Thursday, 27 December 2018

ಕನ್ನಡ ಭಾಷೆ ಉಳಿವಿಗಾಗಿ ಸ್ಟೇಟಸ್ ಹಾಗೂ ಕಾರ್ಪಸ್ ಪ್ಲಾನ್‌ನ ಅಗತ್ಯವಿದೆ : ರವಿ ಹೆಗಡೆ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ನ ಪ್ರಧಾನ ಸಂಪಾದಕ

ನಮ್ಮ ದೃಶ್ಯಮಾಧ್ಯಮಗಳಲ್ಲಿ ಆಗಾಗ ಹಳ್ಳಿ ಹೈದ ಪೇಟೆಗೆ ಬಂದ, ಬಿಗ್ ಬಾಸ್... ಮುಂತಾದ ಸ್ಪರ್ಧೆಗಳನ್ನು ಮಾಡುತ್ತಿರುತ್ತೇವೆ. ಆಡಿಷನ್ ಸಂದರ್ಭದಲ್ಲಿ ಲಾಟಿಚಾರ್ಜ್ ಆಗುವಷ್ಟು ಜನ ಸೇರುತ್ತಾರೆ. ಆದರೆ ಒಂದು ವೈಚಾರಿಕ ಕಾರ್ಯಕ್ರಮದಲ್ಲಿ ಇಷ್ಟೊಂದು ಜನರು ಸೇರಿರುವುದು ಒಂದು ಆಶಾದಾಯಕ ಬೆಳವಣಿಗೆ. ಈಗಿನ ಜನರೇಷನ್ ಹೇಗಿದೆಯೆಂದರೆ, ನನಗೆ ಒಂದು ವಾಟ್ಸಾಪ್ ಮೆಸೇಜ್ ನೆನಪಾಗುತ್ತಿದೆ. ಅದರಲ್ಲಿ ಮಾಧ್ಯಮದವರು ಹೋಗಿ ಕೆಲವರನ್ನು ಮಾತನಾಡಿಸುತ್ತಾರೆ. ಅದರಲ್ಲೊಂದು ಪ್ರಶ್ನೆ ಕರ್ನಾಟಕದ ಈಗಿನ ಉಪಮುಖ್ಯಮಂತ್ರಿ ಯಾರು? ಎಂಬುದು. ಒಬ್ಬರು ಸಿದ್ದರಾಮಯ್ಯ ಎಂದರೆ ಇನ್ನೊಬ್ಬರು ’ಜಯನಗರದಲ್ಲಾಯಿತಲ್ಲ ಅದೇ?’ ಎಂದು ಕೇಳುತ್ತಾರೆ! ನಮ್ಮ ಯುವಕರ ವೈಚಾರಿಕ ಮಟ್ಟ ಯಾವ ರೀತಿಯಲ್ಲಿದೆ ಎನ್ನುವುದಕ್ಕೆ ಇದನ್ನು ಹೇಳಿದೆ. ಯುವಜನರನ್ನು ಬೈಯುವುದಾಗಲೀ, ಟೀಕೆ ಮಾಡುವುದಕ್ಕಾಗಲೀ ನಾನು ಹೋಗುವುದಿಲ್ಲ. ಇದು ಒಳ್ಳೆಯದೋ ಕೆಟ್ಟದೋ ಅಥವಾ ಬೇರೆ ಏನಾದರೂ ಒಳ್ಳೆಯದಿದೆಯೇ? ನಾವೇ ಔಟ್‌ಡೆಟೆಡ್ ಆಗಿದ್ದೇವೆಯೇ? ಎಂಬ ಪ್ರಶ್ನೆಯೂ ಇದೆ.

ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿರಲು  ಮಾಧ್ಯಮದ ಪಾತ್ರ ಕೂಡ ಒಂದು.  ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಸಂಪಾದಕರುಗಳೆಲ್ಲರೂ ಒಂದೆಡೆ ಸೇರಿ ಸಮಾಜಕ್ಕೆ ಎಂತಹ ಸುದ್ದಿಗಳನ್ನು ನೀಡಬೇಕು ಎಂಬ ಕುರಿತು ಗಂಭೀರ ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದು ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ನ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರು ಅಭಿಪ್ರಾಯಪಟ್ಟಿದ್ದಾರೆ.

ನೀವು ಭಾಷಾ ಸಮಸ್ಯೆಯಲ್ಲಿ ಮಾಧ್ಯಮಗಳ ಪಾತ್ರವೂ ಇದೆ ಎಂದಿರುವುದು ನನಗೆ ತಿಳಿಯಿತು. ಅದು ನಿಜ ಕೂಡ. ನಮ್ಮ ಮಾಧ್ಯಮಗಳಲ್ಲಿ ತುಂಬಾ ತಪ್ಪುUಳಾಗುತ್ತವೆ. ವ್ಯಾಕರಣ, ಕಾಗುಣಿತ, ವಿಷಯಗಳಲ್ಲಿಯೂ ತಪ್ಪುಗಳಿರುತ್ತದೆ. ಆದರೆ ಸರಿಯಾಗಿ ರ‍್ಯಾಂಕ್ ಹೋಲ್ಡರ‍್ಸ್‌ಗಳು ಅಮೆರಿಕದಂತಹ ವಿದೇಶಗಳಿಗೆ ಹೋಗಿ ಮಲ್ಟೀಮಿಲಿಯನ್ ಕಂಪೆನಿಯಲ್ಲಿ ಸಾವಿರಾರು ಡಾಲರ್ ಸಂಬಳ ತೆಗೆದುಕೊಂಡು ಆಪ್ (app)ನ್ನು ತಯಾರಿಸುತ್ತಾರೆ. ಅಷ್ಟೆಲ್ಲ ಖರ್ಚು ಮಾಡಿ ತಯಾರಿಸಿದ ಆಪ್‌ನ್ನು ಡೌನ್‌ಲೋಡ್ ಮಾಡಿದರೆ ದೋಷಗಳು (Bugs)  ಕಾಣಿಸುತ್ತವೆ. Microsoft windowನಲ್ಲಿ Microsoft 3.1 most stable software. EA¢£À updated software ಗಳು ಆಗಾಗ ಹ್ಯಾಂಗ್ ಆಗುತ್ತಿರುತ್ತವೆ. ೭೦,೦೦೦ ರೂ. ನೀಡಿ ಖರೀದಿಸಿದ ಸ್ಯಾಮ್‌ಸಂಗ್ ಮೊಬೈಲ್ ಹ್ಯಾಂಗ್ ಆಗುತ್ತಿರುತ್ತದೆ, ವೈರಸ್ ಆಟ್ಯಾಕ್ ಆಗುವುದು, ವೈರಸ್ ಆಂಟಿ ಸ್ಕ್ಯಾನ್ ಮಾಡುವ ಬದಲು ತಾನೇ ವೈರಸ್ ಸೃಷ್ಟಿಸುವುದು - ಇವೆಲ್ಲವೂ ಆಗುತ್ತಿರುತದೆ. ಸಾಪ್ಟ್‌ವೇರ್‌ನಲ್ಲಿ ಹೇಗೆ ಬಗ್ಸ್‌ಗಳಿವೆಯೋ ಹಾಗೆಯೇ ಇಂದಿನ ಎಲ್ಲ ಕ್ಷೇತ್ರಗಳಲ್ಲಿಯೂ ಬಗ್ಸ್‌ಗಳಿವೆ. ಈ ಬಗ್ಸ್‌ಗಳ ಸಂಖ್ಯೆ ಕಡಮೆಯಾದಷ್ಟೂ ಆ ಕ್ಷೇತ್ರ ಬೆಳವಣಿಗೆಯಾಗುತ್ತದೆ.


ನಮ್ಮಲ್ಲಿ ಟೆಲಿವಿಷನ್ ಸ್ಪರ್ಧೆಗಳಲ್ಲಿ ಸಂಶೋಧನೆಗಳು ಇಲ್ಲವೇ ಇಲ್ಲ ಎನ್ನಬಹುದು. ಸಂಶೋಧನೆ ಹೊಸ ಮೊಬೈಲ್‌ಗಳಾವುವು, ಅವುಗಳ ವಿಶೇಷತೆಗಳೇನು, ಅದರ ಕ್ಯಾಮರಾ ಹೇಗಿದೆ?, ರಾಜ್ಯದ ವಿವಿಧೆಡೆ ಅದರ ಬೆಲೆ ಎಷ್ಟಿದೆ- ಎನ್ನುವಷ್ಟಕ್ಕೇ ಸೀಮಿತವಾಗಿರುವ ಈ ಸಂಧರ್ಭದಲ್ಲಿ ನೀವು ನನಗೆ ಆಶಾಕಿರಣವಾಗಿ ಕಾಣುತ್ತೀದ್ದೀರಿ. ನೀವು ಸಕಾರಾತ್ಮಕವಾಗಿ ಚಿಂತಿಸುತ್ತ, ರಚನಾತ್ಮಕ ಕೆಲಸವನ್ನು ಪ್ರಾರಂಭಿಸಿದ್ದೀರಿ. ಸಮಾಜಕ್ಕೆ ಕೊಡುಗೆ ನೀಡುವ ಲಕ್ಷಣ ನನಗೆ ನಿಮ್ಮಲ್ಲಿ ಕಾಣುತ್ತಿದೆ. ಕನ್ನಡ ಭಾಷೆಗೆ, ನಮ್ಮ ರಾಷ್ಟ್ರೀಯ ಚಿಂತನೆಗಳಿಗೆ ನೀವೊಂದು ಆಶಾಕಿರಣ.
