತಹ ಹಲವು ಅಂಜನಪ್ಪ ನಿಮಗೆ ಕಾಣಸಿಗುತ್ತಾರೆ. ಅಲ್ಲಿರುವ ಒಬ್ಬೊಬ್ಬರ ಹಿನ್ನೆಲೆಯೂ ಒಂದೊಂದು ಕಥೆ ಹೇಳುತ್ತದೆ. ಬುದ್ದಿವಂತನಾಗಿದ್ದರೂ ತಂದೆಯ ಜೊತೆ ಕೂಲಿಯೇ ಗತಿ ಎಂದುಕೊಂಡಿದ್ದವ ಒಬ್ಬನಾದರೆ, ಅಪ್ಪನ ಟೈಲರಿಂಗ್ ಮೇಷಿನ್ ಮೇಲೆ ನಾನೂ ಕುಳಿತು ಹೊಟ್ಟೆ ತುಂಬಿಸಿಕೊಳ್ಳುತ್ತೇನೆ ಎಂದುಕೊಂಡಿದ್ದವ ಇನ್ನೊಬ್ಬ, ಮನೆಮನೆಗೆ ಹೋಗಿ ಪಾತ್ರೆ ತೊಳೆದು ಮನೆಗೆಲಸ ಮಾಡಿ ಎಸ್ಎಸ್ಎಲ್ಸಿ ಮುಗಿಸಿದೆ; ಮುಂದೇನು? ಎಂಬ ಭವಿಷ್ಯದ ಕಗ್ಗತ್ತಲಲ್ಲಿದ್ದವರು...   ಇಂತಹವರೇ ಇಂದು, ತಪಸ್ ಕೇಂದ್ರದಲ್ಲಿ ಪ್ರಕಾಶಮಾನರಾಗಿ ಕಾಣುತ್ತಿದ್ದಾರೆ. ಮಾತ್ರವಲ್ಲ ನಾನೂ ನಾಳೆ ನಂದನ್ ನೀಲಕೆಣಿ ಆಗುತ್ತೇನೆ, ನಾರಾಯಣ ಮೂರ್ತಿ ಯಾಗುತ್ತೇನೆ ಎಂದು ಕನಸು ಕಾಣುತ್ತಿದ್ದಾರೆ.

`ತಪಸ್
ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಂಡುಮಕ್ಕಳಿಗೆ ಉಚಿತ ವಸತಿ ಸಹಿತ ಪಿ.ಯು.ಸಿಶಿಕ್ಷಣದ ಜೊತೆಗೆ ಐಐಟಿಜೆಇಇ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೊಳಿಸುವ ಉದ್ದೇಶದಿಂದ 2012ರಲ್ಲಿ ’ತಪಸ್’ ಯೋಜನೆಯನ್ನು ಪ್ರಾರಂಭಿಸಲಾಯಿತು.
ಸಾಧನಾ
ವಿದ್ಯಾರ್ಥಿನಿಯರೂ ಪ್ರತಿಷ್ಠಿತ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ನೂತನವಾಗಿ 201718ನೇ ಶೈಕ್ಷಣಿಕ ವರ್ಷದಿಂದ ಸಾಧನಾ ಎಂಬ ಯೋಜನೆಯನ್ನು ಪ್ರಾರಂಭಿಸಲಾಗಿದೆ ಯೋಜನೆಯ ಮೂಲಕ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ (ಹೆಣ್ಣುಮಕ್ಕಳಿಗೆಉಚಿತ ವಸತಿ ಸಹಿತ ಪಿ.ಯು.ಸಿಶಿಕ್ಷಣದ ಜೊತೆಗೆ ಪ್ರತಿಷ್ಠಿತ NEET/CET ಪ್ರವೇಶ ಪರೀಕ್ಷೆಗೆ ತರಬೇತಿಗೊಳಿಸಲಾಗುತ್ತದೆಇದಕ್ಕೆ ಎಲ್ಲ  ವ್ಯವಸ್ಥೆಗಳೂ ತಪಸ್ನಂತೆಯೇ ಇರುತ್ತದೆ.


ಅಮಂತ್ರಂ ಅಕ್ಷರಂ ನಾಸ್ತಿ
ನಾಸ್ತಿ ಮೂಲ ಮನೌಷಧಂ
ಅಯೋಗ್ಯೋ ಪುರುಷೋನಾಸ್ತಿ
ಯೋಜಕೋ ಸ್ತತ್ರ ದುರ್ಲಭಃ
ಎಂಬ ಶ್ಲೋಕವನ್ನು ನಾವೇಲ್ಲ ಕೇಳಿಯೇ ಇದ್ದೇವೆ. ದುರ್ಲಭವಾದ ಯೋಜಕನ ಕೆಲಸವನ್ನು ರಾಷ್ಟ್ರೋತ್ಥಾನ ಪರಿಷತ್ ತಪಸ್ ಯೋಜನೆ ಮಾಡುತ್ತಿದೆ. ಯಾಕೆಂದರೆ ನಮ್ಮ ಸಮಾಜದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಮಾರ್ಗದರ್ಶನ ಮಾಡುವವರ ಅಗತ್ಯವಿದೆ. ತಪಸ್ ಮಾಡುತ್ತಿರುವುದೂ ಅಂತಹ ಕಲೆಸವನ್ನು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಕೆಲವೇ ಶಿಕ್ಷಣ ಸಂಸ್ಥೆಗಳಲ್ಲಿ ಭಾರತದ ಪ್ರತಿಷ್ಠಿತ ಐಐಟಿ ಕೂಡಾ ಒಂದು.  2016 ತನಕ ಕರ್ನಾಟಕದಲ್ಲಿ ಯಾವುದೇ ಐಐಟಿ ಕಾಲೇಜುಗಳು ಇರಲಿಲ್ಲ. ಇನ್ನು ಐಐಟಿ ದುಬಾರಿಯಲ್ಲದಿದ್ದರೂ ಅಲ್ಲಿಗೆ ಹೋಗಬೇಕಾದ ದಾರಿ ಮಾತ್ರ ಕಠಿಣವಾದದ್ದು. ಇದಕ್ಕಾಗಿ ತರಬೇತಿ ಅತ್ಯಗತ್ಯ. ತರಬೇತಿ ನೀಡುವ ಸಂಸ್ಥೆಗಳೂ ಕರ್ನಾಟಕದಲ್ಲಿ ವಿರಳ. ಇರುವ ತರಬೇತಿ ಕೇಂದ್ರಗಳಲ್ಲಿಯೂ ಒಂದು ವರ್ಷಕ್ಕೆ 2-3 ಲಕ್ಷ ಶುಲ್ಕ. ಹೀಗೆ ಹತ್ತು ಹಲವು ಕಾರಣಗಳಿಂದ ಕರ್ನಾಟಕದಲ್ಲಿ ಐಐಟಿ ಕನಸು ಕಾಣುವ ವಿಧ್ಯಾರ್ಥಿಗಳ ಸಂಖ್ಯೆ ವಿರಳಾತಿ ವಿರಳ. ಇಂತಹ ಸಂದರ್ಭದಲ್ಲಿ (2012ರಲ್ಲಿ) ಕರ್ನಾಟಕದ ವಿದ್ಯಾರ್ಥಿಗಳೂ ಪ್ರತಿಷ್ಠಿತ ಐಐಟಿ ಶಿಕ್ಷಣ ಪಡೆಯಬೇಕು. ಅದೂ ಗ್ರಾಮೀಣ ಹಳ್ಳಿಯ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಐಐಟಿ ಶಿಕ್ಷಣ ಪಡೆಯಬೇಕು. ಅದಕ್ಕಾಗಿ ಒಂದು ಯೋಜನೆ ರೂಪಿಸುವುದು ಸುಲಭಸಾಧ್ಯವಲ್ಲ. ಅಂತಹ ಸಾಹಸಕ್ಕೆ ರಾಷ್ಟ್ರೋತ್ಥಾನ ಪರಿಷತ್ ಅಣಿಯಾಯಿತು.
