'ನಿಮ್ಮ ಸೇವೆ ಮಾಡಲು ನನಗೆ ಅವಕಾಶ ನೀಡಿ’ ಎಂದು ಚುನಾವಣೆ ಸಂದರ್ಭದಲ್ಲಿ ಮತದಾರನಿಗೆ ಕೈಮುಗಿದು ಅಂಗಲಾಚಿ ಬೇಡಿಕೊಳ್ಳುವ ಅದೆಷ್ಟು ಜನಪ್ರತಿನಿಧಿಗಳು ನುಡಿದಂತೆ ನಡೆದುಕೊಂಡಿದ್ದಾರೆ? ತಮ್ಮ ಪ್ರಣಾಳಿಕೆಯ ೩೦% ಭಾಗ ಪೂರ್ಣಗೊಳಿಸಿದ್ದರೂ ಇಂದಿನ ಭಾರತದ ಚಿತ್ರಣವೇ ಬದಲಾಗಿರುತ್ತಿತ್ತು! ಅದಾಗಲೇ ಇಲ್ಲ; ಆದರೆ ಈ ಜನಪ್ರತಿನಿಧಿಗಳ ಜೀವನಮಟ್ಟ ಆಸ್ತಿಪಾಸ್ತಿ ವರ್ಷದಿಂದ ವರ್ಷಕ್ಕೆ ವೃದ್ದಿಸಿದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.
ಮನವಿದಾರರು, ಪರಾಮರ್ಶಕರು ಹಾಗೂ ನಿರ್ಣಯಕರ್ತರು - ಈ ಮೂರೂ ಅಧಿಕಾರ ಇವರಲ್ಲಿಯೇ ಇರುವುದರಿಂದ ತಮ ಸಂಬಳಸಾರಿಗೆ ಮುಂತಾದ ಸೌಲಭ್ಯಗಳನ್ನು ತಮಗೆ ಬೇಕಾದಂತೆ ಹೆಚ್ಚಿಸಿಕೊಳ್ಳಲಾಗುತ್ತಿದೆ. ಈ ಸಂಬಳಸಾರಿಗೆ ಹೆಸರಿನಲ್ಲಿ ಸರ್ಕಾರಿ ಬೊಕ್ಕಸಕ್ಕೆ ಸುಳ್ಳುಲೆಕ್ಕ ನೀಡಿದ ಅದೆಷ್ಟು ಜನಪ್ರತಿನಿಧಿಗಳು ನಮ್ಮ ನಡುವೆ ಇಲ್ಲ! ಬಿಬಿಎಂಪಿ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ನಿವಾಸ ತೋರಿಸಿ ಮತದಾನ ಮಾಡಿದ್ದ ಜನಪ್ರತಿನಿಧಿಗಳು ಸಂಬಳಸಾರಿಗೆಗಾಗಿ ಇನ್ನೊಂದು ಊರಿನ ಹೆಸರಿನಲ್ಲಿ ಹಣಪಡೆದು ಸಿಕ್ಕಿಹಾಕಿಕೊಂಡು ವಿಚಾರಣೆಗೊಳಪಡುತ್ತಿರುವುದು ಇದೆ. ಅವಧಿ ಮುಗಿದರೂ ಜನಪ್ರತಿನಿಧಿಗಳಿಗೆ ಸಿಗುವ ವಸತಿ, ಬಂಗಲೆಗಳನ್ನು ಬಿಟ್ಟುಕೊಡಲು ತಯಾರಿಲ್ಲದೇ ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಂಡ ಜನಪ್ರತಿನಿಧಿಗಳಿಗೂ ಬರವಿಲ್ಲ.
ದೇಶದ ಪ್ರಥಮ ಪ್ರಜೆ ಎಂಬ ಉನ್ನತ ಹುದ್ದೆಯನ್ನಲಂಕರಿಸದವರೂ ಇದಕ್ಕೆ ಹೊರತಾಗಿಲ್ಲ! ಎಂಬುದು ದುರ್ದೈವ. ರಾಷ್‌ಟರಪತಿಯಾಗಿದ್ದ ಪ್ರತಿಭಾ ಪಾಟೀಲ್ ಅವರು ನಿವೃತ್ತರಾದಾಗ ತಮಗೆ ದೇಶವಿದೇಶದ ಗಣ್ಯರು ನೀಡಿದಿದ್ದ ೧೫೦ಕ್ಕೂ ಅಧಿಕ ಚಿತ್ತಾಕರ್ಷಕ ಬೆಲೆಬಾಳುವ ಉಡುಗೊರೆಗಳನ್ನು ಲಾರಿಗಳಲ್ಲಿ ತುಂಬಿಸಿಕೊಂಡು ಮನೆಗೆ ಕೊಂಡೊಯ್ದು ಸುದ್ದಿಯಾಗಿದ್ದರು! ಹೀಗೆ ರಾಷ್ಟ್ರಪತಿಗಳಿಂದ ಹಿಡಿದು ಗ್ರಾಮಪಂಚಾಯತ್ ಸದಸ್ಯರವರೆಗೆ ಸರ್ಕಾರೀ ಸವಲತ್ತುಗಳಿಗೆ ಅಂಟಿಕೊಂಡಿರುವುದನ್ನು ನಾವು ದಿನನಿತ್ಯ ಕಾಣುತ್ತಿರುತ್ತೇವೆ.