ನಮ್ಮೆಲ್ಲ ಸಂಶೋಧನೆ, ಅಧ್ಯಯನ ಸಾಮಗ್ರಿಗಳನ್ನು ನಾವು ದೇಶದ ಹೊರಗಿನವುಗಳಿಗೆ ಹೋಲಿಸುತ್ತೇವೆ. ಉದಾಹರಣೆಗೆ ಸಿಬಂತಿ ಪದ್ಮನಾಭ ಅವರು ತಮ್ಮ ಕಮ್ಯುನಿಕೇಷನ್ ತರಗತಿಯಲ್ಲಿ ನೆದರ್‌ಲ್ಯಾಂಡ್‌ನ ಯೂನಿವರ್ಸಿಟಿಯೊಂದರ ಅಧ್ಯಯನದ ಪ್ರಕಾರ ಮಾಧ್ಯಮಗಳ ವರ್ತನೆಯನ್ನು ವಿವರಿಸುತ್ತಾರೆ. ಮಾಧ್ಯಮಗಳ ಬಳಕೆಯ ಕುರಿತು ಅಮೆರಿಕನ್ ಸಂಸ್ಥೆಗಳ ಸಮೀಕ್ಷೆಯ ಆಧಾರದಲ್ಲಿ ಜನರು ಇಷ್ಟು ಗಂಟೆ ಟಿವಿ, ಮೊಬೈಲ್ ನೋಡುತ್ತಾರೆ, ಇಷ್ಟು ಜನ ಪತ್ರಿಕೆ ಓದುತ್ತಾರೆ, ಇಷ್ಟು ವಯಸ್ಸಿನರು ಇದನ್ನು ಓದುತ್ತಾರೆ - ಈ ರೀತಿಯ ಸಂಶೋಧನೆಗಳು, ಪ್ರಬಂಧಗಳು, ಅಂಕಿಅಂಶಗಳು ಬರುತ್ತದೆ. ಅಂದರೆ ನಾವು ನಮ್ಮ ಸಂಶೋಧನೆಗಳಿಗೆ ಎಲ್ಲ ಜಿಚಿಛಿಣs, sಣಚಿಣisಣiಛಿsಗಳನ್ನು ವಿದೇಶಗಳಿಗೆ (exಣeಡಿಟಿಚಿಟs) ಹೋಲಿಸುತ್ತೇವೆ. ನಮ್ಮಲ್ಲಿ ಕಡಮೆ ಸಂಶೋಧನೆಗಳಾಗಿರುವುದೇ ಇದಕ್ಕೆ ಕಾರಣ. ನಮ್ಮ ಶಾಲಾ ಕಾಲೇಜು ಪಠ್ಯಗಳಿಂದ ಮೆಡಿಕಲ್ ಸೈನ್ಸ್ ವರೆಗೆ ಎಲ್ಲವೂ ವಿದೇಶೀ ಮಾನದಂಡಗಳ ಮೇಲೆಯೇ ನಡೆಯುತ್ತಿದೆ. ನಮ್ಮಲ್ಲಿ ಪ್ರಚಲಿತವಾಗಿರುವ ಕೊಲೆಸ್ಟ್ರಾಲ್ ಮಿತಿ ಭಾರತದ್ದಲ್ಲ. ಅದು ಅಮೆರಿಕದಲ್ಲೋ ಯೂರೋಪ್‌ನಲ್ಲೋ ತಯಾರಿಸಿದ ಮಾನದಂಡಗಳು. ನಮ್ಮ ದೇಹದಲ್ಲಿ ಇಷ್ಟು (x factor ) ಕೊಬ್ಬಿನಂಶವಿರಬೇಕು, ಇದಕ್ಕಿಂತ ಹೆಚ್ಚಾದಲ್ಲಿ ಚಿಕಿತ್ಸೆ ಅಗತ್ಯ ಎನ್ನಲಾಗುತ್ತದೆ. ಈ x factorನ್ನು ಕೆಳಗೆ ಇಳಿಸಿಬಿಟ್ಟರೆ ಆಗ ನಾವೆಲ್ಲರೂ ಔಷಧಿ ತೆಗೆದುಬೇಕಾಗುತ್ತದೆ! ಖ್ಯಾತ ವೈದ್ಯರಾದ ಡಾ. ಬಿ.ಎಂ. ಹೆಗಡೆ ಅವರು ’ನಮ್ಮೆಲ್ಲ ಮೆಡಿಕಲ್ ಲ್ಯಾಬರೇಟರಿಗಳು ಬಳಸುವ ಸ್ಟಾಂಡರ್ಡ್ ಸಂಪೂರ್ಣ ವಿದೇಶಗಳದ್ದು. ಹೀಗಾಗಿ ಆರೋಗ್ಯದ ಪರೀಕ್ಷೆಗೆ ಹೋದ ಎಲ್ಲರಿಗೂ ಸಮಸ್ಯೆಗಳ ಪಟ್ಟಿಯೇ ಸಿಗುತ್ತದೆ! ಇದಕ್ಕೆ ಕಾರಣ ನಮ್ಮ ಸಂಶೋಧನೆ, ಸ್ಟಾಂಡರ್ಡ್‌ಗಳೆಲ್ಲ ಪಾಶ್ಚಾತ್ಯ ದೇಶಗಳಿಂದ ಬಂದಿರುವುದು’ ಎಂದಿರುವ ವಾಟ್ಸಾಪ್ ಸಂದೇಶವನ್ನು ನೋಡಿರಬಹುದು.
ನನ್ನ ಸಂಬಂಧಿಕರಲ್ಲೊಬ್ಬ ಹುಡುಗಿ ಅಮೆರಿಕದಲ್ಲಿ ೯ನೇ ತರಗತಿಯಲ್ಲಿ ಓದುತ್ತಿದ್ದಳು. ಅಮೆರಿಕದಲ್ಲಿ ಪ್ರತೀ ಜಿಲ್ಲಾಮಟ್ಟದಲ್ಲಿ ತಮ್ಮತಮ್ಮ ಮಕ್ಕಳು ಓದಬೇಕಾದ ಸಿಲೆಬಸ್‌ಗಳನ್ನು ನಿರ್ಧರಿಸಿ ಪಠ್ಯಪುಸ್ತಕಗಳನ್ನು ತಯಾರಿಸುತ್ತಾರೆ. ನಮ್ಮ ರಾಜ್ಯದಲ್ಲಿರುವ ಎಸ್‌ಎಸ್‌ಎಲ್‌ಸಿ ಬೋರ್ಡ್‌ನಂತೆ ಅಲ್ಲಿ ಪ್ರತೀ ಜಿಲ್ಲೆಯಲ್ಲೊಂದು ಬೋರ್ಡ್ ಆಯಾ ಪ್ರಾದೇಶಿಕ ಮಟ್ಟದಲ್ಲಿ ಕೆಲಸ ಮಾಡುತ್ತಿರುತ್ತದೆ. ಹೀಗಾಗಿ ಅಮೆರಿಕದ ಎಲ್ಲ ಕಡೆ ಒಂದೇ ರೀತಿಯ ಸ್ಟಾಂಡರ್ಡ್ ಶಿಕ್ಷಣ ಇಲ್ಲ. ಅವಳು ಓದುತ್ತಿರುವ ಶಾಲೆಯಲ್ಲಿ ಹಿಂದೂ ಧರ್ಮವು ಒಂದು untouchabilityಯನ್ನು ಅತಿಯಾಗಿ ಬಳಸುವವರು - ಹೀಗೆ ಭಾರತವನ್ನು ಹಿಂದೂಗಳನ್ನು ತುಚ್ಛೀಕರಿಸುವ ಹಲವು ವಿಷಯಗಳಿದ್ದವು. ಒಮ್ಮೆ ಶಾಲೆಯಲ್ಲಿ ಅಧ್ಯಾಪಕರು ’ಸೊನ್ನೆ’ಯ ಬಗೆಗೆ ಮಾತನಾಡುತ್ತಾ ಅದನ್ನು ಹಿಂದೂಧರ್ಮದ ಕೊಡುಗೆ, ಭಾರತದ ಕೊಡುಗೆ ಎಂದು ಗುರುತಿಸದೇ ಬೇರೆ ಧರ್ಮಕ್ಕೆ ರಿಲೇಟ್ ಮಾಡಿದರು. ಸಾಮಾನ್ಯ ರೂಢಿಯಲ್ಲಿ ’ಗಣಿತದಲ್ಲಿ ಬಾರತದ ಕೊಡುಗೆ ಶೂನ್ಯ’ ಎಂಬ ಹಾಸ್ಯರೂಪದ ಮಾತಿನ ಅರಿವಿದ್ದ ಅವಳಿಗೆ ಇದು ಆಶ್ಚರ್ಯ ತಂದಿತು. ಅವಳು ’ಇದು ತಪ್ಪು. ಶೂನ್ಯವನ್ನು ಭಾರತದ ಆರ್ಯಭಟ ಕಂಡುಹಿಡಿದಿದ್ದು’ ಎಂದು ಶಿಕ್ಷಕರಿಗೆ ತಿಳಿಸಿದಳು. ’ನೀನು ಹೀಗೆ ಹೇಳುವುದಕ್ಕೆ ಆಧಾರಗಳನ್ನು ಒದಗಿಸಿ, ಈ ವಿಷಯದಲ್ಲಿ ಒಂದು ಪ್ರಾಜೆಕ್ಟ್ ಮಾಡಿಕೊಂಡು ಬಾ’ ಎಂದು ಆಕೆಗೆ ಅವರು ಸೂಚಿಸಿದರು. ಅವಳು ಮಾಡಿದಳು. ಅಂದರೆ ವಿದೇಶಗಳಲ್ಲಿ ನಮ್ಮನ್ನು ಅನ್‌ಟಚೇಬಲ್ ಲೆವೆಲ್‌ನವರು ಎನ್ನುತ್ತಾ ನಮ್ಮ ಶ್ರೇಷ್ಠ ಕೊಡುಗೆಗಳನ್ನು ಬೇರೆಯವರ ಹೆಗಲಿಗೆ ಕಟ್ಟುವ ಕೆಲಸ ನಡೆಯುತ್ತಿದೆ. ನಮ್ಮ ಜ್ಞಾನವನ್ನು ನಾವು ಸರಿಯಾಗಿ ಪ್ರಪಂಚಕ್ಕೆ ತಿಳಿಸಿಲ್ಲದಿರುವುದರಿಂದ ಇದು ನಡೆಯುತ್ತಿದೆ.