ಹೀಗೆ ರೂಪಗೊಂಡ ಯೋಜನೆಯ ಪ್ರತಿಫಲ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ‘ನನಗೀಗ ರಾಷ್ಟ್ರೋತ್ಥಾನ ಪರಿಷತ್ ತಪಸ್ನವರು ಐಐಟಿಗೆ ಬೇಕಾದ ತರಬೇತಿ ನೀಡುತ್ತಿದ್ದಾರೆ. ನೀಜವಾಗಿಯೂ ನಾನು ಐಐಟಿ ಹೆಸರು ಕೇಳಿದ್ದು ನವೆಂಬರ್ನಲ್ಲಿ ನಮ್ಮ ಶಾಲೆಗೆ ತಪಸ್ ಪತ್ರ ಬಂದಾಗ; ನಮ್ಮ ಅಧ್ಯಾಪಕರು ಅದನ್ನು ನಮಗೆಲ್ಲ ಓದಿ ಹೇಳಿದಾಗಲೇ!’ - ತಪಸ್ ಶೇ. 95%ಕ್ಕೂ ಹೆಚ್ಚು ಮ್ಕಕಳು ಇದೇ ಮಾತನ್ನು ಪುನರುಚ್ಚರಿಸುತ್ತಾರೆ. ಕನಸೇ ಇರದ ಮಕ್ಕಳಲ್ಲಿ ಕನಸು ಬಿತ್ತಿ, ನೀರೆರೆದು, ಪೋಷಿಸುವ ಕಾರ್ಯವನ್ನು ತಪಸ್ ಕಳೆದ 5 ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ.

ವಿದ್ಯಾರ್ಥಿಗಳ  ಆಯ್ಕೆ ಹೇಗೆ
ಸಮಾಜದ ಕಟ್ಟಕಡೆಯ ವ್ಯಕ್ತಿಯೂ ತಪಸ್ ಯೋಜನೆಯ ಪ್ರಯೋಜನ ಪಡೆಯಬೇಕು ಎನ್ನುವ ದೃಷ್ಟಿಯಿಂದ ವರ್ಷವಿಡೀ ವಿಶೇಷ ಪ್ರಯತ್ನಗಳನ್ನು ನಡೆಸಲಾಗುತ್ತದೆ.
  • ಪ್ರತೀ ವರ್ಷ ಜುಲೈ-ಅಗಸ್ಟ್ ತಿಂಗಳಲ್ಲಿ ಕರ್ನಾಟಕದ ಎಲ್ಲ ಪ್ರೌಢಶಾಲೆಗಳ (ಸುಮಾರು ೧೨,೦೦೦) ಮುಖ್ಯೋಪಾಧ್ಯಾಯರಿಗೆ ಪತ್ರ ಬರೆದು ತಪಸ್ ಯೋಜನೆಯ ಪರಿಚಯ ಹಾಗೂ ನಿಮ್ಮಲ್ಲಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಡಿಸೆಂಬರ್ ೨೫ರಂದು ನಡೆಯುವ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಎಂದು ಮನವಿ ಮಾಡಿಕೊಳ್ಳಾಗುತ್ತದೆ. ಇದಕ್ಕಾಗಿಯೇ ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಇಲಾಖೆಯಿಂದ ಎಲ್ಲ ಪ್ರೌಢಶಾಲೆಗಳ ವಿಳಾಸಗಳನ್ನು ಸಂಗ್ರಹಿಸಲಾಗುತ್ತದೆ.
  • ತಪಸ್ ತಂಡ ರಾಜ್ಯದ 5೦ಕ್ಕೂ ಅಧಿಕ ಮೋರಾರ್ಜಿ ದೇಸಾಯಿ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿಯ ಪ್ರಮುಖರು ಹಾಗೂ ವಿದ್ಯಾರ್ಥಿಗಳಿಗೆ ತಪಸ್ ಯೋಜನೆಯನ್ನು ಪರಿಚಯಿಸಿ, ಪ್ರವೇಶ ಪರೀಕ್ಷೆಗೆ ಹೆಸರನ್ನು ನೋಂದಾಯಿಸುವಂತೆ ಪ್ರೇರೇಪಿಸಲಾಗುತ್ತದೆ.
  • ಎಲ್ಲ ಅರ್ಜಿಗಳನ್ನು ಸಂಗ್ರಹಿಸಿ, ಅವುಗಳನ್ನು ಜಿಲ್ಲಾವಾರು ವಿಂಗಡಿಸಿ ಡಿಸೆಂಬರ್ ೨೫ರಂದು ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳೂ ಸೇರಿದಂತೆ ರಾಜ್ಯದ ೪೦ ಕಡೆಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ತಪಸ್ನಿಂದಲೇ ಅಧ್ಯಾಪಕರನ್ನು ಆಯಾ ಜಿಲ್ಲಾ ಕೇಂದ್ರಗಳಿಗೆ ಕಳುಹಿಸಿ ಪರೀಕ್ಷೆಯನ್ನು ನಡೆಸಲಾಗುತ್ತದೆ.
  • ಪ್ರತೀ ವರ್ಷ ಸುಮಾರು ೨೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸುತ್ತಾರೆ. ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಸುಮಾರು ೧೫೦ ರಿಂದ ೧೬೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದು ಕೇವಲ ಮೆರಿಟ್ ಆಧಾರಿತವಾಗಿರುತ್ತದೆ. ಯಾವುದೇ ಜಾತಿ, ಮತ ಮುಂತಾದವುಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
  • ವಾಸ್ತವಾಂಶಗಳನ್ನು ಅರಿಯುವ ದೃಷ್ಟಿಯಿಂದ ಆಯ್ದ ಮಾಡಿದ ೧೫೦-೧೬೦ ವಿದ್ಯಾರ್ಥಿಗಳ ಪ್ರತಿಯೊಬ್ಬರ ಮನೆಗೂ ಖುದ್ದು ಭೇಟಿ ನೀಡಿ, ಅವರು ನಿಜವಾಗಿಯೂ ಬಡತನದಲ್ಲಿದ್ದಾರೆಯೇ? ನಿಜವಾಗಿಯೂ ಆತನಿಗೆ ಕಲಿಯುವ ಆಸಕ್ತಿ ಇದೆಯೇ? ಅವನ ಮನೆಯ ವಾತಾವರಣ ಹೇಗಿದೆ? ಮುಂತಾದ ಸಂಗತಿಗಳನ್ನು ವಿಶೇಷವಾಗಿ ಗುರುತಿಸಲಾಗುತ್ತದೆ. ಎರಡು ವರ್ಷ ಉಚಿತ ಶಿಕ್ಷಣ ಲಭಿಸುತ್ತದೆ ಎಂದು ಕೆಲವರು ಆರ್ಥಿಕವಾಗಿ ಸದೃಢವಾಗಿದ್ದರೂ ಬಡವರೆಂದು ಹೇಳುತ್ತಾರೆ. ಇದು ಪರೀಕ್ಷೆ ಬರೆದಾಗ ಗೊತ್ತಾಗಿರುವುದಿಲ್ಲ. ವೈಯಕ್ತಿಕ ಭೇಟಿಯಿಂದ ವಾಸ್ತವಾಂಶಗಳನ್ನು ದೃಢಪಡಿಸಕೊಳ್ಳಲಾಗುತ್ತದೆ.