ಇವರೆಲ್ಲರ ನಡುವೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ವಿಭಿನ್ನವಾಗಿ ಕಾಣುತ್ತಾರೆ. ಅವರು ತಮ್ಮ ಇಡೀ ಜೀವನವನ್ನು ಅಜಾತ ಶತ್ರು ಎಂಬಂತೆ ಬದುಕಿದರು. ಅವರೆಂದೂ ’ನಾನು ರೈತನ ಮಗ...’, ’ನಾನು ಈ ಜಾತಿಯವನು...’ ಎಂದು ಸೋಗು ಹಾಕಿದವರಲ್ಲ. ತಮ್ಮ ಕೆಲಸ, ಕಾರ್ಯದ ಮೂಲಕವೇ ಜನಮಾನಸದಲ್ಲಿ ಸ್ಥಾನ ಪಡೆದವರು. ಅವರು ಪ್ರಧಾನಿಯಾಗಿದ್ದಾಗ ತಮ್ಮ ಹೆಸರಿನ ಯಾವುದೇ ಸರ್ಕಾರಿ ಯೋಜನೆಗಳು, ಸಂಸ್ಥೆಗಳು ಇರಕೂಡದೆಂದು ಕಟ್ಟುನಿಟ್ಟಾದ ಸೂಚನೆ ನೀಡಿದ್ದರು. ಹಾಗಿದ್ದರೂ ಗ್ರಾಮೀಣ ರಸ್ತೆ ಯೋಜನೆಗೆ ’ಅಟಲ್ ಗ್ರಾಮ ಸಡಕ್ ಯೋಜನೆ’ ಎಂದು ಹೆಸರಿಟ್ಟಾಗ, ಇದನ್ನು ತೀವ್ರವಾಗಿ ವಿರೋಧಿಸಿದ ಅಟಲ್ ಜೀ ಅದನ್ನು ’ಪ್ರಧಾನಮಂತ್ರಿ ಗ್ರಾಮ ಸಡಕ್’ ಯೋಜನೆ ಎಂದು ಬದಲಾಯಿಸಿದರು.
ಸರ್ಕಾರೀ ಬಂಗಲೆ ಸವಲತ್ತುಗಳನ್ನು ಅವರೆಂದೂ ಬಯಸಲಿಲ್ಲ. ತಾವು ನಾಲ್ಕೈದು ದಶಕಗಳ ಕಾಲ ಸಕ್ರಿಯ ರಾಜಕೀಯದಲ್ಲಿದ್ದರೂ ತಮ್ಮ ಕುಟುಂಬವನ್ನು ರಾಜಕೀಯದಿಂದ ಮಾತ್ರವಲ್ಲ ಸಕಾರೀ ಬಂಗಲೆಗಳಿಂದ ದೂರವೇ ಇಟ್ಟಿದ್ದರು. ಇದೀಗ ಅವರ ಕುಟುಂಬವೂ ದೈವಾಧೀನರಾದ ಅಟಲ್‌ಜೀ ಅವರ ಧ್ಯೇಯವನ್ನು ಎತ್ತಿ ಹಿಡಿದಿದೆ.