ನಮ್ಮ ಶ್ರೇಷ್ಠ ಜ್ಞಾನವನ್ನು ನಾವು ಜಗತ್ತಿಗೆ ಅಥವಾ ಹೊರಗಡೆ ಪ್ರೊಜೆಕ್ಟ್ ಮಾಡಲೇ ಇಲ್ಲ. ಹೀಗಾಗಿ ಅಮೆರಿಕದವರ ತಪ್ಪು ಎಂದು ಹೇಳಲಾರೆ. ಈಗಂತೂ ಪಠ್ಯಪುಸ್ತಕಗಳಲ್ಲಿ ವ್ಯಕ್ತಿಚಿತ್ರಣ ಒಂದು ಚಿಂತನೆಯ ವ್ಯಕ್ತಿಗಳು ಸರ್ಕಾರದಲ್ಲಿದ್ದಾಗ ಇದ್ದಂತೆ ಇನ್ನೊಂದು ಚಿಂತನೆಯವರಿದ್ದಾಗ ಇರುವುದಿಲ್ಲ. ಸಂಪೂರ್ಣ ಬೇರೆಯೇ ಆಗಿರುತ್ತದೆ. ಸರ್ಕಾರಗಳು ಬದಲಾದಂತೆ ಇತಿಹಾಸವೇ ಬದಲಾಗುತ್ತದೆ! ಇಂತಹ ಸಂದರ್ಭದಲ್ಲಿ ನಾನು ಯಾರನ್ನೂ ದೂರಲಾರೆ. ಆದರೆ ಸಮಸ್ಯೆಯಿರುವುದು, ನಾವು ನಮ್ಮಲ್ಲಿರುವ ಜ್ಞಾನವನ್ನು ಡಾಕ್ಯುಮೆಂಟ್ ಮಾಡದೇ ಇರುವುದು. ಡಾಕ್ಯುಮೆಂಟ್ ಮಾಡಿ ಇದು ನಮ್ಮ ಜ್ಞಾನ ಎಂದು ಹಕ್ಕು ಸ್ಥಾಪನೆ ಮಾಡಲು ನಾವೆಂದೂ ಹೋಗಿಲ್ಲ. ಜ್ಞಾನ ಎನ್ನುವುದು ಮುಕ್ತ ಹಾಗೂ ಅದು ಎಲ್ಲರಿಗೂ ಸಿಗಬೇಕು ಎಂದು ನಾವು ನಂಬಿದ್ದೇವೆ. ನಮ್ಮ ತತ್ತ್ವಶಾಸ್ತ್ರದಲ್ಲಿಯೂ ಹೀಗೆಯೇ ಇದೆ. ಆದರೆ ವಿದೇಶದಲ್ಲಿ ಒಂದು ನಾಯಿಯ ಪ್ರತಿಮೆಯನ್ನೂ ಅದರ ಇತಿಹಾಸ, ಅದರ ಇಂಚು, ಎತ್ತರ, ಅದು ಎಲ್ಲಿಯವರೆಗೆ ಬದುಕಿತ್ತು, ಅದು ಯಾರ ಅಧೀನಕ್ಕೆ ಒಳಪಟ್ಟಿತ್ತು - ಇತ್ಯಾದಿಗಳನ್ನು ಡಾಕ್ಯುಮೆಂಟ್ ಮಾಡುತ್ತಾರೆ. ಆ ರೀತಿಯ ಯಾವುದೇ ಡಾಕ್ಯುಮೆಂಟೇಶನ್ ನಮ್ಮಲಿಲ್ಲ. ಇದು ನಮ್ಮ ದೊಡ್ಡ ಸಮಸ್ಯೆ. ನಿಮಗೆ ಈ ಸಾಮರ್ಥ್ಯವಿದೆ. ಬಹುಮಾನ ನಮ್ಮನ್ನು ಉತ್ತೇಜಿಸಲಿರುವುದಷ್ಟೆ. ಹೀಗಾಗಿ ಬಹುಮಾನ ಬಂದಿದೆಯೋ ಇಲ್ಲವೋ ನಾವು ಈ ಕಾರ್ಯದಲ್ಲಿ ತೊಡಗಿಕೊಳ್ಳಬೇಕು.
ನಮ್ಮ ಜ್ಞಾನವನ್ನು ಹೊರಗಡೆ ತೆಗೆದುಕೊಂಡು ಹೋದವರೆಂದರೆ ನಾವು ಸ್ವಾಮಿ ವಿವೇಕಾನಂದರ ಹೆಸರು ಹೇಳುತ್ತೇವೆ. ವಿವೇಕಾನಂದರು, ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದವರು ಎನ್ನುತ್ತೇವೆ. ಅವರ ದೃಷ್ಟಿಯೂ ಕೂಡ ಸಂಪೂರ್ಣವಾಗಿ ಯುವಶಕ್ತಿಯ ಮೇಲೆಯೇ ಇತ್ತು. ಅವರು ದೇಶದ ಯುವಶಕ್ತಿ ಸಕಾರಾತ್ಮಕ ಚಿಂತನೆ ಹಾಗೂ ರಚನಾತ್ಮ ಕಾರ್ಯಗಳನ್ನು ಮಾಡಬೇಕು. ’ಯುವಕರೇ ಏಳಿ ಎದ್ದೇಳಿ ಎಚ್ಚರಾಗಿ. ಅಲ್ಲಿಯವರೆಗೆ ದೇಶ ಉದ್ದಾರವಾಗುವುದಿಲ್ಲ’ ಎಂದಿರುವುದು ಇಂತಹ ಸಂದರ್ಭದಲ್ಲಿಯೆ. ಇತಿಹಾಸ ಮರುಕಳಿಸುತ್ತಿರುತ್ತದೆ. ಒಮ್ಮೆ ಜಾಗೃತಿ; ಇನ್ನೊಮ್ಮೆ ಅದು ಮರೆಯಾಗುತ್ತದೆ. ಮರೆಯಾದ ಸಂದರ್ಭದಲ್ಲಿ ಜಾಗೃತಿ ಮೂಡಿಸಲು ಒಂದು ಸಂಚಲನದ ಅಗತ್ಯವಿರುತ್ತದೆ. ಇಂದು ಅಂತಹ ಸಂಚಲನಕ್ಕಾಗಿ ಒಂದು ಮಾದರಿಯನ್ನು ಕಾಯಬೇಕಾದ ಅಗತ್ಯವಿಲ್ಲ. ನಮ್ಮೆದುರಿಗಿರುವ ಮಾದರಿಗಳನ್ನೇ ಇಟ್ಟುಕೊಂಡು, ಪ್ರೇರಣೆ ಪಡೆದು ನಮ್ಮ ಕಾಲೇಜುಗಳಲ್ಲಿ, ಊರುಗಳಲ್ಲಿ ಸ್ಪೂರ್ತಿ ನೀಡುವ ಕಾರ್ಯವನ್ನು ಮಾಡಿದರೆ ಅದೇ ನಾವು ನಮ್ಮ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ.
ನಾನು ಮಾಧ್ಯಮದ ವ್ಯಕ್ತಿಯಾಗಿರುವುದರಿಂದ ಮೂರು ವಿಷಯಗಳನ್ನು ಹೇಳಲು ಇಷ್ಟಪಡುತ್ತೇನೆ. ಮೊದಲನೆಯದು, ಕನ್ನಡ ಬಾಷೆಯ ಸಮಸ್ಯೆಯೆಂದರೆ ಇದರ Economic Value (ಆರ್ಥಿಕ ಮೌಲ್ಯ). ಪ್ರತೀ ಭಾಷೆಗೂ ಒಂದು ಆರ್ಥಿಕ ಮೌಲ್ಯವಿರುತ್ತದೆ. ಸಿನಿಮಾ ಕ್ಷೇತ್ರವನ್ನೇ ನೋಡಿ. ಒಂದು ಹಾಲಿವುಡ್ ಸಿನಿಮಾದ ಮಾರುಕಟ್ಟೆ ಇಡೀ ಜಗತ್ತು. ಅವರು ೧೦೦೦ ಕೋಟಿ ಖರ್ಚು ಮಾಡಿದರೆ ಅದು ೫೦೦೦ ಕೋಟಿ ಗಳಿಸುತ್ತದೆ. ಹಿಂದಿ ಸಿನಿಮಾದವರು ೩೦೦ ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದರೆ ಅದರ ಮಾರುಕಟೆ ಕೇವಲ ಸಂಪೂರ್ಣ ಭಾರತ ಮಾತ್ರವಲ್ಲ ಗಲ್ಫ್ ದೇಶಗಳು ಸೇರಿದಂತೆ ಹಲವು ದೇಶಗಳಿಗೆ ವ್ಯಾಪಿಸಿದೆ. ಇತ್ತೀಚೆಗೆ ನಾನು ಉಮನ್ ಮತ್ತು ಯಮನ್ ಗಡಿಯವರೆಗೆ ಹೋಗಿದ್ದೆ. ಅಲ್ಲಿ ಸೈನಿಕರ ಜೊತೆ ಮಾತನಾಡುತ್ತಿರುವಾಗ ಅಲ್ಲಿಯ ಹೇರ್‌ಕಟ್ಟಿಂಗ್ ಸೆಲೂನ್‌ನಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್‌ರ ಚಿತ್ರವಿತ್ತು. ಅಂದರೆ ಹಿಂದಿ ಮಾರುಕಟ್ಟೆ ಯಮನ್ ಗಡಿಯವರೆಗೂ ಹರಡಿದೆ. ಗಡಿಯ ನಂತರವೂ ಇರಬಹುದು! ಹೀಗಾಗಿ ಆ ಸಿನಿಮಾ ೧,೨೦೦ ರಿಂದ ೧,೩೦೦ ಕೋಟಿ ಗಳಿಸುತ್ತದೆ. ಇನ್ನು ತೆಲಗು ಸಿನಿಮಾ. ತೆಲಗುವಿನಲ್ಲಿ ಒಂದು ಸಿನಿಮಾಗೆ ೧೦೦ ಕೋಟಿ ಸಿನಿಮಾ ಮಾಡಿದರೆ ಬಾಹುಬಲಿಯಂತಹ ಸಿನಿಮಾ ೧೦೦೦ ಕೋಟಿ, ೧೨೦೦ ಕೋಟಿ ಗಳಿಸಿದೆಯಂತೆ! ಆದರೆ ಕನ್ನಡದಲ್ಲಿ ೧೦ ಕೋಟಿ ಖರ್ಚು ಮಾಡಿದ ಸಿನಿಮಾ ಕೇವಲ ೬ ಕೋಟಿ ಗಳಿಸುತ್ತದೆ. ಕನ್ನಡದ ಸಿನಿಮಾ ಕರ್ನಾಟಕದ ಹೊರಗೆ ಪ್ರದರ್ಶನ ಕಾಣುವುದು ಬಿಡಿ, ಕೋಲಾರದಲ್ಲಿಯೇ ಕಷ್ಟ. ದಕ್ಷಿಣ ಕರ್ನಾಟಕದ ಸಿನಿಮಾ ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡುವುದಿಲ್ಲ. ಹೀಗಾಗಿ ಕನ್ನಡದಲ್ಲಿ ೧೦ ಕೋಟಿ, ೨೦ ಕೋಟಿ ಖರ್ಚು ಮಾಡಿ ಸಿನಿಮಾ ಮಾಡುವುದು ಕೂಡ ಕಷ್ಟವಾಗಿದೆ. ಕನ್ನಡದಲ್ಲಿ ೧೦೦ ಕೋಟಿ ಖರ್ಚು ಮಾಡಿ ತಯಾರಿಸಿದ ಸಿನಿಮಾ ೪೦೦ ಕೋಟಿ ಗಳಿಸುವಂತಾಗಬೇಕು. ಆಗ ಅದರಲ್ಲಿ ಹೂಡಿಕೆಗಾಗಿ, ಕೆಲಸ ಮಾಡಲು ಜನ ಬರುತ್ತಾರೆ. ಅದರ ಸುತ್ತಲೂ ಒಂದು ಆರ್ಥಿಕತೆ ಬೆಳೆಯುತ್ತಾ ಹೋಗುತ್ತದೆ.