  • ಮಕ್ಕಳೆಲ್ಲರೂ ಗ್ರಾಮೀಣ ಪ್ರದೇಶದವರಾಗಿರುವುದರಿಂದ ಅವರಿಗೆ ಐಐಟಿಯ ಕುರಿತ ಮಾಹಿತಿಗಳೇ ತಿಳಿದಿರುವುದಿಲ್ಲ. ಹೀಗಾಗಿ ಅವರ ಮನೆಗೆ ಭೇಟಿ ನೀಡಿದಾಗ ಐಐಟಿ ಎಂದರೇನು? ಐಐಟಿಯ ಪ್ರಾಮುಖ್ಯತೆ ಏನು? ಸಾಧಾರಣ ಇಂಜಿನಿಯರಿಂಗ್ ಕಾಲೇಜಿಗೂ ಐಐಟಿಗೂ ಏನು ವ್ಯತ್ಯಾಸ, ಪ್ರಸ್ತುತ ದೇಶದಲ್ಲಿ ಅದು ಎಲ್ಲೆಲ್ಲಿ ಇದೆ, ಐಐಟಿ ಮಾಡಿದರೆ ಲಾಭವೇನು, ಅಲ್ಲಿ ಸೀಟು ಪಡೆಯಬೇಕಾದರೆ ನೀನೆಷ್ಟು ಪರಿಶ್ರಮ ಪಡಬೇಕು. ಅದು ಸುಮ್ಮನೆ ಸುಲಭವಾಗಿ ಸಿಗುವ ವಸ್ತುವಲ್ಲ - ಮುಂತಾದವುಗಳನ್ನು ತಿಳಿಸಿಕೊಡಲಾಗುತ್ತದೆ. ಮೂಲಕ ಮಗುವು ಐಐಟಿಗೆ ಸೇರಲು ಮಾನಸಿಕವಾಗಿ ತಯಾರಿ ಮಾಡುವ ಪ್ರಯತ್ನ ನಡೆಸಲಾಗುತ್ತದೆ. ಜೊತೆಗೆ ಮಗುವು ಮನೆಯಿಂದ ದೂರವಿರಬೇಕಾಗುವುದರಿಂದ ಪೋಷಕರಿಗೆ ಧೈರ್ಯ ತುಂಬುವ ಕಾರ್ಯವೂ ನಡೆಯುತ್ತದೆ.
  • ಹೀಗೆ ವಿದ್ಯಾರ್ಥಿಯ ಮನಸ್ಥಿತಿ, ಓದುವ ಆಸಕ್ತಿ (ಕೆಲವರಿಗೆ ಎಂಬಿಬಿಎಸ್, ಡಿಪ್ಲೋಮಾ ಮಾಡುವ ಆಸೆಯಿರುತ್ತದೆ), ಸಾಧಿಸುವ ಛಲ, ಪೋಷಕರ ಆರ್ಥಿಕ ಸ್ಥಿತಿ ಹಾಗೂ ಮನಸ್ಥಿತಿ - ಇವುಗಳೆಲ್ಲವನ್ನೂ ಗಮನಿಸಿ ೧೬೦ರಲ್ಲಿ ೧೦೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ೧೦ ದಿನಗಳ ವಸತಿ ಸಹಿತ ಶಿಬಿರ ನಡೆಸಲಾಗುತ್ತದೆ.
  • ಎಸ್ಎಸ್ಎಲ್ಸಿ ಪರೀಕ್ಷೆಯ ನಂತರ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ಕೇಂದ್ರ ಕಛೇರಿಯಲ್ಲಿ ನಡೆಯುವ ೧೦ ದಿನಗಳ ರೆಸಿಡೆನ್ಸಿಯಲ್ ಟ್ರೈನಿಂಗ್ ಕ್ಯಾಂಪ್ನಲ್ಲಿ ಬೇಸ್ ಶಿಕ್ಷಕರು ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಪಾಠ ಮಾಡುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗಿನ ಪಾಠದ ಆಧಾರದ ಮೇಲೆ ಪ್ರತೀ ದಿನ ರಾತ್ರಿ ಪರೀಕ್ಷೆ ನಡೆಯುತ್ತದೆ. ಹತ್ತೂ ದಿನಗಳ ಅಂಕಗಳನ್ನು ಆಧಾರವಾಗಿಟ್ಟುಕೊಂಡು ಟಾಪ್ ೪೦ ವಿದ್ಯಾರ್ಥಿಗಳನ್ನು ತಪಸ್ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ.
  • ಹೀಗೆ ಬಡತನದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮನೆಮನೆ ಭೇಟಿಯ ಮೂಲಕ ಅವರ ನೈಜ ಆರ್ಥಿಕ ಸ್ಥಿತಿ ತಿಳಿದರೆ, ಶಿಬಿರದ ಮೂಲಕ ವಿದ್ಯಾರ್ಥಿಯ ಪ್ರತಿಭೆಯ ಅನಾವರಣವಾಗುತ್ತದೆ. ಹೀಗೆ ಆಯ್ದ ಗರಿಷ್ಠ ೪೦ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ಪಿಯುಸಿ ಹಾಗೂ ಜೆಇಇ-ಐಐಟಿ ತರಬೇತಿ ನೀಡಲಾಗುತ್ತದೆ.

  

ವಿದ್ಯಾರ್ಥಿಗಳು ತಂಗುವ ಸ್ಥಳ
  • ಆಯ್ಕೆಗೊಂಡ ಮಕ್ಕಳಿಗೆ ಪ್ರತೀ ದಿನ ಸಂಸ್ಕಾರ ಮೂಡಿಸುವ ವಿವಿಧ ಚಟುವಟಿಕೆಗಳನ್ನು, ಮಾನಸಿಕ, ದೈಹಿಕ ವಿಕಾಸಕ್ಕಾಗಿ ಯೋಗ, ಧ್ಯಾನ, ಜಾಗಿಂಗ್, ವ್ಯಾಯಾಮ ಪ್ರಾರ್ಥನೆ, ಭಜನೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
  • ಅವರಿಗೆ ಶೈಕ್ಷಣಿಕವಾಗಿ ಅಗತ್ಯವಾದ ಎಲ್ಲ ನೆರವನ್ನು ರಾಷ್ಟ್ರೋತ್ಥಾನ ಒದಗಿಸುತ್ತದೆ.
  •  ಪ್ರತಿಷ್ಠಿತ ಬೇಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ತರಬೇತಿ ನೀಡುತ್ತದೆ.
  • ಪ್ರತೀ ಭಾನುವಾರ ಬೇಸ್ ವತಿಯಿಂದ ಪರೀಕ್ಷೆ ನಡೆಸಲಾಗುತ್ತದೆ. ಜೊತೆಜೊತೆಗೆ ಹಿರಿಯರಿಂದ ಮಾರ್ಗದರ್ಶನ ಕಾರ್ಯಕ್ರಮಗಳೂ ನಡೆಯುತ್ತವೆ.