ಮಾಜಿ ಪ್ರಧಾನಮಂತ್ರಿ ಕುಟುಂಬಗಳಿಗೆ ಭದ್ರತೆ, ವಸತಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಸರ್ಕಾರ ನೀಡುತ್ತದೆ. ಅದರಂತೆ ವಾಜಪೇಯಿ ದತ್ತು ಪುತ್ರಿ ನಮಿತಾ, ಅವರ ಪತಿ ಹಾಗೂ ಮೊಮ್ಮಗಳು ವಾಜಪೇಯಿ ಜೊತೆ ಕೃಷ್ಣ ಮೆನನ್ ಮಾರ್ಗದಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸವಾಗಿದ್ದರು. ಇದೀಗ ವಾಜಪೇಯಿ ನಿಧನವಾಗಿದ್ದಾರೆ, ಹೀಗಾಗಿ ಸರ್ಕಾರಿ ಬಂಗಲೆಯನ್ನು ತೊರೆಯಲು ವಾಜಪೇಯಿ ಕುಟುಂಬ ನಿರ್ಧರಿಸಿದೆ. ಕುಟುಂಬದ ಖರ್ಚುವೆಚ್ಚಗಳನ್ನು ನಿಭಾಯಿಸುವ ಸಾಮರ್ಥ್ಯ ಮನಗಿದೆ. ಸರ್ಕಾರದ ಖಜನೆಗೆ ಹೊರೆಯಾಗುವುದು ನಮಗೆ ಇಷ್ಟವಿಲ್ಲ. ನಾವು ಸ್ವತಂತ್ರ್ಯ ಜೀವನ ನಡೆಸಲು ನಿರ್ಧರಿಸಿದ್ದೇವೆ. ನಮಗೆ ಅನುಮತಿ ನೀಡಿ’ ಎಂದು ವಾಜಪೇಯಿ ಪುತ್ರಿ ನಮಿತಾ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ.
ಇದೇ ರೀತಿ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಹೆಚ್.ಡಿ. ದೇವೇಗೌಡ ಕುಟುಂಬವೂ ದೆಹಲಿಯಲ್ಲಿ ಸರ್ಕಾರಿ ಬಂಗಲೆ, ಭದ್ರತೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆಯುತ್ತಿದೆ. ಬಹಳ ಆಸಕ್ತಿಕರ ಸಂಗತಿಯೆಂದರೆ ಸ್ವಾತಂತ್ರ್ಯಾನಂತರ ಸಂಪೂರ್ಣ ನೆಹರು-ಗಾಂಧಿ ಪರಿವಾರ ಬೆಳೆದಿದ್ದೂ ಈ ಸರ್ಕಾರೀ ಸೌಲಭ್ಯಗಳಲ್ಲಿ.
ನೆಹರು(ಗಾಂಧಿ) ಪರಿವಾರ ಸ್ವತಂತ್ರ ಭಾರತದಲ್ಲಿ ಅನಭಿಷಕ್ತ ರಾಜಕುಟುಂಬ. ಈ ಇಡೀ ವಂಶದ ಬದುಕಿದ್ದು ಮತ್ತು ಬದುಕುತ್ತಿರುವುದು ಸರ್ಕಾರೀ ಸೌಲಭ್ಯಗಳಲ್ಲಿ. ಪ್ರಸ್ತುತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ (ಈ ಕುಟುಂಬದ ಅಳಿಯನಾಗಿರುವುದರಿಂದ ರಾಬರ್ಟ್ ವಾರ್ಧಾ ಕೂಡಾ) ಇದೇ ಯೋಜನೆಯಡಿ ಭದ್ರತೆ ಸೇರಿದಂತೆ ಎಲ್ಲ ಸರ್ಕಾರೀ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಈ ಕುಟುಂಬ ಎಂದಾದರೂ ಈ ಸೌಲಭ್ಯಗಳು ನಮಗೆ ಬೇಡ; ನಾವು ಸ್ವತಂತ್ರವಾಗಿ ಬದುಕುತ್ತೇವೆ ಎಂದು ಸರ್ಕಾರಕ್ಕೆ ಮನವಿ ಮಾಡುವುದನ್ನು ಊಹಿಸಲು ಸಾಧ್ಯವೇ? ಕಾಂಗ್ರೆಸ್ ಅಧ್ಯಕ್ಷ ಪದವಿಯನ್ನೇ ಬೇರಾರಿಗೂ ಬಿಟ್ಟುಕೊಡಲು ಸಿದ್ಧವಿಲ್ಲದ ಈ ಕುಟುಂಬ ಸರ್ಕಾರೀ ಸವಲತ್ತು ಬಿಟ್ಟು ಬದುಕುತ್ತದೆಯೇ?