ಆಗ ಇಂಡಿಯನ್ ಎಕ್ಸ್‌ಪ್ರೆಸ್‌ನ(ಆಗ ಇಂಡಿಯನ್ ಎಕ್ಸ್‌ಪ್ರೆಸ್ & ಕನ್ನಡಪ್ರಭ ಜೊತೆಯಾಗಿತ್ತು) ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣನವರು ಖಜ್ರು ಕಾಟ್ಕರ್ ಅವರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಮಾಡಲು ಬರುವಂತೆ ಕರೆದರು. ಅವರು ನನಗೆ ಕನ್ನಡ ಬರುತ್ತೆ, ಇಂಗ್ಲಿಷ್ ಬರುವುದಿಲ್ಲ ಎಂದರು. ಅದಲ್ಲ ಇಲ್ಲಪ್ಪಾ, ಇಂದು ಯಾರಿಗೆ ಹೊಟ್ಟೆಗೆ ಇಲ್ಲವೋ ಅವನಲ್ಲಿ ನಿನಗೆ ಅನ್ನ ಬೇಕಾಗಿದ್ದರೆ ಈ ಭಾಷೆ ಕಲಿತುಕೊಂಡು ಬಾ ಎಂದರೆ ಕಲಿತುಕೊಂಡು ಬರುತ್ತಾನೆ. ಹೊಟ್ಟೆಗೆ ಅನ್ನ ಇಲ್ಲದಿದ್ದರೆ, ಅನ್ನ ಬೇಕಾದರೆ ಚೈನೀಸನ್ನು ಕೂಡಾ ಕಲಿಯುತ್ತಾನೆ. ಅದರ ಜೊತೆಗೆ ಪ್ರೆಂಚ್‌ನ್ನು ಕೂಡಾ ಕಲಿಯುತ್ತಾನೆ. ಹೊಟ್ಟೆ ತುಂಬಿದವವನಿಗೆ ಯಾವ ಭಾಷೆಯೂ ಬೇಡ, ಭಾಷೆ, ಭಾಷಾಭಿಮಾನ, ಭಾಷೆ ಕಲಿಯಬೇಕು ಎನ್ನುವುದು ಯಾವುದೂ ಇರುವುದಿಲ್ಲ’ ಎಂದಿದ್ದರಂತೆ.
ನಮ್ಮ ಭಾಷೆ ಎನ್ನುವಂತಹದ್ದಕ್ಕೆ ಅನ್ನವನ್ನು ಕೊಡುವ ಶಕ್ತಿ ಇರಬೇಕು. ಬರೀ ಭಾವನಾತ್ಮಕವಾಗಿ ನಮ್ಮ ಅಮ್ಮ, ಮಾತೆ ತಾಯಿ ಎಂಬ ಮಾತುಗಳು ಒಂದು ಹಂತದವರೆಗೆ ಸರಿ. ಆದರೆ ಇದು ಛಿಡಿuಜe ಠಿಡಿಚಿಣiಛಿಚಿಟ ತಿoಡಿಟಜ. We ಛಿಚಿಟಿ ಚಿಛಿಛಿeಠಿಣ iಣ. ನಮ್ಮ ಭಾಷೆಯಿಂದ ನಮ್ಮ ಎಕನಾಮಿಕ್ ಸ್ಟೇಟಸ್‌ಗೆ ವಾಲ್ಯೂ ಬರುತ್ತದೆ ಎಂದಾದರೆ ಇಂಗ್ಲಿಷನವರೂ ಕೂಡಾ ಬಂದು ಆ ಭಾಷೆಯನ್ನು ಕಲಿಯುತ್ತಾರೆ. ನಾವು ಕನ್ನಡದಲ್ಲಿ ಕೆ.ಜಿ.ಎಫ್ ಮಾಡಿ ಹಿಂದಿಗೆ ಡಬ್‌ಮಾಡಿ ಬಿಡುಗಡೆ ಮಾಡುವುದಿಲ್ಲವೇ? ಯಾಕೆಂದರೆ ಹಿಂದಿಯಲ್ಲಿ ಹಣ ಬರುತ್ತದೆ. ಕನ್ನಡಕ್ಕೆ ಹಣ ಗಳಿಸುವ ಸಾಮರ್ಥ್ಯ ತರಬೇಕು ಎನ್ನುವುದು ನನ್ನ ಬಹಳ ದಿನಗಳ ಆಗ್ರಹಪೂರ್ವಕ ಒತ್ತಾಸೆ. ಒಂದೇ ರ‍್ಯಾಂಕ್ ಪಡೆದ ಕನ್ನಡ ಹಾಗೂ ಇಂಗ್ಲಿಷ್ ಪತ್ರಕರ್ತರ ಸಂಬಳದಲ್ಲಿ ಬಹಳ ವ್ಯತ್ಯಾಸವನ್ನು ಕಾಣಬಹುದು. ಇಂಗ್ಲಿಷ್ ವರದಿಗಾರನಿಗೆ ಕನ್ನಡಕ್ಕಿಂತ ಅಧಿಕ ಸಂಬಳ ಸಿಗುತ್ತಿದೆ. (ಈಗ ಸಮಯ ಸ್ವಲ್ಪ ಬದಲಾಗಿದೆ.) ಇದೇ ಕಾರಣಕ್ಕೆ ಪ್ರತಿಭಾವಂತ ಸಿಬಂತಿ ಪದ್ಮನಾಭ ಅವರು ಅವರು ಕನ್ನಡ ಪ್ರಭದಿಂದ ಡೆಕ್ಕನ್‌ಗೆ ಹೋದರು. ಇದು ಪ್ರಾಕ್ಟಿಕಲ್ ರಿಯಾಲಿಟಿ. ಇಲ್ಲಿಗಿಂತ ಅಲ್ಲಿ ಅಧಿಕ ಸಂಬಳ ಸಿಗುವುದಾದರೆ ಯಾಕೆ ಹೋಗಬಾರದು? ಆರ್ಥಿಕ ಶಕ್ತಿಯನ್ನು ತಂದು ಕೊಡುವ ಸಾಮರ್ಥ್ಯವನ್ನು ಕನ್ನಡಕ್ಕೆ ತಂದುಕೊಡಬೇಕಾಗಿದೆ. ಅದು ನಮ್ಮೆದುರಿಗಿರುವ ಸವಾಲು.
ಯಾವುದೇ ಭಾವನಾತ್ಮಕ ಮಾತುಗಳನ್ನು ಕೊನೆಗೆ ಮಸಲಬಿಯಾಗಿಯೇ ನೋಡುತ್ತದೆ. ಎಷ್ಟೇ ಭಾವನಾತ್ಮಕ ಸಮಾಜ ಕೊನೆಗೆ ತನ್ನ ಸಾಮಾಜಿಕ ಸ್ಟೇಟಸ್‌ಗೆ ತನಗೆ ಬೇಕಾದ ಅನುಕೂಲತೆಗಳನ್ನು ಪೂರೈಸುತ್ತದೆಯೇ ಎಂದಷ್ಟೇ ನೋಡುತ್ತದೆ. ಇದು ವಾಸ್ತವ. ಹಾಗಾದರೆ ೨೦೦೦ ವರ್ಷಗಳ ಇತಿಹಾಸವಿರುವುದು, ತಮಿಳಿಗಿಂತಲೂ ಅತ್ಯಂತ ಹಳೆಯದು, ಶಾಸ್ತೀಯ ಭಾಷೆ, ಪಂಪ, ಕುವೆಂಪು, ಕುಮಾರವ್ಯಾಸರಂತಹ ಶ್ರೇಷ್ಠ ಕವಿಗಳಿದ್ದಾರೆ- ಇವುಗಳು ಲೆಕ್ಕಕ್ಕಿಲ್ಲ ಎಂದಲ್ಲ. ಇವೆಲ್ಲವೂ ಬಹಳ ಮುಖ್ಯ. ಇದು ಬೇರುಗಳಿದ್ದಂತೆ. ನಾವು ಬೆಳೆಯುತ್ತಾ, ದಾರಿ ಮಾಡಿಕೊಂಡು ಮುಂದಕ್ಕೆ ಹೋಗಬೇಕಾಗಿದೆ. ಹೀಗೆ ಮಾಡಲು ಖಂಡಿತವಾಗಿಯೂ ಸಾಧ್ಯವಿದೆ.
ಯಾವುದೇ ಒಂದು ಕಾರ್ಯ ಸಫಲತೆಗೆ ಅದಕ್ಕೊಂದು ವ್ಯವಸ್ಥಿತ sಣಡಿಚಿಣegಥಿ(ಯೋಜನೆ) ಅಗತ್ಯ. ಒಂದು ಸರ್ಕಾರ ಯೋಜನೆಗಳನ್ನು ಮಾಡುವಾಗ ಬಜೆಟ್ ಮಾಡುತ್ತದೆ, ಕಾರ್ಪೋರೇಷನ್ ಟೌನ್ ಪ್ಲಾನಿಂಗ್ ಮಾಡುತ್ತೇವೆ. ಮೂಲಸೌಕರ್ಯ (iಟಿಜಿಡಿಚಿsಣಡಿuಛಿಣuಡಿe), ಲೇಔಟ್ ಎಂದು ಮಾಡುತ್ತೇವೆ. ಇದೇ ರೀತಿ ಒಂದು ಭಾಷೆಗೂ ಒಂದು ಯೋಜನೆ, ಐiಟಿguisಣiಛಿs ಠಿಟಚಿಟಿನ ಅಗತ್ಯವಿದೆ. ದುರ್ದೈವಕ್ಕೆ ಯಾರೂ ಕೂಡಾ ಈ ಪ್ರಯತ್ನ ಮಾಡುತ್ತಿಲ್ಲ, ಇದರ ಬಗೆಗೆ ಚಿಂತಿಸುತ್ತಲೂ ಇಲ್ಲ. ಇದಕ್ಕೆ ಪ್ರೆಂಚ್ ಉತ್ತಮ ಉದಾಹರಣೆ. ಸಂಪೂರ್ಣ ಲ್ಯಾಟೀನ್‌ನಲ್ಲಿಯೇ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪ್ರೆಂಚ್ ಜನರು ಏಟಿoತಿಟeಜge shouಟಜ be iಟಿ ouಡಿ ಐಚಿಟಿguಚಿge (ನಮ್ಮ ಜ್ಞಾನ ಯಾವಾಗಲೂ ಪ್ರೆಂಚ್‌ನಲ್ಲಿರಬೇಕು) - ಎಂದು ನಿಶ್ಚಯಿಸಿದರು. ಭಾಷೆ ಬೆಳೆಯಬೇಕೆಂದರೆ ಅದಕ್ಕೊಂದು ಸಾಮಾಜಿಕ (sಣಚಿಣus) ಮತ್ತು ವ್ಯಾವಹಾರಿಕ(ಛಿoಡಿಠಿus) ಯೋಜನೆಯ ಅಗತ್ಯವಿರುತ್ತದೆ.
