Saturday, 28 April 2012

ಸಚಿನ್ ರಾಜಕಾರಣಿಯಾಗುವುದು ಅದೇಷ್ಟು ಸರಿ!


   ಕ್ರೀಕೇಟ್ ದೇವರು ಪಕ್ಷರಾಜಕಾರಣಕ್ಕಿಳಿಯುವುದು.....?   
         ಸಚಿನ್ ತೆಂಡೂಲ್ಕರ್ ಕ್ರೀಕೆಟ್ ದೇವರೆಂದೇ ಭಾರತೀಯ ಜನಮಾನಸದಲ್ಲಿ ಅಚ್ಚೊತ್ತಿದ್ದಾರೆ. ಸಚಿನ್ ಮತ್ತು ಕ್ರೀಕೆಟ್ ಭಾರತೀಯರ  ಮಟ್ಟಿಗೆ ಒಂದೇ ಎನ್ನುವಷ್ಟರ ಮಟ್ಟಿಗೆ ಅವರು ಅದರಲ್ಲಿ ಸಮ್ಮಿಳಿತಗೊಂಡಿದ್ದಾರೆ. ಸಚಿನ್ನ ದಾಖಲೆಗಳನ್ನೂ  ಅವರ ಒಂದೊಂದು ಸಿಕ್ಸರ್, ಶತಕಗಳನ್ನೂ ಹೋರಾಟಗಾರನೊರ್ವನ ಶೌರ್ಯ ಸಾಹಸಗಳಂತೆಯೋ ಶತ್ರುಸೈನಿಕರ ವಿರುದ್ಧ ಹೊರಾಡಿದ ವೀರ ಯೋಧನಂತೆಯೋ ಭಾವಿಸಿ ಎದೆಯುಬ್ಬಿಸಿ ಕೇಳುತ್ತೇವೆ, ನಾನೂ ಹಾಗಾಗಬೇಕೆಂದು ಕನಸು ಕಾಣುತ್ತೇವೆ. ನಮಗೆ ಸಚಿನ್ ಅಂದರೆ ಕ್ರೀಕೆಟ್ ನೆನಪಾಗುತ್ತೆ, ಕ್ರೀಕೆಟ್ ಅಂದರೆ ಸಚಿನ್ 
 ನೆನಪಾಗುತ್ತಾರೆ. ನಮಗೆ ಸಚಿನ್  ಅಷ್ಟು ಹತ್ತಿರವಾಗಿದ್ದಾರೆ.
       ಆದರೆ ಇಂದು ರಾಜಕಾರಣದಲ್ಲಿ  ಸಜ್ಜನರಿಗೆ ಬೆಲೆಯಿಲ್ಲ. ಸಜ್ಜನರಿದ್ದರೂ ಅವರೆಲ್ಲ ಅಸಹಾಯಕರಂತೆ ತೆಪ್ಪಗೆ ಸೀಟುಬಿಸಿ ಮಾಡಿಕೊಂಡಿರಬೇಕಾದ ಪರಿಸ್ಥಿತಿ ರಾಜಕೀಯದಲ್ಲಿದೆ.  ದೇಶದ ಲೋಟಿಗೋರರ ಆಶ್ರಯತಾಣಗಳಂತೆೆ ಅವರು ನಡೆದುಕೊಳ್ಳುತ್ತಿದ್ದಾರೆ. ಒಬ್ಬರಿಗಿಂತ ಇನ್ನೊಬ್ಬರು ತಾವು ಕಡಿಮೆಯಿಲ್ಲವೆನುವಂತೆ ಹಗರಣ, ಕೋಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳಲ್ಲಿ ಪಾಲುದಾರರಾಗಿದ್ದಾರೆ.  