ಸರ್ಕಾರೀ ಸವಲತ್ತುಗಳನ್ನು ಬೇಡ ಎನ್ನುವುದು ಆಮೇಲಿನ ಮಾತು, ನೆಹರು-ಗಾಂಧಿ ಕುಟುಂಬಕ್ಕೆ ಹೊರತಾದ ಮಹಾಪುರುಷರೇ ಭಾರತದಲ್ಲಿ ಇಲ್ಲ ಎಂಬಂತೆ ೭೦ ವರ್ಷಗಳ ಕಾಲ ದೇಶವನ್ನು ಆಳಿದೆ. ದೇಶದ ಎಲ್ಲ ಪ್ರತಿಷ್ಠಿತ ಸಂಸ್ಥೆ, ಯೋಜನೆಗಳಿಂದ ಹಿಡಿದು ರಸ್ತೆ-ಗಲ್ಲಿಗಳಿಗೆ ನೆಹರು, ಇಂದಿರಾ, ರಾಜೀವ್ ಗಾಂಧಿ ಅವರ ಹೆಸರುಗಳನ್ನಿಟ್ಟು ತಮ್ಮ ಕುಟುಂಬದ ಗುಣಗಾನ ಮಾಡಿಕೊಂಡಿದೆ. ಈಗಿರುವ ಹೆಸರುಗಳನ್ನು ಬದಲಾಯಿಸ ಹೊರಟರಂತೂ ಮುಗಿಯಿತು. ಪತ್ರಕರ್ತರಿಂದ ಹಿಡಿದು ದೇಶದ ಬೀದಿಬೀದಿಗಳ ಕಾಂಗ್ರೆಸ್ಸಿಗರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿಯ ವಿರುದ್ಧ ವಾಚಾಮಗೋಚರ ಬೈಗುಳನ್ನುಗುಳುತ್ತಾರೆ. ದೇಶದಾದ್ಯಂತ ಪ್ರತಿಭಟನೆಗಳಾಗುತ್ತವೆ! ಹೊಸ ಯೋಜನೆಗಳಿಗೂ ಇತರರ ಹೆಸರಿಡಹೊರಟಾಗಲೆಲ್ಲ ಈ ಕುಟುಂಬದ ಚಡಪಡಿಕೆ ಎಂತದ್ದು ಎನ್ನುವುದು ಪಟೇಲರ ಪ್ರತಿಮೆ ಸ್ಥಾಪನೆಗೆ ಕಾಂಗ್ರೆಸ್ ಪ್ರತಿಕ್ರಿಯೆಯೇ ದೃಷ್ಟಾಂತ.
ನೆಹರುವನ್ನು ಧೀಮಂತವಾಗಿಸುವುದಕ್ಕಾಗಿಯೇ ಸಾವರ್ಕರ್‌ಗೆ ’ಕೋಮುವಾದಿ’, ಮುಸ್ಲಿಮ್ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿದ್ದು, ಸುಭಾಷ್‌ಚಂದ್ರ, ಭಗತ್ ಸಿಂಗ್ ಮೊದಲಾದವರು ದಾರಿತಪ್ಪಿದ ದೇಶಭಕ್ತರಾಗಿದ್ದು, ಪಟೇಲ್, ಶಾಸ್ತ್ರೀ ಜನ್ಮದಿನದಂದೂ ಸ್ಮರಣೆಗೆ ಯೋಗ್ಯರಲ್ಲದಿರುವುದು ಇಂತಹ ಸಾವಿರಾರು ಉದಾಹರಣೆಗಳು ’ನೆಹರು ಕಂಡ ಭಾರತ’ದಲ್ಲಿ ನಡೆದಿದೆ ಮತ್ತು ನಡೆಯುತ್ತಿದೆ.
ದಿಲ್ಲಿಯಲ್ಲಿರುವ ಸರ್ಕಾರೀ ಆಸ್ತಿಗಳೆಲ್ಲವೂ ತಮ್ಮ ಪರಿವಾರದ ಆಸ್ತಿ ಎಂದು ಕಾಂಗ್ರೆಸ್ ಅಂದರೆ ಈ ಕುಟುಂಬ ಭಾವಿಸಿದೆ. ಇತ್ತೀಚೆಗೆ ಅಟಲ್‌ಜೀ ನಿಧನದ ನಂತರ ದೆಹಲಿಯಲ್ಲಿ ೨೫ ಎಕರೆ ವ್ಯಾಪ್ತಿಯ ತೀನ್ ಮೂರ್ತಿ ಭವನದ ವಿಶಾಲ ಆವರಣದಲ್ಲಿ ‘ಪ್ರಧಾನಮಂತ್ರಿಗಳ ವಸ್ತು ಸಂಗ್ರಹಾಲಯ’ವನ್ನು ನಿರ್ಮಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತು. ಸಂಪೂರ್ಣ ಕಾಂಗ್ರೆಸ್ಸಿಗರು ಪ್ರಧಾನಮಂತ್ರಿಗಳ ವಿರುದ್ಧ ತಿರುಗಿಬಿದ್ದರು. ದೇಶದ ಖಜಾನೆ ಲೂಟಿ ಹೊಡೆಯುವಾಗಲೆಲ್ಲ ಮೌನ ಸಮ್ಮತಿ ಸೂಚಿಸುತ್ತಿದ್ದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರೇ ಮುಂದೆ ನಿಂತು ಮೌನಮುರಿದು, ವಿರೋಧಿಸಿದರು, ಪ್ರಧಾನಮಂತ್ರಿಗಳಿಗೆ ಪತ್ರ ಬರೆದರು. ನೆಹರು-ಗಾಂಧಿ ಪರಿವಾರಕ್ಕೆ ಹೊರತಾದ ಯಾವುದೇ ವ್ಯಕ್ತಿಗಳಿಗೆ ಜಾಗವಿಲ್ಲ ಎಂಬ ಕಾಂಗ್ರೆಸ್ ನಡವಳಿಕೆಯ ಹಿಂದೆ ನೆಹರು ಕಟ್ಟಿದ ಭ್ರಮಾಸೌಧ ಛಿದ್ರವಾಗುವ ಭಯ ಕಾಡುತ್ತಿದೆಯೇ?