ಸಾಮಾಜಿಕ ಯೋಜನೆ (Sಣಚಿಣus ಠಿಟಚಿಟಿ) ಎಂದರೆ, ಒಂದು ಭಾಷೆ ಬೆಳೆಯಬೇಕೆಂದರೆ ಮಗು ಹುಟ್ಟಿದಾಗ ಕೇಳುವ ಲಾಲಿ ಹಾಡು ಆ ಭಾಷೆಯಲ್ಲಿದೆಯೇ? ಬೆಳೆಯುತ್ತಾ ಅಮ್ಮನ ಜೊತೆ ಮಾತನಾಡಲು ಬೇಕಾದ ಶಬ್ದಗಳು, ಮಗುವಿಗೆ ತನ್ನ ಅಭಿಪ್ರಾಯಗಳನ್ನು, ಭಾವನೆಗಳನ್ನು ವ್ಯಕ್ತಪಡಿಸಲು ಅಗತ್ಯ ಭಾಷಾ ಸೌಲಭ್ಯಗಳಿವೆಯೇ? ತನ್ನ ಪರಿಸರದ ಜೊತೆ ಮಾತನಾಡಲು, ಅವರೆಲ್ಲರಿಗೂ ಅರ್ಥವಾಗುವ ಸಂವಹನ ಮಾಡಲು ಬೇಕಾದ ವ್ಯವಸ್ಥೆ ಆ ಭಾಷೆಯಲ್ಲಿದೆಯೇ?, ಪ್ರಾಥಮಿಕ ಶಿಕ್ಷಣಕ್ಕೆ, ಮಾಧ್ಯಮಿಕ ಶಿಕ್ಷಣಕ್ಕೆ ಬೇಕಾದ ಅಗತ್ಯಗಳಿವೆಯೇ? ಎಂಬುದು ಮುಖ್ಯ. ಇವೆಲ್ಲ ಕನ್ನಡಕ್ಕೆ ಇದೆ. ಲಾಲಿ ಹಾಡಿನಿಂದ ಹೈಸ್ಕೂಲ್ ವರೆಗಿನ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಕನ್ನಡಕ್ಕೆ ಇದೆ. ಆದರೆ ಹೈಯರ್ ಎಜುಕೇಷನ್‌ಗೆ ಬೇಕಾದ ಜ್ಞಾನವನ್ನು (ಏಟಿoತಿಟeಜge) ನೀಡುವ ವ್ಯವಸ್ಥೆ ಕನ್ನಡದಲ್ಲಿಲ್ಲ. ಇದ್ದರೂ ೧೦%ರಿಂದ ೨೦% ಮಾತ್ರ. ಆ ಭಾಷೆಯನ್ನು ವ್ಯವಹಾರದಲ್ಲಿ ಬಳಸಬಹುದೇ? ಎಂಬುದು ಇನ್ನೊಂದು ಮುಖ್ಯ ಅಂಶ. ಉದಾಹರಣೆಗೆ ಕನ್ನಡ ಇಲ್ಲದೆಯೇ ಬೆಂಗಳೂರಿನಲ್ಲಿ ಬದುಕಲು ಸಾಧ್ಯವಿಲ್ಲವೇ? ವ್ಯವಹಾರ ಮಾಡಲು ಸಾಧ್ಯವಿಲ್ಲವೇ? ಸಾಧ್ಯವಿದೆ ಎಂದಾದರೆ, ಯಾರು, ಯಾಕೆ ಕನ್ನಡ ಕಲಿಯುತ್ತಾರೆ? ವ್ಯಾವಹಾರಿಕವಾಗಿ ಕನ್ನಡ ಭಾಷೆಯನ್ನು ಕಲಿಯಲೇ ಬೇಕು ಎಂಬುದನ್ನು ನಿಶ್ಚಯಿಸಿದರೆ ಈ ಸಮಸ್ಯ ಪರಿಹಾರವಾಗುತ್ತದೆ.
ಇನ್ನು ಆಡಳಿತ ಭಾಷೆ? ಚೀನಾಕ್ಕೆ ಹೋದಾಗ ನಾನು ಬಹಳ ಸಂಕಷ್ಟವನ್ನು ಎದುರಿಸಿದೆ. ನನಗೆ ಇಂಗ್ಲಿಷ್ ಗೊತ್ತಿದೆ. ಆದರೆ ಅಲ್ಲಿ ನಡೆಯುವುದಿಲ್ಲ. ಅಲ್ಲಿನ ಬೋರ್ಡ್‌ಗಳು ನನಗೆ ಅರ್ಥವಾಗುವುದಿಲ್ಲ. ಇಂದಿನ ತಂತ್ರಜ್ಞಾನವನ್ನು ಬಳಸಿ ಗೂಗಲ್ ಟ್ರಾನ್ಸಲೇಟರ್‌ನಲ್ಲಿ ಅದನ್ನು ಇಂಗ್ಲಿಷ್‌ಗೆ ಅನುವಾದಿಸಿ ಕೇಳಬಹುದು. ಆದರೆ ಅದನ್ನು ಎಷ್ಟು ದಿನ ಮಾಡಲು ಸಾಧ್ಯ. ಅಲ್ಲಿ ಬದುಕಬೇಕೆಂದರೆ ನಾನು ಚೈನೀಸ್‌ನ್ನು ಕಲಿಯಲೇ ಬೇಕು. ಈ ರೀತಿಯ ಛಿomಠಿuಟsioಟಿ ಛಿಡಿeಚಿಣe ಮಾಡುವ ವ್ಯವಸ್ಥೆಯ ಆಗಬೇಕು. ಅದಕ್ಕೆ ಅಗತ್ಯ ಯೋಜನೆ ಕನ್ನಡದಲ್ಲಿ ತಯಾರಿಸಬೇಕು. ಒಂದು ಸ್ಪಷ್ಟ ಯೋಜನೆ ಇಲ್ಲದಿದ್ದರೆ ನಮ್ಮ ಆರ್ಥಿಕತೆ, ಬೆಂಗಳೂರು ವಿಶ್ವನಗರಿ, ಇಲ್ಲಿ ಈ ರೀತಿಯ ಕಡ್ಡಾಯ ಸಾಧ್ಯವೇ? - ಇಂತಹ ಹಲವು ವಾದಗಳು ಬೆಳೆಯುತ್ತವೆ, ಭಾಷೆ ಬೆಳೆಯುವುದಿಲ್ಲ.
ಒಂದು ಪ್ಲೈ ಓವರ್ ಮಾಡಲು ಯೋಜನೆ, ನೀಲನಕ್ಷೆ ತಯಾರಿಸುವ ನಾವು ನಮ್ಮ ಭಾಷೆ ಕನ್ನಡದ ಉಳಿವಿಗೆ ಬೆಳವಣಿಗೆಗೆ ಅಗತ್ಯ ನೀಲನಕ್ಷೆ ಏಕೆ ಮಾಡುವುದಿಲ್ಲ? ಇದರ ಅಗತ್ಯವಿದೆ. ಈ ವ್ಯಾವಹಾರಿಕ ನೀಲನಕ್ಷೆಯಲ್ಲಿ ಯಾವುದು ಇದೆ ಮತ್ತು ಇಲ್ಲ ಎಂಬುದನ್ನು ಮೊದಲು ಗುರುತಿಸಬೇಕು. ನಂತರ ಅದಕ್ಕಾಗಿ ಕಾರ್ಪಸ್ ಪ್ಲಾನಿಂಗ್ ರೂಪಿಸಬೇಕು. ಉನ್ನತ ಶಿಕ್ಷಣದಲ್ಲಿ ಕನ್ನಡವಿಲ್ಲ, ಅದಕ್ಕೆ ಜ್ಞಾನಕೋಶವನ್ನು ಕನ್ನಡದಲ್ಲಿ ಹುಟ್ಟುಹಾಕಬೇಕು. ಆಡಳಿತ ಭಾಷೆಯಾಗಿ ಕನ್ನಡ ಇಲ್ಲ; ಅದಕ್ಕೆ ಆದ್ಯತೆ ನೀಡುತ್ತೇವೆ ಎಂದು ತಿರ್ಮಾನಿಸಿ ನೀಲನಕ್ಷೆ ತಯಾರಿಸಬೇಕು. ಹೀಗೆ ಕಾರ್ಪಸ್ ಪ್ಲಾನ್ ಮೂಲಕ ಇದಿಷ್ಟನ್ನು ಆಗಲೇ ಬೇಕು ಎಂದು ನೀಲನಕ್ಷೆ ರೂಪಿಸಿ ಲಾಲಿ ಹಾಡಿನಿಂದ ವ್ಯಾವಹಾರಿಕ ಭಾಷೆಯವರೆಗೆ ಕನ್ನಡವನ್ನು ತರಬೇಕು. ಪ್ರೆಂಚರು ಇದನ್ನು ಬಹಳ ವ್ಯವಸ್ಥಿತವಾಗಿ ಮಾಡಿದ್ದಾರೆ.