  • ಎರಡು ವರ್ಷ ಶಿಕ್ಷಣ ಪೂರ್ಣಗೊಳಿಸಿ ಹೋರಹೋಗಲಿರುವ ವಿದ್ಯಾರ್ಥಿಗಳಲ್ಲಿ ದೇಶ ಮೊದಲು ಹಾಗೂ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಮನೋಭಾವ ಬಿತ್ತುವ ದೃಷ್ಟಿಯಿಂದ ಸಂಕಲ್ಪ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ತಪಸ್ಸನಿನ ಫಲ
ತಪಸ್ ನಡಿಗೆಯನ್ನು ಅವಲೋಕಿಸಿದಾಗ ಕಾಣುವುದೂ ಸಾಧನಾಪಥವನ್ನೇ. ತಪಸ್ ಯೋಜನೆ ಪ್ರಾರಂಭವಾದದ್ದು ೨೦೧೨ರಲ್ಲಿ. ಇದೀಗ ೬ನೇ ವರ್ಷಕ್ಕೆ ಕಾಲಿಟ್ಟಿರುವ ತಪಸ್ನಿಂದ ಈವರೆಗೆ ತಂಡಗಳು ಶಿಕ್ಷಣ ಪೂರೈಸಿ ಹೊರಬಂದಿವೆ. ಈಗ ಇನ್ನೆರಡು ತಂಡಗಳು ಆಯ್ಕೆಯಾಗಿ ಶಿಕ್ಷಣ ಪಡೆಯುತ್ತಿವೆ. ಈವರೆಗೆ ಒಟ್ಟು ಸುಮಾರು ೧೯೦ಕ್ಕೂ ಅಧಿಕ ಮಕ್ಕಳು ಇದರ ಲಾಭ ಪಡೆದಿದ್ದಾರೆ. ಕೇವಲ ಪ್ರತಿಭೆ ಮತ್ತು ಆರ್ಥಿಕ ಹಿಂದುಳಿರುವಿಕೆಯೇ ಆಯ್ಕೆಯ ಮಾನದಂಡವಾಗಿದ್ದರೂ ಇಲ್ಲಿ ಶಿಕ್ಷಣ ಪಡೆದ ಶೇ. ೯೦ಕ್ಕೂ ಅಧಿಕ ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳಿಗೆ ಸೇರಿದವರು.
ಅನುಭವವೇ ಇಲ್ಲದೇ ಪ್ರಾರಂಭಿಸಿದ್ದರೂ ಮೊದಲ ಬ್ಯಾಚ್ (೨೦೧೨-೧೪) ಹೊರಬಂದಾಗ ವಿಶ್ವಾಸ ಮೂಡಿಸುವಂತಹ ಫಲಿತಾಂಶವೇ ಕಾಣಸಿಕ್ಕಿತ್ತು. ಶಿಕ್ಷಣ ಪಡೆದ ೩೪ ಮಂದಿಯಲ್ಲಿ ಮಂದಿ ಐಐಟಿ ಹಾಗೂ ೩೦ ಮಂದಿ ಎನ್ಐಟಿ ಶಿಕ್ಷಣಕ್ಕೆ ಅರ್ಹತೆ ಪಡೆದರು. ಮುಂದೆ ಕಾಣಸಿಕ್ಕಿದ್ದು ಇದೇ ಭರವಸೆಯ ಹೆಜ್ಜೆಗಳು.
ಕಳೆದ ವರ್ಷ ೨೦೧೫-೧೬ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಪಸ್ ೩೪ ಮಂದಿಯಲ್ಲಿ ೩೧ ಮಂದಿ ಡಿಸ್ಟಿಂಕ್ಷನ್ ಗಳಿಸಿ ಉತ್ತೀರ್ಣರಾದರು. ಜೆಇಇ ಮೈನ್ಸ್ನಲ್ಲಿ ೨೬ ಮಂದಿ ಅರ್ಹತೆ ಪಡೆದರೆ, ಜೆಇಇ  ಅಡ್ವಾನ್ಸ್ನಲ್ಲಿ ೧೧ ಮಂದಿ ಅರ್ಹತೆ ಪಡೆದು ಐಐಟಿ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ. ಸಿಇಟಿಗೆ ಹೆಚ್ಚು ಪ್ರಾಮುಖ್ಯತೆ ನೀಡದಿದ್ದರೂ ೧೦ ಮಂದಿ ವಿದ್ಯಾರ್ಥಿಗಳು ೫೦೦ರ ಒಳಗಿನ ್ಯಾಂಕ್ನಲ್ಲಿಯೂ ಹಾಗೂ ೧೪ ಮಂದಿ ವಿದ್ಯಾರ್ಥಿಗಳು ೧೦೦೦ದ ಒಳಗಿನ ್ಯಾಂಕ್ನೊಳಗೆ ಸ್ಥಾನ ಪಡೆದರು.
೨೦೧೭ರ ಜೆಇಇ ಮೈನ್ಸ್ ಫಲಿತಾಂಶದಲ್ಲಿ ತಪಸ್ ೩೧ ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಭಾಗಲಕೋಟೆಯ ಬೀಳಗಿಯ ಸಾಮಾನ್ಯ ಕೃಷಿಕ ಕುಟುಂಬದ ಶಂಕರ್ ನಾಯಕ್ ಹಾಗೂ ಮೀನಾಕ್ಷಿ ನಾಯಕ್ ದಂಪತಿಗಳ ಮಗನಾದ ಪ್ರೇಮ್ಕುಮಾರ್ (ಪರಿಶಿಷ್ಟ ಜಾತಿ) ದೇಶದಲ್ಲಿಯೇ ೧೧೬ನೇ ್ಯಾಂಕ್ ಹಾಗೂ ಶಿರಸಿಯ ಸಾಮಾನ್ಯ ಕೂಲಿಕಾರ್ಮಿಕ ಕುಟುಂಬದ ಶ್ರೀಧರ್ ದೇಶದಲ್ಲಿಯೇ ,೦೪೫ನೇ ್ಯಾಂಕ್ ಗಳಿಸಿದ್ದಾನೆ. ಪಿಯುಸಿಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದು, ಇತ್ತೀಚೆಗೆ ಪ್ರಕಟಗೊಂಡ ಫಲಿತಾಂಶದಲ್ಲಿ ತಪಸ್ ೩೫ ವಿದ್ಯಾರ್ಥಿಗಳಲ್ಲಿ ೩೩ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಉತೀರ್ಣರಾಗಿದ್ದಾರೆ. ಇನ್ನುಳಿದ ಇಬ್ಬರು ಕೂಡಾ ಕೆಲವೇ ಅಂಕಗಳಲ್ಲಿ ಡಿಸ್ಟಿಂಕ್ಷನ್ ತಪ್ಪಿಸಿಕೊಂಡವರು. ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಮಕ್ಕಳಿಂದ ಅಪೂರ್ವವಾದ ಫಲಿತಾಂಶ ಹೊರತಂದಿದ್ದು ಒಂದು ಅಪೂರ್ವ ಸಾಧನೆಯೇ ಸರಿ.
ಬಹುಶಃ ಕರ್ನಾಟಕದಲ್ಲಿ ರೀತಿಯ ಪ್ರಯೋಗ ಇನ್ನೊಂದು ಕಾಣಸಿಗುವುದಿಲ್ಲ.

ಉಳಿದ ಎಲ್ಲ ವಿದ್ಯಾರ್ಥಿಗಳೂ ರಾಜ್ಯದ ಇಂದು ರಾಜ್ಯದ ಪ್ರತಿಷ್ಠಿತ IIST, RV, PESIT, BMSನಂತಹ ತಾಂತ್ರಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವುಗಳಲ್ಲಿ ಶೇ. ೮೫ಕ್ಕೂ ಅಧಿಕ ವಿದ್ಯಾರ್ಥಿಗಳು SNQ (Supernumerary quota) ಮೂಲಕ ಪ್ರವೇಶ ಪಡೆದಿದ್ದಾರೆ.

ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರೊಂದಿಗೆ ಸಂದರ್ಶನ
 

  • ತಪಸ್ ಪ್ರಾರಂಭಿಸುವ ಚಿಂತನೆ ಹೇಗೆ ಪ್ರಾರಂಭವಾಯಿತು?