ಅವರ ಅನೀತಿಯ  ವಿರುದ್ಧ ಜನಸಾಮಾನ್ಯರು ಆಕ್ರೌಶ ವ್ಯಕ್ತಪಡಿಸುವುದನ್ನು ಸಂವಿಧಾನ ವಿರೋಧಿ  ಎಂದು ಎಂದು ಹಣೆಪಟ್ಟಿ ಹಚ್ಚಿ ಹಕ್ಕುಚ್ಯುತಿ ಮಂಡಿಸುವ ಮೂಲಕ ಅವರ ಬಗೆಗೆ ಮಾತನಾಡುವವರ ಮಟ್ಟಹಾಕಲು ಹೊರಟಿದ್ದಾರೆ. ಎಲ್ಲಿಯೂ ಸಲ್ಲದವರಿಗೆ,  ಹಣಗಳಿಕೆಗೆ ಚಪಲದವರ ಕಾರ್ಯಕ್ಷೇತ್ರವಾಗಿ ರಾಜಕಾರಣ ಎಂಬ ಮನೋಭಾವ ಜನಮಾನಸದಲ್ಲಿ ಮೂಡುತ್ತಿದೆ. ಇಂತಹ ಕ್ಷೇತ್ರಕ್ಕೆ ಸಚಿನ್?
         ದೇವರೆಂದೂ ಪಕ್ಷಪಾತಿಯಲ್ಲ, ಅವನು ಸರ್ವರಿಗೂ ಆರಾಧ್ಯ. ಅವನೊಂದು ಚೌಕಟ್ಟಿಗೆ ಸೀಮಿತವಾದರೆ? ಅವನ ಭಕ್ತರು ಜಾತಿ, ಮತದ ಹೇಸರು ಹೇಳಹೋರಟರೆ? ತನ್ನ ಮನಃಸಾಕ್ಷಿಗೆ ವಿರುದ್ಧವಾಗಿದ್ದರೂ ಪಕ್ಷದ ಕಾನೂನಿನಿಗೆ ತಲೆಬಾಗುವವರಾದರೇ? ದೇವರು, ದೇವರಾಗಿ ಉಳಿದಾನೆ? ಅದನ್ನು ಭಕ್ತರು ಒಪ್ಪಯಾರೇ?
          ಕ್ರೀಕೆಟಿಗರು, ಸಿನಿಮಾ ತಾರೆಯರು ರಾಜಕೀಯಕ್ಕಿಳಿದು ಸಾಧಿಸಿದ್ದು ಅಷ್ಟಕಷ್ಟೆ. ಬದಲಿಗೆ ಕಳೆದುಕೊಂಡದ್ದೆ ಅಧಿಕವೇನೋ (ಕ್ಷಮಿಸಿ, ಹಣ ಮಾಡಿರಬಹುದು!). ಸಚಿನ್ ದಾಖಲೆಗಳ ಸರದಾರ, ಶತಕದ  ಮಹಾಶತಕ ಗಳೀಸಿದ ಜಗದ್ವಿಖ್ಯಾತ, ಲಿಟ್ಲ್ಮಾಸ್ಟರ್ ಶತಶತಕ....ದಂತಹ ಹೊಗಳಿಕೆಯ ಮುಂದೆ ಮಾಜಿ ರಾಜಕಾರಣಿ ಎಂಬ ಹೇಸರು ಕುಬ್ಜವಲ್ಲವೇ? ಸಚಿನ್ ರಾಜಕಾರಣಿಯಾಗಿ ಸಾಧಿಸಬೇಕಾದದ್ದಾದರೂ ಎನು? ಅವರು ಮುಂಪೀಳಿಗೆಯ ಕ್ರೀಕೆಟಿಗರಿಗೊಬ್ಬ ಮಾರ್ಗದರ್ಶಿಯಾಗಿ, ಗುರುವಾಗಿ ಬಾಳಬೇಕೇ ಹೋರತು ಒಂದು ಪಕ್ಷಕ್ಕೆ ಗಂಟುಬಿಳುವುದು ಅದೇಷ್ಟು ಸರಿ ಸಚಿನ್? - ಎಂಬುದು ಅಬಿಮಾನಿಯೋರ್ವನ ಗೊಂದಲ!  

                                                                                      
                                                                               

No comments:

Post a Comment