ಚೀನಾದಲ್ಲಿ ಫೇಸ್‌ಬುಕ್, ವಾಟ್ಸಾಪ್, ಗೂಗಲ್, ಅಮೆಜಾನ್- ಇವುಗಳೆಲ್ಲ ಕೆಲಸ ಮಾಡುವುದಿಲ್ಲ. ಇವೆಲ್ಲವನ್ನೂ ಅವರು ಚೈನೀಸ್ ಭಾಷೆಯಲ್ಲಿಯೇ ಮಾಡಿಕೊಂಡಿದ್ದಾರೆ. ಈ ಟೆಕ್ನಾಲಜಿಗಳು ನಮಗೆ ಬೇಡವೇ? ಇವುಗಳನ್ನು ಹೇಗೆ ನಿರ್ಬಂಧಿಸುವುದು ಎಂದು ಕೇಳಬಹುದು. ಇವುಗಳನ್ನು ನಿಷೇಧಿಸಬೇಕೆಂದಲ್ಲ; ಬದಲಿಗೆ ಈ ಎಲ್ಲ ಸೌಲಭ್ಯಗಳೂ ನಮ್ಮ ಭಾಷೆಯಲ್ಲಿಯೇ ಸಿಗುವಂತಾಗಬೇಕು. ಇದನ್ನು ನಾವು ಹೇಳಿದರೆ ಸಾಧ್ಯವಾಗದು. ಇದು ಸಂಪೂರ್ಣ ಸಮಾಜದ ಚಿಂತನೆಯಾಗಬೇಕು. ನಮ್ಮ ಥಿಂಕ್ ಟ್ಯಾಂಕ್, ಓಪೀನಿಯನ್ ಮೇಕರ್ಸ್, ಸರ್ಕಾರ, ಅಧಿಕಾರಗಳು- ಈ ಎಲ್ಲ ಹಂತಗಳಲ್ಲೂ ಇದು ಬಂದಾಗ ಮಾತ್ರ ಏನಾದರೂ ಸಾಧ್ಯವಾಗುತ್ತದೆ. ಕನ್ನಡದ ಒತ್ತಡದ ಗುಂಪುಗಳು, ಲಾಬಿ ಸಂಘಟನೆಗಳು ಇದನ್ನು ಜನರ ತಲೆಯಲ್ಲಿ ತುಂಬಬೇಕು. ಇಲ್ಲವಾದರೆ ನಮ್ಮ ಜನರು, ಅಧಿಕಾರದಲ್ಲಿ ಕುಳಿತವರು, ಕನ್ನಡದ ಬಗೆಗಾಗಲೀ, ದೇಶದ ಬಗೆಗಾಗಲೀ, ಒಂದು ಮಾದರಿ ತರಬೇಕೆನ್ನುವುದನ್ನಾಗಲೀ ಯೋಚಿಸುವುದಿಲ್ಲ. ಸಾಲಮನ್ನಾ ಮಾಡೋಣ, ಉಚಿತ ಸೈಕಲ್ ನೀಡೋಣ, ಉಚಿತ ಊಟ ನೀಡೋಣ ಎನ್ನುತ್ತಿರುತ್ತಾರೆಯೇ ಹೊರತು ಇವುಗಳ ಕಡೆಗೆ ಗಮನ ಹರಿಸುವುದಿಲ್ಲ
ಭಾಷೆಯನ್ನು ಹಾಳು ಮಾಡುವುದರಲ್ಲಿ ಮಾಧ್ಯಮ ಪಾತ್ರ ದೊಡ್ಡದು ಎಂಬ ನಿಮ್ಮ ಅಭಿಪ್ರಾಯ ಸರಿ. ಜನರು ಬಳಸುವ ಭಾಷೆಯ ಮೇಲೆ ಮಧ್ಯಮಗಳು ಮಹತ್ತ್ವದ ಪ್ರಭಾವ ಬೀರುತ್ತವೆ. ಮಾಧ್ಯಮಗಳ ಭಾಷೆಯನ್ನು ಜನರು ಬಳಸುತ್ತಾ ಹೋಗುತ್ತಾರೆ. ಇತ್ತೀಚೆಗೆ ’ಮಠಾಶ್’ ಎಂಬ ಶಬ್ದ ಕೇಳಿಬರುತ್ತಿದೆ. ನಾನು ಯಾವ ಪುಸ್ತಕದಲ್ಲಿಯೂ ಇದನ್ನು ಓದಿಲ್ಲ, ನೋಡಿಲ್ಲ. ಇದು ಭಾಷೆಗಳೇ ಕೊಟ್ಟಿರುವ ಕೊಡುಗೆ. ಇತ್ತೀಚೆಗೆ ಕನ್ನಡಪ್ರಭದ ಮುಖಪುಟದ ಸಿಂಗಲ್ ಕಾಲಂ ನ್ಯೂಸ್‌ನಲ್ಲಿ ’ಸಿನಿಮಾ ಕ್ಷೇತ್ರಕ್ಕೆ ಎಂಟ್ರೀ ಕೊಟ್ಟ ಶ್ರೀದೇವಿಯ ಮಗಳು’ ಎಂಬ ಶೀರ್ಷಿಕೆಯೊಂದು ಪ್ರಕಟವಾಗಿತ್ತು. ’ಎಂಟ್ರಿ ಕೊಟ್ಟ’ ಎನ್ನುವುದು ಯಾವ ಭಾಷೆ, ಯಾವ ವ್ಯಾಕರಣ. ನನಗೆ ಹಾಗೂ ಆ ಶೀರ್ಷಿಕೆ ಕೊಟ್ಟ ಸಬ್ ಎಡಿಟರ್‌ಗೂ (ಕನ್ನಡದಲ್ಲಿ ತುಂಬಾ ಹಿಡಿತವಿರುವವರು) ಇದು ತಿಳಿದಿದೆ. ಆದರೆ ಗೊತ್ತಿಲ್ಲದೆಯೇ ಬಳಕೆಯಾಗಿದೆ. ಅದು ಟಿವಿ ಮಾದ್ಯಮದ ಪ್ರಭಾವ. ಅತಿಯಾದ ಬಳಕೆಯಿಂದಾಗಿ ಅದೇ ಸರಿ ಎನ್ನುವಂತಾಗಿದೆ. ಹೀಗಾಗಿ ಭಾಷೆಯ ವಿಕಾಸದಲ್ಲಿ ಮಾಧ್ಯಮದ ಕೊಡುಗೆ ಪ್ರಮುಖವಾದುದು.
ಇನ್ನೊಂದು ಮುಖವೂ ಇದೆ. ಮಾಧ್ಯಮಗಳಲ್ಲಿ ಶುದ್ಧವಾದ ಕನ್ನಡ, ಪರಿಶುದ್ಧ ವ್ಯಾಕರಣದಲ್ಲಿ ಕಾರ್ಯಕ್ರಮ ಮಾಡಿದರೆ ನಮಗೆ ಆಕಳಿಕೆ ಬರುತ್ತದೆ, ’ಇದು ನಮ್ಮ ಕಾಲದ್ದಲ್ಲ; ಹಳೆಯ ಜನರೇಷನ್, ನಮಗೆ ಕನೆಕ್ಟ್ ಆಗಲ್ಲ’ ಎಂದು ಚಾನಲ್‌ಗಳನ್ನು ಬದಲಿಸಿ ಹೊಸ ಶಬ್ದಗಳನ್ನು ಹಿಡಿದು ಬಾರಿಸುತ್ತಿರುವ ಇನನೊಂದು ಚಾನೆಲ್  ನೋಡುತ್ತೇವೆ. ಟಿವಿ ಹಾಗೂ ಮುದ್ರಣ ಮಾದ್ಯಮಕ್ಕಿಂತ ಹೆಚ್ಚಾಗಿ ಭಾಷೆಯನ್ನು ಕಲುಷಿತ ಮಾಡಿದ ಕೊಡುಗೆ ಎಪ್‌ಎಂ ರೇಡಿಯೋಗಳಿಗೆ ಸಲ್ಲುತ್ತದೆ. ’ಸಖತ್ ಹಾಟ್ ಮಗಾ’ ಎಂಬ ಘೋಷವಾಕ್ಯ ಸೃಷ್ಟಿಸಿದವರಿಗೆ ಅಲ್ಲಿ ಕೋಟಿಗಟ್ಟಲೆ ಹಣ ನೀಡಿ ಮಾರ್ಕೆಟ್ ಮಾಡುತ್ತಾರೆ. ವ್ಯಾವಹಾರಿಕತೆಗಾಗಿ ಭಾಷೆಯ ಮೇಲೆ ಮಾಡಿದ ಇಂತಹ ಸರ್ಕಸ್‌ಗಳನ್ನು ಜನರು ನೋಡದೇ ಹೊಗಿದ್ದರೆ ಯಾವ ಚಾನೆಲ್‌ನವರೂ, ಯಾವ ಜಾಹೀರಾತುದಾರರೂ ಇಂತಹದ್ದಕ್ಕೆ ಕೈ ಹಾಕುತ್ತಿರಲಿಲ್ಲ. ಆದರೆ ಅದು ಚೆನ್ನಾಗಿ ಕೆಲಸ ಮಾಡಿತು, ಎಲ್ಲರೂ ಸ್ವೀಕರಿಸಿದರು. ಮುಂದೆ ಡಬಲ್ ಹಾಟ್ ಮಗಾ ಬರಬಹುದು. ಜನರು ಸ್ವೀಕರಿಸುತ್ತಾ ಹೋದಂತೆ ಮಾದ್ಯಮಗಳು ಅದನ್ನೇ ಸರಿಯಾದುದು ಎಂದು ಅನುಸರಿಸುತ್ತಾ ಹೋಗುತ್ತವೆ. ಅದು ಒಚಿಡಿಞeಣಚಿbiಟiಣಥಿ. ನಮ್ಮ ಕೆಲವು ಕಾರ್ಯಕ್ರಮಗಳ ಕುರಿತು ಸಾರ್ವಜನಿಕರ ಆಪಾದನೆಗಳ ಬಗೆಗೆ ಎಲ್ಲ ಸಂಪಾದಕರುಗಳಿಗೂ ತಿಳಿದಿದೆ. ಅದರ ಅರಿವೂ ಇದೆ. ಆದರೆ ಇದನ್ನು ಟಿವಿ ಸ್ಟುಡಿಯೋದಲ್ಲಿ ಯಾಕೆ ಮಾಡುವುದಿಲ್ಲ ಎಂದು ಕೇಳಬಹುದು. ಇದು ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣ ಆದಂತೆ. ಅಲ್ಲಿರುವ ಬೀಷ್ಮ, ದ್ರೋಣರಿಗೆ, ಅಷ್ಟೇಕೆ ಸ್ವತಃ ದುರ್ಯೋದನನಿಗೆ ದ್ರೌಪದಿಯ ವಸ್ತ್ರಾಪಹರಣ ಮಾಡುವುದು ತಪ್ಪು ಎಂದು ಗೊತ್ತಿರಲಿಲ್ಲವೇ? ಗೊತ್ತಿತ್ತು. ಆದರೆ ಎಲ್ಲರೂ ಸುಮ್ಮನೆ ಕುಳಿತು ನೋಡುತ್ತಿದ್ದರು. ಯಾಕೆ? ಅದು ಆಗದಿದ್ದರೆ ಮಹಾಭಾರತ ಮುಂದೆ ಹೋಗುವುದಿಲ್ಲ! ಬರೆಯುವಾಗ ವ್ಯಾಸರಿಗೆ ಗೊತ್ತಿರಲಿಲ್ಲವೇ? ಇಂತಹದ್ದೊಂದು ಕೆಟ್ಟ ದೃಶ್ಯವನ್ನು ಯಾಕೆ ತರಬೇಕಾಗಿತ್ತು? ಒಳ್ಳೆಯದನ್ನೇ ತರಬಹುದಿತ್ತಲ್ಲವೇ? ಆದರೆ ಮಹಾಭಾರತ ನಡೆಯಬೇಕು, ಅದರಿಂದ ಇನ್ನೇನೊ ಸಂದೇಶ ಹೋಗಬೇಕು ಎಂದಾಗ ಅಂತಹದ್ದೊಂದನ್ನು ಸೃಷ್ಟಿ ಮಾಡುತ್ತಾರೆ. ಹೀಗೆ ಎಲ್ಲ ಸಂಪಾದಕರುಗಳಿಗೂ ಇದು ತಿಳಿದಿದೆ. ಆದರೆ ಕೊನೆಗೆ ಯಾವುದು ಟಿಆರ್‌ಪಿ ಬರುತ್ತದೋ ಅದನ್ನೇ ಎಲ್ಲ ಸಂಪಾದಕರುಗಳೂ ಮಾಡುತ್ತಾರೆ. ದುರ್ದೈವ ಟಿಆರ್‌ಪಿ ಬರುವುದು ಹೋಗುವುದು ಎಲ್ಲವೂ ಜನರ ಕೈಯಲ್ಲಿಯೇ ಇದೆ. ಜನರು ಅದನ್ನು ನೋಡದೇ ಹೋಗಿದ್ದರೆ ಇದನ್ನು ಯಾರೂ ಮಾಡುತ್ತಿರಲಿಲ್ಲ. ಜನರು ನೋಡುತ್ತಾರೆ ಎನ್ನುವ ಕಾರಣಕ್ಕಾಗಿಯೇ ಎಲ್ಲ ಸಂಪಾದಕರುಗಳು ಅದನ್ನೇ ಮಾಡುತ್ತಾರೆ. ಈಗಿನ ಪರಿಸ್ಥಿತಿ ಹೇಗಿದೆಯೆಂದರೆ, ಒಂದು ಚಾನೆಲ್‌ನವರು ಶರ್ಟ್ ಬಿಚ್ಚಿದರೆ ಇನ್ನೊಂದು ಚಾನೆಲ್‌ನವರು ಟಿಆರ್‌ಪಿ ಬೇಕೆಂದರೆ ಶರ್ಟ್ ಬಿಚ್ಚಿದರೆ ಸಾಕಾಗುವುದಿಲ್ಲ, ಪ್ಯಾಂಟನ್ನೇ ಬಿಚ್ಚಬೇಕು! ಈ ಸ್ಪರ್ಧೆಯಿಂದ ಮಾಧ್ಯಮಗಳು ಈ ಸ್ಥಿತಿಗೆ ಹೋಗಿವೆ. ಇದು ಮಾರುಕಟ್ಟೆಯ ಸೆಳೆತ.