ಎಬಿವಿಪಿ ವತಿಯಿಂದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಹಾರದ ಸೂಪರ್ ೩೦ ಜನಕ ಆನಂದ ಕುಮಾರ್ ಅವರಿಗೆ ಸಂಮಾನ ಮಾಡಲಾಯಿತು. ಸಂಮಾನ ಸ್ವೀಕರಿಸಿ ತನ್ನ ಸಾಧನೆಗಳನ್ನು ಅವರು ನಮ್ಮೊಂದಿಗೆ ಹಂಚಿಕೊಂಡರು. ಇಂತಹದ್ದೊಂದನ್ನು ನಾವೂ ಕರ್ನಾಟಕದಲ್ಲಿ ಯಾಕೆ ಮಾಡಬಾರದು ಎಂಬ ಪ್ರಶ್ನೆ ನನ್ನನ್ನು ಕಾಡಿತು. ಈ ಚಿಂತನೆಗೆ ಅರ್ಧಂಬದ್ದ ಬೇಕೇ ಬೇಡವೇ ಎಂದೆನಿಸುತ್ತಿದ್ದಾಗ ಧೈರ್ಯ ತುಂಬಿ, ಅದಕ್ಕೊಂದು ರೂಪ ಕೊಡುವಲ್ಲಿ ಮಾರ್ಗದರ್ಶನ ಮಾಡಿದವರು ಆಗ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಪ್ರಚಾರಕರಾಗಿದ್ದ ಮುಕುಂದ್ ಸಿ.ಆರ್. ಮತ್ತು ಗ್ಲೋಬಲ್ ಎಡ್ಜ್ ಸಂಸ್ಥೆಯ ಎಂ.ಪಿ. ಕುಮಾರ್ ಅವರು.
  • ಈ ಯೋಜನಗಾಗಿ ನೀವು ಸೂಪರ್ 30ಯನ್ನು ಖುದ್ದು ಭೇಟಿ ಮಾಡಿ ಚರ್ಚೆ ನಡೆಸಿದ್ದೀರಿ. ಸೂಪರ್ 30ಗೂ ತಪಸ್‌ಗೂ ಏನು ವ್ಯತ್ಯಾಸ?
ಸೂಪರ್ 30ಯಲ್ಲಿ ಆನಂದ ಕುಮಾರ್ ಬಿಹಾರದಲ್ಲಿ ಪ್ರಾರಂಭಿಸಿರುವ ಒಂದು ಯೋಜನೆ. 2ವರ್ಷ ಪಿಯುಸಿ ಶಿಕ್ಷಣದ ಫಲಿತಾಂಶ ಬಂದ ನಂತರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆನಂತರದ ಒಂದು ವರ್ಷ ಅವರು ಶಿಕ್ಷಣವನ್ನು ಮೊಟಕುಗೊಳಿಸಲಾಗುತ್ತದೆ. ಆ ವಿದ್ಯಾರ್ಥಿಗಳಿಗೆ ಈ ಒಂದು ವರ್ಷ ಸಂಪೂರ್ಣ ಈ ಐಐಟಿ-ಜೆಇಇಗೆ ಅಗತ್ಯ ತರಬೇತಿ ನೀಡುತ್ತಾರೆ. ಆದರೆ ಕರ್ನಾಟಕದಲ್ಲಿ ಹಳ್ಳಿಯ ಗ್ರಾಮೀಣ ಮಕ್ಕಳಿಗೆ ಒಂದು ವರ್ಷ ಶಿಕ್ಷಣವನ್ನು ಮೊಟಕುಗೊಳಿಸಿ, ಈ ಶಿಕ್ಷಣ ಪಡೆಯುವ ವಿಶ್ವಾಸ ಮೂಡಿಸುವುದು ಕಷ. ಹೀಗಾಗಿ ಅದನ್ನು ಸ್ವಲ್ಪ ಬದಲಾಯಿಸಿ, ಅವರು ಎರಡು ವರ್ಷ ನಮ್ಮ ಜೊತೆಗೆ ಇರುವಂತಾಗಬೇಕು. ಈ ಸಮಯದಲ್ಲಿ ಅವರಿಗೆ ಪಿಯುಸಿ ಶಿಕ್ಷಣ ಸಿಗಬೇಕು. ಜೊತೆಜೊತೆಗೆ ಅವರು ಐಐಟಿ-ಜೆಇಇ ಶಿಕ್ಷಣ ನೀಡಲು ನಿಶ್ಚಯಿಸಿ ೨೦೧೨ರಲ್ಲಿ ತಪಸ್ ಯೋಜನೆಯನ್ನು ಪ್ರಾರಂಭಿಸಲಾಯಿತು.

  • 2 ವರ್ಷಗಳ ಕಾಲ ನಿಮ್ಮ ಜೊತೆಗಿರುವ ಈ ಮಕ್ಕಳಿಗೆ ನೀವು ಎಂತಹ ಶಿಕ್ಷಣವನ್ನು ನೀಡುತ್ತೀರಿ?
ಬಿಹಾರದಂತೆ ಈ ಮಕ್ಕಳು ವಿದ್ಯಾಭ್ಯಾಸ ಡಿಸ್‌ಕಂಟಿನ್ಯೂ ಮಾಡಿ ಒಂದು ವರ್ಷ ಹಾಳಾಗಬಾರದು. ಬದಲಾಗಿ ಅವರು ಎರಡು ವರ್ಷಗಳ ಕಾಲ ನಮ್ಮ ಜೊತೆಗಿರಬೇಕು. ಆ ಸಂದರ್ಭದಲ್ಲಿ ಆತನ ಪ್ರತಿಭಾವಿಕಾಸವೂ ಆಗಬೇಕು. ಜೊತೆಗೆ ಆತ ಒಬ್ಬ ದೇಶಭಕ್ತ, ಸುಸಂಸ್ಕೃತ ವ್ಯಕ್ತಿಯನ್ನಾಗಿಯೂ  ರೂಪಗೊಳ್ಳಬೇಕು. ಅದಕ್ಕೆ ಪೂರಕ ಶಿಕ್ಷಣ ನೀಡುತ್ತೇವೆ.
ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ’ಬೇಸ್’ ಇವರಿಗೆ ಐಐಟಿ-ಜೆಇಇ ಪ್ರವೇಶಕ್ಕೆ ಅಗತ್ಯ ತರಬೇತಿಯನ್ನು ಉಚಿತವಾಗಿ ನೀಡುತ್ತದೆ. ಹಾಗೂ ರಾಷ್ಟ್ರೋತ್ಥಾನ ಪರಿಷತ್ ಈ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಶಿಕ್ಷಣ ಹಾಗೂ ಹಾಸ್ಟೆಲ್ (ಊಟ, ವಸತಿ, ಅಧ್ಯಯನ ಸಾಮಗ್ರಿ, ಕಾಲೇಜು ಶುಲ್ಕ ಇತ್ಯಾದಿ)  ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸುತ್ತದೆ. ಒಟ್ಟಾರೆ ಆ ವಿದ್ಯಾರ್ಥಿಗಳ ವಸತಿ ಸಹಿತ ೨ ವರ್ಷದ ಪಿಯುಸಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೇಗೆ ಅಗತ್ಯ ತರಬೇತಿಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. 
ಅವರಿಗೆ ಶಿಕ್ಷಣದ ಜೊತೆಗೆ ಅವರ ವ್ಯಕ್ತಿಗತ ಜೀವನದ ಬೆಳವಣಿಗೆಗಾಗಿ ಮೌಲ್ಯಗಳನ್ನು ತುಂಬುವುದು, ಸಾಮಾಜಿಕ ಕಳಕಳಿಯನ್ನು ನಿರ್ಮಾಣ ಮಾಡುವುದು, ದೇಶದ ಬಗ್ಗೆ ಒಂದು ಶ್ರೇಷ್ಠವಾದ ಭಾವನೆಗಳನ್ನು ನಿರ್ಮಾಣ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ.
  • ರಾಜ್ಯದೆಲ್ಲೆಡೆಯ ವಿದ್ಯಾರ್ಥಿಗಳನ್ನು ತಪಸ್ ಯೋಜನೆಗೆ ಅವಕಾಶ ಕಲ್ಪಸಿದ್ದೀರಿ. ಈ ವಿದ್ಯಾರ್ಥಿಗಳ ಆಯ್ಕೆಗೆ ನಿಮ್ಮ ಮಾನದಂಡವೇನು?