ಗುಜರಾತಿನಲ್ಲಿ ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯನ್ನು ಮೋದಿ ಲೋಕಾರ್ಪಣೆಗೊಳಿಸಿದ ಎರಡು ಮೂರು ದಿನಗಳಲ್ಲಿ ಪಟೇಲ್ ಕುಟುಂಬ ಆ ಪ್ರತಿಮೆಯ ಮುಂಭಾಗದಲ್ಲಿ ನಿಂತು ತೆಗೆಸಿಕೊಂಡ ಫೋಟೋವೊಂದು ವೈರಲ್ ಆಯಿತು. ಆ ಫೋಟೋದಲ್ಲಿರುವ ಸುಮಾರು ಅರವತ್ತೆಪತ್ತು ಜನರಲ್ಲಿ ಪಟೇಲರ ಹೆಸರಿನಲ್ಲಿ ಸರ್ಕಾರೀ ಸವಲತ್ತುಗಳನ್ನು ಪಡೆದ ಒಬ್ಬರು ಕೂಡಾ ಇಲ್ಲ!
ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ತದನಂತರದ ಭಾರತದ ನಿರ್ಮಾಣದಲ್ಲಿ ’ಕರ್ಮಣ್ಯೇ ವಾದಿಕಾರಾಸ್ತೇ, ಮಾ ಪಲೇಷು ಕ ದಾಚನ’ ಎಂಬಂತೆ ಬದುಕಿದ ಸಾವಿರಾರು ಉದಾಹರಣೆಗಳು ಭಾರತದ ಇತಿಹಾಸದಲ್ಲಡಗಿದೆ. ಸಂತಸದ ಸಂಗತಿಯೆಂದರೆ ಇದೀಗ ಇಂತಹ ಮಹಾಪುರುಷರ ಸ್ಮರಣೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭಗೊಂಡಿದೆ.
ಒಂದೆಡೆ ಅಧಿಕಾರಕ್ಕಾಗಿಯೇ ವಿಭಜಿತ ಭಾರತಕ್ಕೆ ಒಪ್ಪಿಗೆ ನೀಡಿ ೭೦ ವರ್ಷಗಳಿಂದ ಸರ್ಕಾರೀ ಸವಲತ್ತುಗಳ ಮೇಲೆಯೇ ಇಡೀ ವಂಶ ಜೀವನ ನಡೆಸುತ್ತಿದೆ. ಇನ್ನೊಂದೆಡೆ ಶ್ರೀಮಂತಿಕೆಯಿಲ್ಲದಿದ್ದರೂ ಸರ್ಕಾರೀ ಬೊಕ್ಕಸಕ್ಕೆ ಹೊರೆಯಾಗಲಾರೆವು, ಸ್ವಸಾಮರ್ಥ್ಯದ ಮೇಲೆ ಸ್ವಂತ ಜೀವನ ನಡೆಸುತ್ತೇವೆ ಎಂಬ ಸ್ವಾಭಿಮಾನಿ ದೇಶಭಕ್ತರು.
ಅಧಿಕಾರಕ್ಕಾಗಿ ಕುಟುಂಬದ ವೈಭವೀಕರಿಸುತ್ತಾ ಕೊನೆಗೆ ಕುಟುಂಬಕ್ಕಾಗಿ ದೇಶದ ಅಂತಸ್ಸತ್ವವನ್ನೇ, ದೇಶವನ್ನೇ ಅವಮಾನಿಸುವ ಈ ಕುಟುಂಬ ಅಟಲ್‌ಜೀಯಂತಹವರ ಆದರ್ಶ ಪಾಲಿಸಬಲ್ಲರು ಎಂದು ಊಹಿಸಲೂ ಸಾಧ್ಯವೇ?