ಕನ್ನಡದ ಮಾಧ್ಯಮಗಳು ಸರಿಯಾಗಬೇಕೆಂದರೆ ಮಲಯಾಳಂನಲ್ಲಿ ನಡೆದಂತೆ ನಮ್ಮಲ್ಲೂ ಪ್ರಯತ್ನಗಳು ಆಗಬೇಕು. ಹಿಂದೆ ಮಲಯಾಳಿ ಸಿನಿಮಾಗಳ ಬಗೆಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅವಳ ರಾತ್ರಿಗಳು, ಮೂರು ರಾತ್ರಿ ಎರಡು ಹಗಲು - ಈ ರೀತಿಯ x gಡಿಚಿಜe ಸಿನಿಮಾಗಳೇ ಇದ್ದವು. ಆ ಸಂದರ್ಭದಲ್ಲಿ ೫ ಜನ ಮಲಯಾಳಂ ನಿರ್ದೇಶಕರು ’ನಾವು ಮಾಡಬೇಕಾಗಿರುವುದು ಇದಲ್ಲ. ನಾವೇನಾದರೂ ವಿಶಿಷ್ಟವಾದುದನ್ನು, ಹೊಸದಾದುದನ್ನು ಮಾಡಬೇಕು’ ಎಂದು ನಿರ್ಧರಿಸಿದರು. ಈಗಿರುವುದನ್ನು ಬಿಟ್ಟು ಮುಂದೆ ಹೋಗಬೇಕು ಎಂದು ಚಿಂತಿಸಿದರು. ಮಲಯಾಳಂನಲ್ಲಿ ಇಂದಿಗೂ ಒಂದು ಸಂಪ್ರದಾಯವಿದೆ. ಬೇರೆ ಬೇರೆ ಕ್ಷೇತ್ರದ ಜನರು ಒಂದು ವಾರವೋ ಹತ್ತು ದಿನವೋ ಅಜ್ಞಾತ ಸ್ಥಳವೊಂದಕ್ಕೆ ಹೊರಟುಹೋಗುತ್ತಾರೆ. ಸಾರ್ವಜನಿಕರಿಗೆ ಸಿಗದೇ ಮೊಬೈಲ್ ಇನ್ನಿತರ ಸಂಪರ್ಕ ಸಾಧನಗಳಿಂದ ದೂರವಾಗಿ ಒಂದಷ್ಟು ದಿನ ಅಜ್ಞಾತವಾಗಿದ್ದು ಚಿಂತನೆ ನಡೆಸುತ್ತಾರೆ. ಆ ಚಿಂತನೆಯಲ್ಲಿ ಸಿಗುವ ಕಾರ್ಯಸೂಚಿಯನ್ನು ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇತ್ತೀಚೆಗೆ ವಿವೇಕ್ ಶಾನುಭಾಗ್ ಅವರು ಇದನ್ನು ಹೇಳಿದಾಗ ಇಂದು ಇಂದಿಗೂ ಮುಂದುವರಿದಿದೆ ಎಂದು ತಿಳಿದು ಆಶ್ಚರ್ಯವಾಯಿತು. ವಿವೇಕ್ ಶಾನುಭೋಗ್ ಹಾಗೂ ೧೧ ಜನ ಒಂದು ಹಿನ್ನಿರಿನ ರೆಸಾರ್ಟ್‌ಗೆ ಹೋಗಿ, ನಮ್ಮ ಸಾಹಿತ್ಯ ಎಲ್ಲಿದೆ? ಯಾವ ದಿಕ್ಕಿಗೆ ಹೋಗಬೇಕು? ಈಗ ತಾತ್ಕಾಲಿಕವಾಗಿ ಏನು ಮಾಡುವುದು? ಹೇಗೆ? ಇದರಲ್ಲಿ ಗುಣಮಟ್ಟ ಉಳಿಸಿಕೊಳ್ಳುವುದು ಹೇಗೆ?- ಇಂತಹ ಚಿಂತನೆಗಳನ್ನು ಮಾಡಿದರು. ಅದನ್ನು ತಂದು ತಮ್ಮ ಬರಹಗಳಲ್ಲಿ ಪ್ರತಿಫಲಿಸುವ ಪ್ರಯತ್ನ ನಡೆಸುತ್ತಾರೆ. ಅದೇ ರೀತಿಯಲ್ಲಿ ಸಿನಿಮಾಗಳಲ್ಲಿ ಯಾವ ರೀತಿ ಕಥೆಗಳನ್ನು ತರಬೇಕು, ಯಾವ ಚಿತ್ರಗಳನ್ನು ಹೊರತರಬೇಕು, ವಿಶ್ವದ ಚಿತ್ರಗಳ ಜೊತೆಗೆ ಹೇಗೆ ಸ್ಪರ್ಧಿಸಬೇಕು? - ಎಂಬ ಚಿಂತನೆ ನಡೆಸಿ ಚಿತ್ರಗಳನ್ನು ತಯಾರಿಸುತ್ತಾರೆ. ಇದರಿಂದಾಗಿ ಇಂದು ಮಲಯಾಳಂನಲ್ಲಿ ಎಂತೆಂತಹ ಸಧಭಿರುಚಿಯ ಚಿತ್ರಗಳು ಬರುತ್ತಿವೆ. ನಮ್ಮ ಕೆಜಿಎಫ್ ಕರ್ನಾಟಕದಲ್ಲಿ ಗಳಿಸಿದಷ್ಟು ಮಲಯಾಳಂನಲ್ಲಿ ಗಳಿಸಿಲ್ಲ. ಆದರೆ ಅಲ್ಲಿಯ ಒಂದು ಸಿನಿಮಾ ಕನ್ನಡದಲ್ಲಿ ರೀಮೆಕ್ ಮಾಡುವಂತಹ ಸ್ಥಿತಿಗೆ ಅವರು ತಲಪಿದ್ದಾರೆ. ಇಂದು ಅಲ್ಲಿಯ ಸಿನಿಮಾಗಳು ಬೇರೆ ಕಡೆಗೂ ಸ್ಪೂತಿಯಾಗುತ್ತಿವೆ. ಇದು ಯಾಕೆಂದರೆ ಆ ಕ್ಷೇತ್ರದ ತಜ್ಞರು ನಾವು ಹೋಗಬೇಕಾದ ದಾರಿ ಹೀಗಲ್ಲ. ನಾವು ದಾರಿ ತಪ್ಪಿದ್ದೇವೆ. ಅದನ್ನು ಇಲ್ಲಿಗೆ ತರಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಕಮರ್ಷಿಯಲೈಜೇಷನ್ ಏನೇ ಆಗಿರಲಿ. ಸರಿದಾರಿಗೆ ತೆಗೆದುಕೊಂಡು ಬರೋಣ ಎಂದು ಯೋಚಿಸಿ, ಯೋಜನೆ ತಯಾರಿಸಿ, ಅಗತ್ಯ ಸೂಚಿಗಳನ್ನಿಟ್ಟುಕೊಂಡು, ಅವುಗಳನ್ನು ಪಾಲಿಸುತ್ತಾ ಮುಂದೆ ಹೋಗುತ್ತಾರೆ.
ಇದು ಕನ್ನಡದಲ್ಲಿಯೂ ಆಗಬೇಕಾಗಿದೆ. ಅದಕ್ಕೆ ಹಲವು ಸಮಸ್ಯೆಗಳಿವೆ. ದುರ್ದೈವಕ್ಕೆ ನಮ್ಮ ಎಲ್ಲ ಸಂಪಾದಕರುಗಳು ಒಂದು ಕಡೆ ಸೇರುವುದು ಕಷ್ಟ. ಇಬ್ಬರು ಸಂಪಾದಕರು ಒಂದೆಡೆ ಸೇರಿ ಒಟ್ಟಿಗೆ ಕುಳಿತು ಈ ರೀತಿಯ ಚಿಂತನೆ ಮಾಡುವುದು ಬಹಳ ಕಷ್ಟ. ಅವನು ಮಾಡಿದರೆ ಮಾಡಿಕೊಳ್ಳಲಿ ಬಿಡು ನಾನು ಮಾಡಲ್ಲ ಎಂದರೆ ಅದರ ಅನುಷ್ಠಾನ ಹೇಗೆ ಸಾಧ್ಯ? ಇಷ್ಟೆಲ್ಲ ಹೇಳುವ ನೀವೇ ಮುಂಚೂಣಿಯಲ್ಲಿ ನಿಂತು ನಿಮ್ಮ ಪತ್ರಿಕೆ, ಚಾನೆಲ್‌ನಲ್ಲಿ ಮಾಡಿ ಬದಲಾವಣೆಯ ಹರಿಕಾರರಾಗಿ ಎಂದರೆ ಇಂದು ಅದು ಕಾರ್ಯಸಾಧುವಲ್ಲ. ಇದು ಜಿಎಸ್‌ಟಿಯನ್ನು ಅನುಷ್ಠಾನಗೊಳಿಸಿದಂತೆ. ಕರ್ನಾಟಕದಲ್ಲಿ ಜಿಎಸ್‌ಟಿ ತಮಿಳುನಾಡಿನಲ್ಲಿ ವ್ಯಾಟ್, ಗೋವಾದಲ್ಲಿ ಇನ್ನೊಂದು ಎಂದರೆ ಅದು ಸಫಲವಾಗುವುದಿಲ್ಲ. ಯಾಕೆಂದರೆ ಜಿಎಸ್‌ಟಿ ಒಂದು ತೆರಿಗೆ ಪದ್ಧತಿ. ಅದು ಇಡೀ ದೇಶದಲ್ಲಿ ಏಕರೂಪದಲ್ಲಿರಬೇಕು. ಆಗ ಮಾತ್ರ ಅದು ಸರಿದಾರಿಯಲ್ಲಿ ಹೋಗುತ್ತದೆ. ಕರ್ನಾಟಕದಲ್ಲಿ ೩೬% ಟ್ಯಾಕ್ಸ್, ತಮಿಳುನಾಡಿನಲ್ಲಿ ೨೮% ಎಂದರೆ ನಮ್ಮ ಸಂಪೂರ್ಣ ಆರ್ಥಿಕತೆ ತಮಿಳುನಾಡಿಗೆ ಸ್ಥಳಾಂತರಗೊಳ್ಳುತ್ತದೆ. ಕರ್ನಾಟಕದಲ್ಲಿ ಡಾಲರ್, ತಮಿಳುನಾಡಿನಲ್ಲಿ ರೂಪಾಯಿಯಲ್ಲಿ ವ್ಯವಹಾರ ಎಂದಂತೆ. ಎಲ್ಲರಿಗೂ ಸಮಾನವಾದ ವ್ಯವಸ್ಥೆ ಇರಬೇಕು. ಹೀಗಾಗಿ ನಮ್ಮ ಮಾಧ್ಯಮಗಳಲ್ಲಿ ಏಕರೂಪದ ಕಾರ್ಯಚಿಂತನೆ (Uಟಿiಜಿoಡಿm uಟಿಜeಡಿsಣಚಿಟಿಜiಟಿg) ಬರದಿದ್ದಲ್ಲಿ ಈ ಸಮಸ್ಯೆ ಪರಿಹಾರ ಕಾಣುವುದಿಲ್ಲ. ಮುಂದೆಯೂ ನೀವು ತೆಗಳುತ್ತಿರುತ್ತೀರಿ, ನಾವು ಚೆನ್ನಾಗಿ ತೆಗಳಿದವರಿಗೆ ಬಹುಮಾನ ನೀಡುತ್ತಲೇ ಇರುತ್ತೇವೆ. ಇದು ಆಗದಿರಲಿ.