ಬಡವರಲ್ಲಿ ಬಡವ ಅಂದರೆ ಆರ್ಥಿಕವಾಗಿ ಹಿಂದುಳಿದವರಲ್ಲಿ ಹಿಂದುಳಿದವರು, ಜೊತೆಗೆ ಪ್ರತಿಭಾವಂತರು - ಈ ಎರಡು ಅಂಶಗಳು ಮಾತ್ರ ಆಯ್ಕೆಯ ಮಾನದಂಡಗಳು. ಇಲ್ಲಿ ಯಾವುದೇ ಜಾತಿ, ಮತ, ಭಾಷೆಯ ಬೇಧವಿಲ್ಲ.

  • ಈ ಯೋಜನೆಗೆ ನೀವು ’ತಪಸ್’ ಎಂಬ ಹೆಸರಿಡಲು ಕಾರಣವೇನು? ನಿಮ್ಮ ಪ್ರಕಾರ ತಪಸ್ ಎಂದರೆ ಏನು?
’ತಪಸ್’ ಎಂದಾಗ ನಮಗೆ ಋಷಿಮುನಿಗಳ ನೆನಪಾಗಬಹುದು. ಆದರೆ ತಪಸ್ ಎಂದರೆ ಕಾಡಿನಲ್ಲಿ ಕುಳಿತು ಮಾಡುವುದು; ಎಕಾಂತದಲ್ಲಿ ಏಕಾಂತದಲ್ಲಿ ಕುಳಿತುಕೊಳ್ಳುವುದಲ್ಲ. ಸಾಧನೆಗಾಗಿ ನಿರಂತರ ಪ್ರಯತ್ನ ಮಾಡುವುದೇ ತಪಸ್ ಎನ್ನುವ ಕಲ್ಪನೆಯಲ್ಲಿ ತಪಸ್ ಎಂಬ ಹೆಸರಿಡಲಾಯಿತು. ವಿದ್ಯಾರ್ಥಿಗಳು, ಪೋಷಕರು, ಬೇಸ್ ಮತ್ತು ರಾಷ್ಟ್ರೋತ್ತಾನ -  ಈ ನಾಲ್ವರ ತಪಸ್ಸು. ಯಾಕೆಂದರೆ ಈ ಕಲ್ಪನೆಯ ಸಾಕಾರಕ್ಕೆ ನಾಲ್ವರು ಸ್ಟೇಕ್ ಹೋಲ್ಡರ‍್ಸ್‌ಗಳ ತಪಸ್ಸಿದೆ! ಎನ್ನುತ್ತಾರೆ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು.
ಇದು ಕೇವಲ ಮಕ್ಕಳದ್ದು ಮಾತ್ರ ತಪಸ್ ಅಲ್ಲ. ಮಕ್ಕಳ ಪೋಷಕರದ್ದೂ ತಪಸ್ಸಿದೆ. ಅವರು ಮಕ್ಕಳನ್ನು ಹಿಂದಿನ ಕಾಲದಲ್ಲಿ ಗುರುಕುಲಕ್ಕೆ ಬಿಟ್ಟುಕೊಟ್ಟಂತೆ ಬಿಟ್ಟುಕೊಡಬೇಕು. ಈ ತಪಸ್‌ಗೆ ಆಯ್ಕೆಯಾದ ಮಕ್ಕಳನ್ನು ಪದೇ ಪದೇ ಮನೆಗೆ ಕಳುಹಿಸುವುದಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯುತ್ತಿದ್ದಂತೆ ಇಲ್ಲಿಗೆ ಕರೆತಂದರೆ ಅವರು ಪುನಃ ಹೋಗುವುದು ದ್ವಿತೀಯ ಪಿಯುಸಿ ಸೇರಿದಂತೆ ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆದ ನಂತರ. ಅಂದರೆ ಅವರು ತಪಸ್‌ನಲ್ಲಿ ಶಿಕ್ಷಣ ಪಡೆಯುವುದು ೨೪ ತಿಂಗಳಲ್ಲ; ೨೭ ತಿಂಗಳು. ಈ ೨೭ ತಿಂಗಳಲ್ಲಿ ಅವರು ಮನೆಗೆ ಹೋಗಿ ಬರುವುದು ಕೇವಲ ೨೫ ರಿಂದ ೩೦ ದಿನಗಳು ಮಾತ್ರ. ಉಳಿದ ದಿನಗಳನ್ನು ಅವರು ತಪಸ್‌ನಲ್ಲಿಯೇ ಕಳೆಯಬೇಕು. ಇದಕ್ಕೆ ಆ ವಿದ್ಯಾರ್ಥಿಗಳ ಮನೆಯವರು ಗಟ್ಟಿ ಮನಸ್ಸಿನಿಂದ ಸಿದ್ಧವಾಗಬೇಕು. ಮಕ್ಕಳನ್ನು ಬಿಟ್ಟು ಇರಲು ಸಿದ್ದರಾಗಬೇಕು. 
ಇನ್ನು ಈ ೨೭ ತಿಂಗಳೂ ಮಕ್ಕಳ ಬೆಳವಣಿಗೆಗಾಗಿ ನಿರಂತರ ಪ್ರಯತ್ನವನ್ನು ಬೇಸ್ ಸಂಸ್ಥೆ ಮಾಡುತ್ತದೆ. ಇದೂ ಒಂದು ರೀತಿಯ ತಪಸ್ಸಿನಂತೆ. ಯಾಕೆಂದರೆ ಒಂದು ರೂಪಾಯಿ ಶುಲ್ಕವನ್ನು ತೆಗೆದುಕೊಳ್ಳದೇ ಬೇಸ್ ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡುತ್ತದೆ. ಜೊತೆಗೆ ಈ ಮಕ್ಕಳು ಹಳ್ಳಿಯಿಂದ ಬಂದವರು, ಇಂಗ್ಲಿಷ್ ಭಾಷಾಜ್ಞಾನವೂ ಕಡಮೆಯಿರುತ್ತದೆ. ಹೀಗಾಗಿ ಬೇಸ್ ಈ ಮಕ್ಕಳಿಗೆ ವಿಶೇಷ ಗಮನ ಹರಿಸಿ ಶಿಕ್ಷಣ ನೀಡುತ್ತಾರೆ. 
ಇನ್ನು ರಾಷ್ಟ್ರೋತ್ಥಾನ, ಅವರಿಗೆ ನಿರಂತರ ಗಮನ ನೀಡುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೆ ಓದಲು, ಅಭ್ಯಾಸ-ಅಧ್ಯಯನಕ್ಕೆ ಸಹಾಯ ಮಾಡುವುದು, ನಡುವೆ ಅವರಲ್ಲಿ ಸಂಸ್ಕಾರಯುತ ಗುಣ ನಡತೆಗಳನ್ನು ಕಲಿಸುವುದಕ್ಕೂ ಪ್ರಯತ್ನ ನಡೆಸುತ್ತದೆ. ಊಟ, ತಿಂಡಿ ಸೇರಿದಂತೆ ಎಲ್ಲ ವ್ಯವಸ್ಥೆಗಳಲ್ಲಿ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ರೂಪಿಸಿದೆ. ಹೋದ ತಕ್ಷಣವೇ ಎಲ್ಲವೂ ಸಿಗುವಂತಾಗಬೇಕು. ಅವರಿಗೆ ಓದುವುದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವ, ಅವರ ಆರೋಗ್ಯದ ಬಗೆಗೆ ಕಾಳಜಿ ವಹಿಸುವ ಜೊತೆಗೆ ಅವರಿಗೆ ಪ್ರತಿನಿತ್ಯ ಯೋಗ ಪ್ರಾಣಾಯಾಮ, ಪ್ರಾರ್ಥನೆ, ಧ್ಯಾನಗಳನ್ನು ಅಭ್ಯಾಸ ಮಾಡಿಸಲಾಗುತ್ತಿದೆ.
ಹೀಗಾಗಿ ಇದು ಮಕ್ಕಳು, ಪೋಷಕರು, ಬೇಸ್ ಮತ್ತು ರಾಷ್ಟ್ರೋತ್ತಾನ - ಈ ನಾಲ್ಕು ಜನರ ತಪಸ್ಸು. ಒಂದು ಶ್ರೇಷ್ಠವಾದ ಸಾಧನೆ ಮಾಡಬೇಕಾದರೆ ಎಲ್ಲರ ಪ್ರಯತ್ನವೂ ಅಗತ್ಯ. ಕಟ್ಟಕಡೆಯ ಪ್ರತಿಭಾವಂತ ವ್ಯಕ್ತಿಗೆ ಇದರ ಪ್ರಯೋಜನ ತಲಪಬೇಕು ಎಂಬ ದಿಶೆಯಲ್ಲಿ ಈ ಪ್ರಯತ್ನ ನಡೆಸಲಾಗಿದೆ.

  • ತಪಸ್‌ನಲ್ಲಿ ಶಿಕ್ಷಣ ಪಡೆಯುವವರು ಬಡ ಮಕ್ಕಳು. ಹೀಗಾಗಿ ಅವರ ಪಿಯುಸಿ ಶಿಕ್ಷಣದ ನಂತರದ ವಿದ್ಯಾಭ್ಯಾಸಕ್ಕೆ ಸಹಾಯ ನೀಡುವ ವ್ಯವಸ್ಥೆ ಏನಾದರೂ ಇದೆಯೇ?
ನಾವು ತಪಸ್ ಯೋಜನೆ ಪ್ರಾರಂಭಿಸಿರುವುದು ಮುಖ್ಯವಾಗಿ ಪ್ರತಿಷ್ಠಿತ ಐಐಟಿ, ಎನ್‌ಐಟಿ ವಿದ್ಯಾಭ್ಯಾಸವನ್ನು ಹಳ್ಳಿ ಪ್ರದೇಶದ ಮಕ್ಕಳು ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ. ಐಐಟಿಗೆ ಪ್ರವೇಶ ಸಿಗುವುದು ಕಠಿಣ. ಆದರೆ ಅಲ್ಲಿ ಶುಲ್ಕ ಇತ್ಯಾದಿಗಳೆಲ್ಲ ಬಹಳ ಕಡಮೆ. ಇನ್ನು ಸಹಾಯದ ಅಗತ್ಯವಿರುವವರಿಗೆ ಮಾರ್ಗದರ್ಶನ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಸರ್ಕಾರದ ಹಾಗೂ ಖಾಸಗೀ ವಲಯದ ಅನೇಕ ಸ್ಕಾಲರ್‌ಶಿಪ್ ಯೋಜನೆಗಳ ಲಾಭ ಪಡೆಯುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತೇವೆ.


ತಪಸ್ ಭೀಜಾಂಕುರಗೊಂಡದ್ದು ಹೇಗೆ?
ಸುಮಾರು -೧೦ ವರ್ಷಗಳ ಹಿಂದೆಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಮಟ್ಟದ ಸೆಮಿನಾರ್ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆಯಿತುಶಿಕ್ಷಣ ಕ್ಷೇತ್ರದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ  ಕಾರ್ಯಕ್ರಮದಲ್ಲಿ ಸಂಮಾನ ಮಾಡಲಾಯಿತು ಸಭೆಯಲ್ಲಿ ಸಂಮಾನಕ್ಕೆ ಪಾತ್ರರಾದವರು ಬಿಹಾರದ ಸೂಪರ್ ೩೦ಯ ರೂವಾರಿ ಆನಂದ ಕುಮಾರ್ ಅವರುಸಂಮಾನ ಸ್ವೀಕರಿಸಿದ ಆನಂದ ಕುಮಾರ್ ತನ್ನ ಸಾಧನಾಪಯಣದ ಹುಟ್ಟುಅದರ ಕಾರ್ಯಕ್ಷೇತ್ರಗಳನ್ನು ಹಂಚಿಕೊಳ್ಳುತ್ತಿದ್ದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪರಿಷತ್ ಪ್ರಧಾನ ಕಾರ್ಯದರ್ಶಿ ನಾದಿನೇಶ್ ಹೆಗ್ಡೆ ಅವರಿಗೆ ನಾವೂ ಇಂತಹದ್ದೊಂದನ್ನು ಯಾಕೆ ಪ್ರಾರಂಭಿಸಬಾರದು ಎಂಬ ಆಸೆ ಚಿಗುರಿತುಜೊತೆಗಿದ್ದ ರಾಷ್ಟ್ರೋತ್ಥಾನ ಪರಿಷತ್ ಶಿಕ್ಷಣ ವಿಭಾಗದ ಪ್ರಮುಖರಾದ ರವಿಕುಮಾರ್ ಅವರೊಂದಿಗೂ  ವಿಷಯವನ್ನು ಚರ್ಚಿಸಿದರು.
ಕರ್ನಾಟಕದಲ್ಲಿರುವ ಹಳ್ಳಿಗಳಂತಹ ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆಆದರೆ ಅವರಿಗೆ ಅವಕಾಶವಿಲ್ಲಅವಕಾಶಕ್ಕಿಂತ ಮುಖ್ಯವಾಗಿ ಅವರಿಗೆ ಮುಂದೇನು ಮಾಡಬೇಕೆಂಬ ಕುರಿತು ಅರಿವೇ ಇರುವುದಿಲ್ಲಅವರಿಗೆ ಗೊತ್ತಿರುವುದುಪಿಯುಸಿನಂತರ ಡಿಗ್ರಿ ಅಥವಾ ಐಟಿಐಅದಕ್ಕೆ ಹೊರತಾದ ಮಾರ್ಗಗಳ ಕುರಿತು ಮಾಹಿತಿಯೇ ಅವರಿಗೆ ಇರುವುದಿಲ್ಲಹೀಗಾಗಿ ಪ್ರತಿಭೆಗೆ ಸೂಕ್ತ ವೇದಿಕೆ ಸಿಗದೇ ಅದು ವ್ಯರ್ಥವಾಗುತ್ತಿದೆ ಪ್ರತಿಭೆಗಳಿಗೇಕೆ ನಾವೇಕೆ ಒಂದು ಅವಕಾಶ ಕಲ್ಪಿಸಬಾರದುಒಳ್ಳೆಯ ಕೋರ್ಸ್ ತೆಗೆದುಕೊಂಡುಮಾರ್ಗದರ್ಶನ ಪಡೆದು ಅವರ ಸಾಮರ್ಥ್ಯಾನುಗುಣ ಓದಿ ಮುಂದೆ ಬರುವುದಕ್ಕೆ ಅವಕಾಶ ನೀಡುವ ಯೋಜನೆಯೊಂದನ್ನು ಕರ್ನಾಟಕದಲ್ಲಿಯೂ ಯಾಕೆ ಮಾಡಬಾರದು ಎಂಬ ಚಿಂತನೆ ಪರಿಷತ್ ಪ್ರಮುಖರಾದ ದಿನೇಶ್ ಹೆಗ್ಡೆ ಅವರನ್ನು ಕಾಡತೊಡಗಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಶಿಕ್ಷಣದ ದುಬಾರಿಕರಣದ ಬಗೆಗೆ ಗಂಭೀರ ಚಿಂತನೆ ನಡೆಸುತ್ತಿತ್ತುಶಿಕ್ಷಣ ದುಬಾರೀಕರಣಗೊಂಡಿರುವದರಿಂದಾಗಿ ಅನೇಕ ಪ್ರತಿಭೆಗಳು ಅರಳಲು ಅವಕಾಶವೇ ಸಿಗದೇ ಕಮರಿಹೋಗಿದೆಇದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಸಮಾಜವನ್ನು ಜಾಗೃತಗೊಳಿಸುವ ಚಟುವಟಿಕೆಯನ್ನೂ ಸಂಘ ನಡೆಸುತ್ತಿದೆ ಸಂದರ್ಭದಲ್ಲಿ ಕರ್ನಾಟಕ ದಕ್ಷಣ ಪ್ರಾಂತದ ಪ್ರಾಂತ ಪ್ರಚಾರಕರಾಗಿದ್ದ ಮುಕುಂದ್ ಸಿ.