ಪ್ರತಿಭಾವಂತರು ಪತ್ರಿಕೋದ್ಯಮಕ್ಕೆ ಬರಬೇಕು, ಮುಖ್ಯವಾಗಿ ಕ್ನನಡ ಪತ್ರಿಕೋದ್ಯಮಕ್ಕೆ. ನಿಮ್ಮ ವಯಸ್ಸಿನಲ್ಲಿ ನನಗೂ ಇಂಗ್ಲಿಷ್ ಮಾಧ್ಯಮದ ಕಡೆಗೆ ಹೋಗುವ ಅವಕಾಶವಿತ್ತು. ಇಂದಿನ ಟೈಮ್ಸ್ ಆಫ್ ಇಂಡಿಯಾ, ಇಕನಾಮಿಕ್ ಟೈಮ್ಸ್‌ಗೆ ಹೋಗುವ ಅವಕಾಶವಿತ್ತು. ಆದರೆ ನನ್ನ ಮೆಂಟರ್ ವೈಯೆನ್ಕೆ ಹಾಗೂ ಕೆ. ಸತ್ಯನಾರಾಯಣ ಅವರು ’ಬೇಡ. ನಿಮ್ಮಂತಹ ಸ್ವಲ್ಪ ಭರವಸೆ ಮೂಡಿಸುವಂತಹ ಪತ್ರಕರ್ತರು ಕನ್ನಡ ಪತ್ರಿಕೋದ್ಯಮದಲ್ಲಿ ಇರಬೇಕು. ಇಂಗ್ಲಿಷ್‌ನಲ್ಲಿ ನೀವು ಒಂದು ಲಕ್ಷ ಪತ್ರಕರ್ತರಲ್ಲಿ ಒಬ್ಬರಾಗಿರುತ್ತೀರಿ, ಕನ್ನಡದಲ್ಲಿದ್ದರೆ ನೀವು ಒಬ್ಬರಲ್ಲಿ ಒಬ್ಬರು ಅಥವಾ ಹತ್ತರಲ್ಲೊಬ್ಬರೋ ನೂರರಲ್ಲೋಬ್ಬರೋ ಆಗಿರುತ್ತೀರಿ. ಹೀಗಾಗಿ ನೀವು ಕನ್ನಡದಲ್ಲಿಯೇ ಇರಬೇಕು’ ಎಂದರು. ಆ ಮಾತನ್ನು ಒಪ್ಪಿ ಕನ್ನಡ ಪತ್ರಿಕೋದ್ಯಮದಲ್ಲಿ ಉಳಿದೆ. ೧೯೯೮-೯೯ರ ಹೊತ್ತಿಗೆ ನನಗೆ ಇಂಟರ್‌ನೆಟ್ ಬಗೆಗೆ ಆಸಕ್ತಿ ಹೆಚ್ಚಾಗಿತ್ತು. ಆಗಷ್ಟೆ (೧೯೯೭-೯೮) ಕನ್ನಡಪ್ರಭವನ್ನು ಇಂಟರ್‌ನೆಟ್‌ಗೆ ತೆಗೆದುಕೊಂಡು ಬರಲಾಗಿತ್ತು. ನಾನೇ ಯಾಕೆ ಒಂದು ಇಂಟರ್‌ನೆಟ್‌ನ್ನು ಡೆವಲೆಪ್ ಮಾಡಬಾರದೆನಿಸಿ, ಎಜುಕೇಷನ್ ಬೆಂಗಳೂರು ಡಾಟ್ ಕಾಮ್ ಎಂಬ ವೆಬ್‌ಸೈಟನ್ನು ರೂಪಿಸಲು ನಿರ್ಧರಿಸಿದೆ. ಎಜುಕೇಷನ್ ಯಾವಾಗಲೂ ಬೆಳೆಯುವ ಉದ್ಯಮ. ಅದರಲ್ಲಿ ಯಾವತ್ತೂ ಹಿನ್ನಡೆಯಾಗುವುದಿಲ್ಲ. ಯಾಕೆಂದರೆ ಜನಸಂಖ್ಯೆ ಉತ್ಪಾದನೆಯಾದಂತೆ ಶಾಲೆಗೆ ಬರಲೇಬೇಕು. ಸಂಖ್ಯೆ ಹೆಚ್ಚಿದಂತೆ ಶಾಲೆಗಳೂ ಹೆಚ್ಚಾಗಿ ಅವುಗಳ ನಡುವೆ ಸ್ಪರ್ಧೆಗಳು ಏರ್ಪಡುತ್ತವೆ. ಸ್ಪರ್ಧೆ ಹೆಚ್ಚಾದಂತೆ ಜಾಹಿರಾತುಗಳು ಬರುತ್ತದೆ ಎಂದು ನಿರ್ಧರಿಸಿ ನಾನು ರಾಜಿನಾಮೆ ನೀಡಲು ಟಿ.ಜೆ. ಜಾರ್ಜ್ ಅವರಲ್ಲಿಗೆ ಹೋದೆ. ಜಾಜ್ ಅವರು ಇಂದಿಗೂ ಇಂಡಿಯನ್ ಎಕ್ಸ್‌ಪ್ರೆಸ್ ಗುಂಪಿನ ಸಲಹೆಗಾರರಾಗಿದ್ದಾರೆ. ಏಷ್ಯಾ ವೀಕ್‌ನ್ನು ಸ್ಥಾಪಿಸಿದವರು ಕೂಡಾ ಅವರೇ. ಆಗ ಕನ್ನಡ ಪ್ರಭದಲ್ಲಿ ವೈಯೆನ್ಕೆ ಇರಲಿಲ್ಲ. ಸತ್ಯ ಅವರೂ ಆಗಷ್ಟೇ ನಿವೃತ್ತರಾಗಿದ್ದರು. ವೆಂಕಟನಾರಾಯಣ ಅವರು ನಿವೃತ್ತಿಯ ಅಂಚಿನಲ್ಲಿದ್ದರು. ನನಗೆ ಮತ್ತು ಎಚ್.ಆರ್. ರಂಗನಾಥ್ ಅವರಿಗೆ ಜಾರ್ಜ್ ’ನೀವು ಕನ್ನಡ ಪತ್ರಿಕೋದ್ಯಮದಲ್ಲಿ ಉಳಿಯಬೇಕು’ ಎಂದರು. ನಾವು ಹಿಂದೆ ನೋಡದೇ ನಮ್ಮ ರಾಜಿನಾಮೆ ಪತ್ರವನ್ನು ಹರಿದುಹಾಕಿ ಕನ್ನಡಪ್ರಭದಲ್ಲಿಯೇ ಉಳಿದುಕೊಂಡೆವು. ಈ ಬಗ್ಗೆ ನಮಗೆ ಬೇಸರವಿಲ್ಲ. ಮಾಧ್ಯಮ ಕ್ಷೇತ್ರದ ಘನತೆವೆತ್ತವರು ಕುಳಿತಿರುವ ಸ್ಥಾನದಲ್ಲಿ ನಾವಿಂದು ಕುಳಿತಿದ್ದೇವೆ ಎಂಬ ಹೆಮ್ಮೆಯಿದೆ. ಅವರು ಹಾಕಿಕೊಟ್ಟ ಅವಕಾಶ, ಆದರ್ಶಗಳನ್ನಿಟ್ಟುಕೊಂಡು ಹೋಗಬೇಕೆನ್ನುವ ಆಂತರಿಕ ಒತ್ತಡ ಕೂಡಾ ನಮಗಿದೆ. ಅದಕ್ಕೆ ನಿಮ್ಮಂತಹ ಪ್ರತಿಭಾವಂತರು ಬಂದರೆ ನಮ್ಮ ಕೆಲಸ ಇನ್ನಷ್ಟು ಸುಲಭವಾಗುತ್ತದೆ. ನೀವು ಬರವಣಿಗೆಯಲ್ಲಿ, ಮಾತಿನಲ್ಲಿ, ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಉತ್ತಮವಾಗಿದ್ದಲ್ಲಿ ದಯವಿಟ್ಟು ಮಾಧ್ಯಮ ಕ್ಷೇತ್ರದಲ್ಲಿ, ಮುಖ್ಯವಾಗಿ ಕನ್ನಡದಲ್ಲಿ ಕೆಲಸ ಮಾಡಿ.

ನೀವು ಇಂದು ಮಾಡಿರುವ ಪ್ರಯೋಗ ವಿಶಿಷ್ಟವಾದುದು. ನೀವು ಲೇಖನಗಳನ್ನು ಬರೆದಿದ್ದೀರಿ, ಅದನ್ನು ಡಿಜಿಟಲ್ ಮಿಡಿಯಾದಲ್ಲಿ ಪಿಪಿಟಿಯಾಗಿ ಪರಿವರ್ತಿಸಿದ್ದೀರಿ, ಅದನ್ನು ವಿವರಿಸುವ ಮೂಲಕ ಟೆಲಿವಿಷನ್ ಮೀಡಿಯಾವನ್ನೂ ಬಳಸಿದ್ದೀರಿ. ಈ ಮೂರೂ ಮಾದ್ಯಮಗಳನ್ನು ಜೋಡಿಸುವ ಉತ್ಥಾನ ಮಾಸಪತ್ರಿಕೆಯ ಪ್ರಯೋಗ ಉತ್ತಮ ಹಾಗೂ ವಿಶಿಷ್ಟವಾದುದು. ಶುಭಾಶಯಗಳು ನಿಮ್ಮಲ್ಲಿ ಪ್ರತಿಭಾವಂತರಿಗೆ ನಮ್ಮಲ್ಲಿ ಕೆಲಸ ಗ್ಯಾರಂಟಿ ಎಂದು ನಾನು ಭರವಸೆ ನೀಡುತ್ತೇನೆ. ನಮಸ್ಕಾರ.