ಆರ್ಅವರು ದುಬಾರಿ ಶಿಕ್ಷಣದ ಪಿಡುಗಿಗೆ ಪರ್ಯಾಯದ ಚಿಂತನೆಯ ನಡೆಸಿ ಹೊಸ ಯೋಜನೆ ಪ್ರಾರಂಭಿಸುವ ಚಿಂತನೆ ನಡೆಸುತ್ತಿದ್ದರುಆಗ ಅವರು ಆರಿಸಿಕೊಂಡಿದ್ದುಈಗಾಗಲೇ ಶಿಕ್ಷಣ ಚಟುವಟಿಕೆಗಳ ಮೂಲಕ ಪರಿಣಾಮಕಾರಿ ಚಟುವಟಿಕೆ ನಡೆಸುತ್ತಿರುವ ರಾಷ್ಟ್ರೋತ್ಥಾನ ಪರಿಷತ್ರಾಷ್ಟ್ರೋತ್ಥಾನ ಇಂತಹ ಯೋಜನೆಯೊಂದನ್ನು ರೂಪಿಸುವಂತೆ ಅವರು ದಿನೇಶ್ ಹೆಗ್ಡೆ ಅವರಲ್ಲಿ ತಿಳಿಸಿದರುಹೀಗೆ ಸಂಘದ ಅಪೇಕ್ಷೆ ಮತ್ತು ಈಗಾಗಲೇ ಪರಿಷತ್ ಪ್ರಮುಖರಲ್ಲಿ ಚಿಗುರೊಡೆದ ಕಲ್ಪನೆ ಮೇಳೈಸಿತುಕಾಲ ಪಕ್ಷವಾಯಿತುಚಿಂತನ ಮಂಥನ ಪ್ರಾರಂಭವಾಯಿತು.
ಬಿಹಾರದಲ್ಲಿ ಆನಂದ ಕುಮಾರ್ ಮಾಡಿರುವ ಸೂಪರ್ ೩೦ಯ ರೀತಿಯಲ್ಲಿಯೇ ಕರ್ನಾಟಕದಲ್ಲಿಯೂ ಮಾಡಬೇಕು ಎಂದು ನಿರ್ಧರಿಸಿಪರಿಷತ್ ದಿನೇಶ್ ಹೆಗ್ಡೆ ಸೇರಿದಂತೆ ಶಿಕ್ಷಣ ವಿಭಾಗದ ಕೆಲವರು ಖುದ್ದು ಬಿಹಾರದ ಸೂಪರ್ ೩೦ಗೆ ಭೇಟಿ ನೀಡಿಆನಂದ್ಕುಮಾರ್ ಅವರೊಂದಿಗೆ ಚರ್ಚೆ ನಡೆಸಿದರುಅಂತಹ ದೇಶದ ಇತರ ಪ್ರಯತ್ನಗಳ ಕುರಿತೂ ವಿಚಾರ ಮಿನಿಮಯ ನಡೆಸಿಹತ್ತಾರು (ಸುಮಾರು ೩೦ಕ್ಕೂ ಅಧಿಕಮೀಟಿಂಗ್ಗಳ ನಂತರ ರೂಪಗೊಂಡಿದ್ದು ತಪಸ್.


ತಪಸ್ ಎಂದರೇನು?
ರಾಜ್ಯದಲ್ಲಿರುವ ಸಾಮಾಜಿಕವಾಗಿಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತವಾಗಿ ಪಿಯುಸಿ ಹಾಗೂ ಐಐಟಿ ಪ್ರವೇಶಕ್ಕೆ ಪೂರಕ ಪರೀಕ್ಷೆಗೆ ತರಬೇತಿಗೊಳಿಸುವ ರಾಷ್ಟ್ರೋತ್ಥಾನ ಪರಿಷತ್ ಯೋಜನೆಯೇ ’ತಪಸ್’.  ಯೋಜನೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಸತಿಊಟ ಸಮವಸ್ತ್ರಪುಸ್ತಕ ಸೇರಿದಂತೆ ಎಲ್ಲ ರೀತಿಯ ಸವಲತ್ತು ಮತ್ತು ಅತ್ಯಾಧುನಿಕ ಪ್ರಯೋಗಾಲಯ ಹಾಗೂ ಗ್ರಂಥಾಲಯದ ವ್ಯವಸ್ಥೆಯಲ್ಲಿ ವಿಜ್ಞಾನ ವಿಭಾಗದ ಪಿಯುಸಿ ಶಿಕ್ಷಣ ಒದಗಿಸುವುದರ ಜೊತೆಗೆ ಜೆಇಇಐಐಟಿಸಿಇಟಿ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಇಲ್ಲಿ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.
‘ತಪಸ್ಯೋಜನೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿರುವ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣ ಒದಗಿಸಲಾಗುತ್ತದೆಜತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯನ್ನು ಬೇಸ್ ಸಂಸ್ಥೆ ಸಂಪೂರ್ಣ ಉಚಿತವಾಗಿ ನೀಡುತ್ತದೆ.

ಅರ್ಹತೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ?
  • ಕುಟುಂಬದ ವಾರ್ಷಿಕ ಆದಾಯ 1.5ಲಕ್ಷ ದಾಟಿರದ ಹಾಗೂ ೯ನೇ ತರಗತಿಯಲ್ಲಿ ಕನಿಷ್ಠ ಶೇ80ಗಿಂತ ಅಧಿಕ ಅಂಕ ಗಳಿಸಿದ ಪ್ರಸ್ತುತ ಸಾಲಿನಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
  • ತಪಸ್ ಅಧಿಕೃತ ವೈಬ್ಸೈಟ್ http://tapasedu.org/ ನಲ್ಲಿ ಅರ್ಜಿಗಳು ಲಭ್ಯವಿರುತ್ತದೆಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಂಡು ಕಲಿಯುತ್ತಿರುವ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ಅರ್ಜಿಯನ್ನು  ವಿಳಾಸಕ್ಕೆ - ಸಂಯೋಜಕರುತಪಸ್ ಪ್ರಕಲ್ಪರಾಷ್ಟ್ರೋತ್ಥಾನ ಪರಿಷತ್ಕೇಶವಶಿಲ್ಪಕೆಂಪೇಗೌಡನಗರಬೆಂಗಳೂರು - 560 019ಕ್ಕೆ ಸಲ್ಲಿಸಬೇಕು.
  • ಪ್ರವೇಶ ಪರೀಕ್ಷೆಗೆ ಹೆಸರನ್ನು ನೋಂದಾಯಿಸಲು ನವೆಂಬರ್ ೧೫ ಕೊನೆಯ ದಿನಾಂಕವಾಗಿರುತ್ತದೆ.
  • ಪರೀಕ್ಷಾ ಕೇಂದ್ರಗಳ ವಿವರಗಳನ್ನು ವೈಬ್ಸೈಟ್ಗಳಲ್ಲಿ ಲಭ್ಯವಿರುತ್ತದೆ.